Explain: ಬಸವಾದಿ ಶರಣರ ವಚನಗಳು ನಮ್ಮ ಬದುಕಿನಲ್ಲಿ ಪಚನವಾಗಬೇಕು ಅವು ಪಚನವಾದರೆ ಕದನ ಇರುವುದಿಲ್ಲ – ಬಸವಪ್ರಭು ಸ್ವಾಮಿಜಿ

ದಾವಣಗೆರೆ: ( Explain) ಆಧುನಿಕ ಸಮಾಜದಲ್ಲಿ ಆಸ್ತಿಗಾಗಿ , ಹಣಕ್ಕಾಗಿ , ಅಧಿಕಾರಕ್ಕಾಗಿ , ಜಾತಿಗಾಗಿ , ಧರ್ಮಕ್ಕಾಗಿ ಕದನಗಳು ಹೆಚ್ಚಾಗಿವೆ. ಈ ಸಮಸ್ಯೆಗಳನ್ನು ಕಿತ್ತು ಹಾಕಲು ವಚನಗಳ ಅನುಷ್ಠಾನ ಮಾಡಬೇಕು.ಈಗಿನ ದಿನದಲ್ಲಿ ದೇಶ ದೇಶಗಳ ಯುದ್ದ , ಕದನಕ್ಕೆ ವಿರಾಮ ನೀಡಲು ವಚನಗಳು ಬೇಕು.
ಬಸವಾದಿ ಶರಣರ ವಚನ ನಮಗೆ ಪಚನವಾದರೆ ಕದನ ಇರುವುದಿಲ್ಲ. ಬದಲಾಗಿ ಸ್ವರ್ಗ ನಿರ್ಮಾಣವಾಗುತ್ತದೆ.
ಸತ್ತ ನಂತರ ಮಾನವು ಸ್ವರ್ಗ ನರಕವನ್ನು ಕಾಣುವುದಿಲ್ಲ . ಮಾನವನು ಜೀವಂತವಾಗಿರುವಾಗ ಸ್ವರ್ಗ ನರಕವನ್ನು ನಿರ್ಮಿಸಿಕೊಳ್ಳಲು ಸಾಧ್ಯ ಎಂಬುದನ್ನು ಬಸವಣ್ಣನವರ ವಚನವು ಆಚಾರವೇ ಸ್ವರ್ಗ , ಅನಾಚಾರವೇ ನರಕ ಹೇಳುತ್ತದೆ. ಹಾಗಾಗಿ ವಚನಗಳು ಓದುವುದು ಅಷ್ಟೇ ಅಲ್ಲದೇ ನಾವು ಬದುಕಿನಲ್ಲಿ ಅನುಷ್ಠಾನ ಮಾಡಬೇಕು ವಚನಗಳನ್ನು ಪಾಲಿಸಿದಾಗ ನಮಗೆ
ವಚನಗಳಲ್ಲಿರುವ ಅರಿವು ಆಚಾರ ಅನುಭಾವದಿಂದ ವ್ಯಕ್ತಿಯ ವ್ಯಕ್ತಿತ್ವದಲ್ಲಿ ಬದಲಾವಣೆ , ಜೀವನದಲ್ಲಿ ಸುಧಾರಣೆ , ಮನೆಯಲ್ಲಿಯ ಸಂಸ್ಕಾರಗಳ ಬೆಳವಣಿಗೆ ,ತನ್ಮೂಲಕ ಸಮಾಜದಲ್ಲಿ ಪರಿವರ್ತನೆ ಸಾಧ್ಯ.
ಬದುಕಿಗೆ ಮುಖ್ಯವಾಗಿ ಸಮಾಧಾನ ಸಿಗುತ್ತದೆ ನಮ್ಮ ಜೀವನ ಶ್ರೇಷ್ಠವಾಗಲು ಸಾಕು ಒಂದೇ ಒಂದು ವಚನ ಕಳಬೇಡ , ಕೊಲಬೇಡ , ಹುಸಿಯ ನುಡಿಯಲು ಬೇಡ , ಅನ್ಯರಿಗೆ ಅಸಹ್ಯ ಪಡಬೇಡ , ತನ್ನ ಬಣ್ಣಿಸಬೇಡ , ಅನ್ಯರಿಗೆ ಅಸಹ್ಯ ಪಡಬೇಡ ಈ ಸಪ್ತಶೀಲ ವಚನ ಪಾಲಿಸಿದರೆ ಸಾಕು ಬದುಕು ದಿವ್ಯ ವಾಗುವುದು , ಭವ್ಯವಾಗುತ್ತದೆ.
ಬಸವಾದಿ ಶರಣರ ವಚನಗಳನ್ನು ಆಚರಣೆ ಮಾಡಿದರೆ ಸಮಾಜದಲ್ಲಿರುವ ಜಾತಿಭೇಧ , ವರ್ಣಭೇಧ , ವರ್ಗಭೇಧ , ಲಿಂಗ ಭೇಧ , ವಯೋಭೇಧಗಳು ನಿವಾರಣೆಯಾಗಿ ಸಮಾನತೆಯ ಸಮಾಜವನ್ನು ಕಟ್ಟಲು ಸಾಧ್ಯವಾಗುವುದು.