ಹರ್ಷ ಹತ್ಯೆಗೆ ಸ್ಪೋಟಕ ತಿರುವು.! ‘ವೀಡಿಯೋ ಕರೆ’ ಮಾಡಿದ್ದ ಯುವತಿಯರ ಸುಳಿವು ಪತ್ತೆ.!?

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆ ( Harsha Murder Case ) ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತೆಯರಾದ ಯುವತಿಯರ ವೀಡಿಯೋ ಕರೆಯೇ ಕಾರಣ ಎಂಬುದಾಗಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದರು. ಈ ಬೆನ್ನಲ್ಲೇ ಹರ್ಷ ಬಳಕೆ ಮಾಡುತ್ತಿದ್ದಂತ ಮೊಬೈಲ್ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದ್ದು, ಹತ್ಯೆಗೂ ಮುನ್ನಾ ಹರ್ಷಗೆ ಕರೆ ಮಾಡಿದ್ದಂತ ಯುವತಿಯರ ಸುಳಿವು ಪತ್ತೆಯಾಗಿದೆ ಎನ್ನಲಾಗಿದೆ.
ಶಿವಮೊಗ್ಗದಲ್ಲಿ ಕಳೆದ ಭಾನುವಾರದಂದು ಹತ್ಯೆಯಾಗಿದ್ದಂತ ಹರ್ಷ ಕೊಲೆ ಪ್ರಕರಣಕ್ಕೆ, ನಿನ್ನೆ ಸ್ನೇಹಿತ ಹೇಳಿಕೆಯಿಂದ ಸ್ಪೋಟಕ ತಿರುವು ದೊರೆತಿತ್ತು. ಹರ್ಷ ಹತ್ಯೆಗೂ ಮುನ್ನಾ ಇಬ್ಬರು ಯುವತಿಯರು ಆತ ಎಲ್ಲಿದ್ದಾನೆ ಎನ್ನುವ ಕಾರಣಕ್ಕಾಗಿ, ಆತನಿಗೆ ಪರಿಚಯವೇ ಇಲ್ಲದೇ ಇದ್ದರೂ, ಪದೇ ಪದೇ ಕರೆ ಮಾಡಿದ್ದರು ಎಂದು ಹರ್ಷ ಸ್ನೇಹಿತ ತಿಳಿಸಿದ್ದರು.
ಈ ಬೆನ್ನಲ್ಲೇ, ಹರ್ಷ ಮೊಬೈಲ್ ಗಾಗಿ ಹುಡುಕಾಡಿದಂತ ಪೊಲೀಸರಿಗೆ, ಹರ್ಷ ಬಳಸುತ್ತಿದ್ದಂತ ಮೊಬೈಲ್ ಪೋನ್, ಪೊಲೀಸರಿಗೆ ದೊರೆತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಹರ್ಷ ಹತ್ಯೆಗೂ ಮುನ್ನಾ ಆತನಿಗೆ ವಾಟ್ಸಾಪ್ ಮೂಲಕ ವೀಡಿಯೋ ಕರೆ ಮಾಡಿದವರು ಯಾರು ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಅಧಿಕೃತ ಮಾಹಿತಿ ಸ್ಪಷ್ಟ ಪಡಿಸಬೇಕಿದೆ.