ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಜಾರಿಗೆ ತರುವಲ್ಲಿ ವಿಫಲ: ಎಲ್.ಎಚ್.ಅರುಣ್‌ಕುಮಾರ್

ದಾವಣಗೆರೆ: ಭಾರತದ ಸಂವಿಧಾನದ ಆಶಯಗಳಲ್ಲಿ ಯಾವುದೇ ಲೋಪದೋಷಗಳಿಲ್ಲ. ಆದರೆ, ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಅದನ್ನು ಜಾರಿಗೆ ತರುವಲ್ಲಿ ನಾವುಗಳು ವಿಫಲರಾಗಿದ್ದೇವೆ ಎಂದು ಹಿರಿಯ ನ್ಯಾಯವಾದಿ ಎಲ್.ಎಚ್.ಅರುಣ್‌ಕುಮಾರ್ ಅಭಿಪ್ರಾಯ ಪಟ್ಟರು.

ಗುರುವಾರ ನಗರದ ಜಯನಗರ ಎ ಬ್ಲಾಕಿನಲ್ಲಿರುವ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪಬ್ಲಿಕ್ ಸ್ಕೂಲ್‌ನಲ್ಲಿ ಆಯೋಜಿಸಲಾಗಿದ್ದ 74ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಅದರಲ್ಲಿ ಕೆಲವು ಲೋಪದೋಷಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಅಕ್ರಮ, ಭ್ರಷ್ಠಾಚಾರ ವ್ಯಾಪಕವಾಗಿ ಹರಡಿದ್ದು, ಅದನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ ಎಂದು ಹೇಳಿದರು.

ಕಳೆದ 73 ವರ್ಷಗಳಲ್ಲಿ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಿದೆ. ಆದರೂ ನಮ್ಮ ಮುಂದೆ ಕೆಲವು ಸಮಸ್ಯೆ, ಸವಾಲುಗಳು ಹಾಗೆಯೇ ಉಳಿದಿವೆ. ಈವರೆಗೆ ಸಂವಿಧಾನದಲ್ಲಿ ಹಲವು ತಿದ್ದುಪಡಿ ತರಲಾಗಿದೆ. ಅದೇ ರೀತಿ ಇಂತಿನ ಅಭಿವೃದ್ದಿಗೆ ತಕ್ಕಂತೆ ಸಂವಿಧಾನದಲ್ಲಿ ಕೆಲ ತಿದ್ದುಪಡಿಗಳನ್ನು ತರುವ ಮೂಲಕ ಆಹಾರ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಹಕ್ಕುಗಳನ್ನು ಮೂಲಭೂತ ಹಕ್ಕುಗಳನ್ನಾಗಿಸುವ ಮೂಲಕ ಸಂವಿಧಾನದ ಉನ್ನತೀಕರಣ ಮತ್ತು ಜನರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮುಂದಾಗಬೇಕೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಸಂಸ್ಥಾಪಕ ರುದ್ರಮುನಿ ಮಾತನಾಡಿ, ರಾಷ್ಟಿಯ ಹಬ್ಬವಾದ ಗಣ ರಾಜ್ಯೋತ್ಸವವನ್ನು ನಾವೆಲ್ಲರೂ ಇಡೀ ಭಾರತಾದ್ಯಂತ ದೇಶದ ಹಬ್ಬವಾಗಿ ಆಚರಿಸುತ್ತಿದ್ದೇವೆ. ಸಂವಿಧಾನವೇ ನಮ್ಮೆಲ್ಲರ ಪವಿತ್ರ ಗ್ರಂಥವಾಗಿದೆ. ರಾಜಪ್ರಭುತ್ವ ತ್ಯಜಿಸಿ ಪ್ರಜಾಪ್ರಭುತ್ವದ ನಿಜ ಅಸ್ತಿತ್ವವನ್ನು ಸ್ಥಾಪಿಸಿದ ದಿನವಾದ ಗಣ ರಾಜ್ಯೋತ್ಸವನ್ನು ನಾವೆಲ್ಲರೂ ಸಡಗರ, ಸಂಭ್ರಮದಿAದ ನಮ್ಮ ಮನೆ ಹಬ್ಬದಂತೆ ಆಚರಿಸಬೇಕೆಂದು ಕರೆ ನೀಡಿದರು.

ಈ ವೇಳೆ ವಿದ್ಯಾಸಂಸ್ಥೆಯ ಅಧ್ಯಕ್ಷೆ ಆರ್.ಮೀನಾಕ್ಷಿ, ಆಡಳಿತಾಧಿಕಾರಿ ಕೆ.ಬಿ.ಆನಂದ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಸಿ.ರೇಣುಕಾರಾಧ್ಯ, ಪ್ರಾಥಮಿಕ ಶಾಲ ವಿಭಾಗದ ಮುಖ್ಯೋಪಾಧ್ಯಾಯರಾದ ಜಿ.ಶಕುಂತಲಾ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!