ಉನ್ನತ ವ್ಯಾಸಂಗ : ರೈತರ ಮಕ್ಕಳಿಗೆ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನ ,

ಬೆಂಗಳೂರು:ಪ್ರೌಢ ಶಿಕ್ಷಣದ ನಂತರ ಉನ್ನತ ವ್ಯಾಸಂಗಕ್ಕೆ ತೆರಳುವ ರೈತ ಮಕ್ಕಳಿಗೆ ಶಿಷ್ಯವೇತನಕ್ಕೆ ಸರ್ಕಾರ ಅರ್ಜಿ ಆಹ್ವಾನಿಸಿದೆ . ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡ ದಿನದಂದು ಪಿಯುಸಿ ನಂತರದ ಉನ್ನತ ವ್ಯಾಸಂಗಕ್ಕೆ ತೆರಳುವ ರೈತ ಮಕ್ಕಳಿಗೆ 3000 ರೂ.ನಿಂದ 11,000 ರೂ.ವರೆಗೂ ಶಿಷ್ಯವೇತನ ನೀಡುವುದಾಗಿ ಘೋಷಣೆ ಮಾಡಿದ್ದರು .
ಇದಕ್ಕಾಗಿ ಒಂದು ಸಾವಿರ ಕೋಟಿ ರೂ . ಮೀಸಲಿರಿಸಿದ್ದಲ್ಲದೆ , ಸರ್ಕಾರಿ ಆದೇಶವನ್ನೂ ಹೊರಡಿಸಲಾಗಿತ್ತು . ಇದೀಗ ಕೃಷಿ ಇಲಾಖಾ ವತಿಯಿಂದಲೇ ಶಿಷ್ಯವೇತನ ನೀಡಲು ಅರ್ಜಿ ಆಹ್ವಾನಿಸಲಾಗಿದೆ . ಅಭ್ಯರ್ಥಿಗಳು ತಾವು ಕಲಿಕೆ ಮಾಡುತ್ತಿರುವ ಕಾಲೇಜುಗಳಲ್ಲಿ ತಮ್ಮ ತಂದೆ ಹಾಗೂ ತಾಯಿಯ ಆಧಾರ್ ಕಾರ್ಡ್‌ಗಳ ಪ್ರತಿಗಳನ್ನು ಸಲ್ಲಿಸಿ , ವೇತನ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದೆ
.
ರಾಜ್ಯ ವಿದ್ಯಾರ್ಥಿ ವೇತನ ತಂತ್ರಾಂಶದಲ್ಲಿ ತಮ್ಮ ಹಾಗೂ ತಂದೆ , ತಾಯಿಯ ಆಧಾರ್ ಸಂಖ್ಯೆಯೊಂದಿಗೆ ನೋಂದಣಿ ಮಾಡಿಕೊಳ್ಳಬೇಕಾ ಗುತ್ತದೆ . ನೋಂದಣಿಯಾದ ಅರ್ಜಿಗಳನ್ನು ಪರಿಶೀಲಿಸಿದ ನಂತರ ವಿದ್ಯಾರ್ಥಿಗಳ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ .ಯೋಜನೆ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಕಾಲೇಜಿನವರು ಮಾಹಿತಿ ನೀಡಬೇಕು ,
ಈ ಕುರಿತು ಭಿತ್ತಿಪತ್ರಗಳನ್ನು ಮುದ್ರಿಸಿ , ಕಾಲೇಜಿನ ಆವರಣದಲ್ಲಿ ಅಂಟಿಸಬೇಕೆಂದು ಸರ್ಕಾರ ಸೂಚಿಸಿದೆ . ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳಿಗೆ ಈ ಶಿಷ್ಯ ವೇತನ ಲಭ್ಯವಾಗಲಿದೆ . ಪಿಯುಸಿ , ಐಟಿಐ , ಡಿಪ್ಲೋಮಾ ಕಲಿಕೆ ವಿದ್ಯಾರ್ಥಿಗಳಿಗೆ 2500 ರೂ . , ವಿದ್ಯಾರ್ಥಿನಿಯರಿಗೆ 3000 ರೂ . , ಬಿಎ . , ಬಿಎಸ್ಸಿ , ಬಿಕಾಂ ಸೇರಿದಂತೆ ಇನ್ನಿತರೆ ಪದವಿ ವಿದ್ಯಾರ್ಥಿಗಳಿಗೂ ಅನುಕ್ರಮವಾಗಿ 5000 ರೂ.ನಿಂದ 5,500 ರೂ . , ಎಲ್‌ಎಲ್‌ಬಿ , ಪ್ಯಾರಾಮೆಡಿಕಲ್ ಹಾಗೂ ಇನ್ನಿತರೆ ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ತಲಾ 7500 ರೂ . ನಿಂದ 8000 ರೂ . , ಎಂಬಿಬಿಎಸ್ , ಬಿ.ಟೆಕ್ ಮತ್ತು ಇತರೆ ಸ್ನಾತಕೋತ್ತರ ವಿದ್ಯಾಥಿಗಳು ಅನುಕ್ರಮವಾಗಿ 10,000 ರೂ . ಹಾಗೂ 11,000 ರೂ . ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಹೊಂದಿರುತ್ತಾರೆ .