farmer; ಗಿಳಿಗಳ ಹಿಂಡಿನಿಂದ ಮೆಕ್ಕೆಜೋಳ ನಾಶ, ಕಂಗಾಲಾದ ರೈತರು
ದಾವಣಗೆರೆ, ಆ.19: ಒಂದು ಕಡೆ ಮಳೆಯ ಅಭಾವ. ಇನ್ನೊಂದೆಡೆ ಸಾಲ. ಈ ಎರಡರ ನಡುವೆ ರೈತರು (farmer) ಕಂಗಲಾಗಿದ್ದಾರೆ. ಈ ನಡುವೆಯೂ ಸಾಲ ಮಾಡಿ ಬೆಳೆದ ಮೆಕ್ಕೆಜೋಳ ಕೈಗೆ ಬರುವಷ್ಟರಲ್ಲಿ ಗಿಳಿಗಳ ಪಾಲಾಗುತ್ತಿದೆ
ಗಿಳಿಗಳಿಗೆ (parrot) ಆಹಾರ ಸಿಗದೇ ರೈತರ ಜಮೀನುಗಳಿಗೆ ಹಿಂಡು ಹಿಂಡಾಗಿ ಲಗ್ಗೆ ಇಟ್ಟು ಸಂಪೂರ್ಣ ಬೆಳೆಗಳನ್ನು ನಾಶ ಮಾಡುತ್ತಿವೆ. ಒಂದು ಕಡೆ ಪಕ್ಷಿಗಳು ಉಳಿಯಬೇಕಾಗಿದೆ, ಆದರೆ ಇತ್ತ ರೈತರ ಬೆಳೆಗಳು (crop) ನಾಶವಾಗುತ್ತಿದೆ.
Farmer : ಮಣ್ಣೆತ್ತಿನ ಅಮವಾಸ್ಯೆ : ರೈತನ ಬೆನ್ನೆಲುಬಾದ ಎತ್ತುಗಳ ಅದ್ದೂರಿ ಪೂಜೆ
ಇನ್ನೊಂದು ಕಡೆ ಸಂತೆಬೆನ್ನೂರು, ದೊಡ್ಡಬ್ಬಿಗೆರೆ, ಚಿಕ್ಕಬ್ಬಿಗೆರೆ ಮತ್ತು ಸುತ್ತಮುತ್ತಲಿನ ರೈತರು ಉಳಿಯಬೇಕಾಗಿದ್ದು ರೈತರಿಗೆ ಮತ್ತೊಮ್ಮೆ ಸಾಲದ ಹೊರೆಯಾಗುವ ಪರಿಸ್ಥಿತಿ ಎದುರಾಗದಂತೆ ತಕ್ಷಣ ಕೃಷಿ ಅಧಿಕಾರಿಗಳು ಮತ್ತು ಶಾಸಕರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಚನ್ನಗಿರಿಯ ಚಂದ್ರಶೇಖರ್ ಅವರು ವಿನಂತಿಸಿಕೊಂಡರು.