ರೈತ ದಿನಾಚರಣೆ ದಿನ ರೈತರ ಮೇಲೆ ಹಲ್ಲೆ.! ಬಿಜೆಪಿ ಸರ್ಕಾರದಲ್ಲಿ ರೈತರಿಗೆ ರಕ್ಷಣೆಯೇ ಇಲ್ಲ – ಕೆ.ಎಲ್. ಹರೀಶ್ ಬಸಾಪುರ ಆರೋಪ
ದಾವಣಗೆರೆ: ರಾಜ್ಯದಲ್ಲಿ ಇಂದು ರೈತ ದಿನಾಚರಣೆ ಆಚರಿಸುತ್ತಿದ್ದು, ಹೆಸರಿಗೆ ಮಾತ್ರ ರೈತ ದಿನಾಚರಣೆ ಆದರೆ ಬಿಜೆಪಿ ಸರ್ಕಾರದಲ್ಲಿ ರೈತರಿಗೆ ರಕ್ಷಣೆ ಇಲ್ಲ, ಎನ್ನುವುದಕ್ಕೆ ರೈತ ದಿನಾಚರಣೆಯ ದಿನವೇ ರೈತರ ಮೇಲೆ ಆದ ಹಲ್ಲೆ ಸಾಕ್ಷಿಯಾಗಿದೆ ಇಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ತಿಳಿಸಿದ್ದಾರೆ.
ನಗರದ ಪಿಬಿ ರಸ್ತೆಯ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ನಡೆದ ರೈತರ ಪ್ರತಿಭಟನೆ ನಡೆಯುತ್ತಿದ್ದು, ಇಂದು ಬೆಳಗಿನ ಜಾವ ಭಾರತ್ ಕಾಲೋನಿಯಲ್ಲಿರುವ ಹೂವಿನ ಮಾರುಕಟ್ಟೆಯಲ್ಲಿ ರೈತರ ಮೇಲೆ ಗೂಂಡಾಗಳು ಹಲ್ಲೆ ಹಾಗೂ ಚಾಕು ತೋರಿಸಿ ಬೆದರಿಕೆ ಹಾಕಿರುವ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸ ಸಿಬ್ಬಂದಿ ರಾತ್ರಿ ಬೀಟ್ಗೆ ಬಂದಾಗ ಅವರ ಮುಂದೆಯೇ ಗುಂಡಗಳು ರೈತರಿಗೆ ಬೆದರಿಕೆ ಹಾಕಿರುವುದು ಮಾತ್ರ ಪೊಲೀಸರಿಂದ ರಕ್ಷಣೆ ಸಿಗಬಹುದೇ ಎಂಬ ಅನುಮಾನಕ್ಕೆ ಕಾರಣವಾಗಿದೆ.
ಸರ್ಕಲ್ ಇನ್ಸ್ಪೆಕ್ಟರ್ ಗಜೇಂದ್ರಪ್ಪ ರವರು ಮುಂದಿನ ದಿನಗಳಲ್ಲಿ ಸೂಕ್ತ ರಕ್ಷಣೆ ನೀಡುವ ಭರವಸೆ ನೀಡಿದರಾದರು, ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ ಗುಂಡಗಳನ್ನು ಹಿಡಿದು ಶಿಕ್ಷಿಸದೆ ಬಿಟ್ಟಿರುವುದು ಮಾತ್ರ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದ್ದು ಇಂತಹ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡುವ ಮೂಲಕ ಸಾರ್ವಜನಿಕರಿಗೆ ಹಾಗೂ ರೈತರಿಗೆ ರಕ್ಷಣೆ ನೀಡಬೇಕಾಗಿದೆ.