ರೈತ ಬಾಂಧವರಲ್ಲಿ ಮನವಿ: ಸರ್ಕಾರದ ಸಬ್ಸಿಡಿಗಾಗಿ ಕಾಯದೇ ಅಗತ್ಯವಿರುವಷ್ಟು ಖರೀದಿ ಮಾಡಿ – ಡಾ ಆರ್ ಜಿ ಗೊಲ್ಲರ್
ರೈತರಿಗಾಗಿ ಸಲಹೆ
ದಾವಣಗೆರೆ: ರೂ 200-300 ಸಬ್ಸಿಡಿಗಾಗಿ ಕಾಯದೇ, ನಮ್ಮ ನಮ್ಮ ಅಗತ್ಯದ ಉತ್ತಮ ತಳಿ/ ಹೈಬ್ರೀಡ್ ಬೀಜಗಳನ್ನು ಅಧಿಕೃತ , ವಿಶ್ವಾಸಿ ಮಳಿಗೆಗಳಿಂದ ಖರೀದಿಸಬೇಕು.
ಡಿಎಪಿ, ಯೂರಿಯಾ, ಎಂಓಪಿ, 10:26:26, 12:32:16, 20:20:013, 16:20:೦:13, 17:17:17, 19:19:19, 28:28:0..ಹೀಗೆ ತರಹೇವಾರಿ ಗೊಬ್ಬರ ಮಾರುಕಟ್ಟೆಯಲ್ಲಿ ಲಭ್ಯ. ನಿಮ್ಮ ಬೆಳೆಗೆ ಅಗತ್ಯ ಇರುವ ಗೊಬ್ಬರ ಖರೀದಿಸಬೇಕು. ಕಂಪನಿ ಹೆಸರಿನ ಮೋಹ (ಹುಚ್ಚು) ಅನಗತ್ಯ.
ಕಬ್ಬು, ಭತ್ತ, ಮೆಕ್ಕೆಜೋಳ, ಜೋಳ, ಹತ್ತಿ, ಮೆಣಸಿನಗಿಡ, ಸೂರ್ಯಕಾಂತಿ, ಈರುಳ್ಳಿ, ಇಂತಹ ಎಲ್ಲಾ ಬೆಳೆಗಳಿಗೆ ಎಂಓಪಿ (ಪೊಟಾಶ್) ಅಗತ್ಯ.
ಬೀಜೋಪಚಾರ ಮಾಡಿ ಅಥವಾ ಕೊಟ್ಟಿಗೆ ಗೊಬ್ಬರ ದೊಡನೆ ಜೈವಿಕ ಪೀಡೆನಾಶಕ, ಜೈವಿಕ ಗೊಬ್ಬರ.. ಬಳಸಿ ಬೀಜ ಬಿತ್ತಿರಿ.
ಜೈವಿಕ ಪೀಡೆನಾಶಕ.. ಟ್ರೈಕೋಡರ್ಮಾ , ಮೆಟಾರೈಜಿಯಂ ಅನಿಸೋಪ್ಲಿಯೇ/ ರಿಲೈ, ಸುಡೋಮೋನಾಸ್..
ಜೈವಿಕ ಗೊಬ್ಬರ.. ರೈಜೋಬಿಯಂ, ಅಜಟೋಬ್ಯಾಕ್ಟರ್, ಅಜೋಸ್ಪಿರಿಲ್ಲಂ, ಪಿಎಸ್ ಬಿ.. ಬಳಸಬೇಕು.
ಕೊಟ್ಟಿಗೆ / ಎರೆ/ ಕಾಂಪೋಸ್ಟ್ / ಜೈವಿಕ ಬಗ್ಗಡ / ಸಗಣಿ ರಾಡಿ/ ಹಸಿರೆಲೆ .ಇತ್ಯಾದಿ ಗೊಬ್ಬರ ತಪ್ಪದೇ ಬಳಸಬೇಕು.
ಇವುಗಳ ಬಳಕೆ ನಂತರ.. ಜೀವಾಮೃತ, ಗೋಕೃಪಾಮೃತ, ವೇಸ್ಟ್ ಡಿಕಾಂಪೋಸರ್ ಇತ್ಯಾದಿ ಬಳಕೆ ಮಾಡಬೇಕು. ಇವುಗಳೊಡನೆ ರಾಸಾಯನಿಕ ಬಳಸಬಾರದು.
* ಮುಂಗಡ ಬಿತ್ತನೆ ಅಧಿಕ ಇಳುವರಿಗೆ ಅಡಿಪಾಯ (ಸಾಮಾನ್ಯವಾಗಿ).
* ಹವಾಮಾನ ಸ್ಥಿತಿ ಗತಿಗಳ ಬಗ್ಗೆ ಸದಾ ಮಾಹಿತಿ ಇರಲಿ.
* ತೇವಾಂಶ ಕೊರತೆ ಇದ್ದಾಗ ಇತರೆ ಪರಿಕರ ಬಳಕೆ ಬೇಡ.
* ಬೆಳೆಯ ಲಕ್ಷಣಗಳು ಬದಲಾದ ತಕ್ಷಣ *ಕೃಷಿ ಆಪ್ತ ಮಿತ್ರ* ರ ನೆರವು ಪಡೆಯಬೇಕು. ಇವರು ನಿಮ್ಮ ನೆರೆಯ ಮುಕ್ತ ಮನಸ್ಸಿನ, ನಿಮ್ಮ ಕರೆಗೆ ಓಗೊಡುವ ಪ್ರಗತಿಪರ ರೈತ, ಅರ್ಪಣಾ ಮನೋಭಾವದ ವಿಸ್ತರಣಾ ಕಾರ್ಯಕರ್ತ, ಸಂಪನ್ಮೂಲ ತಜ್ಞರು ಆಗಿರಬಹುದು. ಅವರನ್ನು ನಂಬಿ ದಿನಗಟ್ಟಲೇ ನಿರೀಕ್ಷೆಯಲ್ಲಿ ತಡ ಮಾಡಬಾರದು.
* ತಜ್ಞ ರೈತರು ಅನುಯಾಯಿ ರೈತರಿಗೆ ಸಲಹೆ ನೀಡಬೇಕು. ರೈತ ಸಂಕುಲ ಪ್ರಗತಿ ಸಾಧಿಸಲು ಇದು ಅತ್ಯಗತ್ಯ.
* ಸಕಾಲದಲ್ಲಿ ಪರಿಕರ ಬಳಕೆ, ಪೀಡೆ ಹತೋಟಿ, ವಾತಾವರಣದ ಪರಿಣಾಮ ಸರಿಪಡಿಸುವ ಕ್ರಮ ಕೈಗೊಳ್ಳಬೇಕು.
* ದೊಡ್ಡ ಹಿಡುವಳಿದಾರರು ಪರಿಕರ ಬಳಕೆ, ಬಿತ್ತನೆ, ಸಿಂಪರಣೆ ಇತ್ಯಾದಿ ಕಾರ್ಯಗಳನ್ನು ನೇರ ಉಸ್ತುವಾರಿಯಲ್ಲಿ ಮಾಡಿಸಬೇಕು. ಅದಾಗದಿದ್ದರೆ, ಗೇಣಿಗೆ / ಲಾವಣಿಗೆ ಕೊಡುವುದು ಉತ್ತಮ ಎಂದು ತಿಳಿಸಲು ವಿಷಾದಿಸಿದೆ.
* ಸರ್ಕಾರದ ಸಬ್ಸಿಡಿಗೆ ಕಾಯದೇ, ಸಂದಿಗ್ಧ ಪರಿಕರಗಳಾದ ಜಿಪ್ಸಂ, ಜಿಂಕ್, ಬೋರಾನ್, ಹಸಿರೆಲೆ ಗೊಬ್ಬರ…ಇವುಗಳನ್ನು ಸಕಾಲದಲ್ಲಿ ಬಳಸಿ.
* ಪರಿಹಾರಗಳು ಪರಿಹಾರ ಮಾತ್ರವೇ ಹೊರತು, ಅವು ಆದಾಯವಾಗಲಾರವು. ಅವುಗಳ ನಿರೀಕ್ಷೆಯಲ್ಲಿ ಕೃಷಿ ಬದುಕಿಗೆ ಹಿಂದೇಟು ತಂದುಕೊಳ್ಳಬಾರದು.
* ಇದು ಮಹಾಮಾರಿ ಕಾಲ. ನಮ್ಮ ನಮ್ಮ ಇತಿ ಮಿತಿಗಳು ನಮಗೆ ತಿಳಿದಿರಲಿ.
* ಮಹಾಮಾರಿಯಿಂದ ರಕ್ಷಣೆ ಕುರಿತು ಸರ್ಕಾರ ತಿಳಿಸಿರುವ ಎಲ್ಲ ಎಚ್ಚರಿಕೆ ಇರಲಿ. ಕೃಷಿ ಮತ್ತು ಗೃಹ ಬದುಕಿಗೆ ಸೀಮಿತವಾಗಿ ಚಲನವಲನ ಇರಲಿ. ವೈಯಕ್ತಿಕ ಮತ್ತು ಕುಟುಂಬದ ಆರೋಗ್ಯ ಕಡೆಗೆ ಅಗ್ರ ಆದ್ಯತೆ ಇರಲಿ.
* ಸೀಮಿತ ಸಂಪನ್ಮೂಲ ಇರುವವರು, ಕೃಷಿಯಲ್ಲಿ ಅತೀ ಆದಾಯದ ನಿರೀಕ್ಷೆಯಲ್ಲಿ ಅಧಿಕ ಬಂಡವಾಳ ಹೂಡಿಕೆ ಮಾಡುವುದು ಆತಂಕದ ವಿಷಯ.
ಇದು ಮುಂಗಾರು 2021ಕ್ಕೆ ಮುನ್ನ ನೀಡುತ್ತಿರುವ ಪ್ರಥಮ ಮತ್ತು ಅಂತಿಮ ಎಚ್ಚರಿಕೆ. ಆಯ್ಕೆ ಮತ್ತು ತನ್ನಿಮಿತ್ತ ದೊರೆಯುವ ಫಲಾಫಲಗಳಿಗೆ ವೈಯಕ್ತಿಕ ವಾಗಿ ಅವರವರೇ ಹೊಣೆ.
ಈ ಸಂದೇಶ ರೈತರಲ್ಲಿ ಜಾಗೃತಿ ಮೂಡಿಸಲು, ಆತ್ಮ ಗೌರವ ಹೆಚ್ಚಿಸಲು ಅತ್ಯಗತ್ಯ ಎನ್ನುವ ಅಭಿಪ್ರಾಯದಿಂದ ಕಳುಹಿಸಿದೆ.
ಡಾ ಆರ್ ಜಿ ಗೊಲ್ಲರ್ – ನಿವೃತ್ತ ಜಂಟಿ ಕೃಷಿ ನಿರ್ದೇಶಕರು.