ವರುಣಾರ್ಭಟಕ್ಕೆ ತತ್ತರಿಸಿದ ಧಾರವಾಡದ ರೈತರು: ಬೆಳೆಗಳಿಗೆ ದಿಗ್ಭಂದನ
ಧಾರವಾಡ: ಕಳೆದ ಕೆಲವು ದಿನಗಳಿಂದ ಮಳೆರಾಯನ ಆರ್ಭಟ ಜೋರಾಗಿದ್ದು ಎಲ್ಲಾ ಕಡೆ ಗ್ರಾಮಗಳಲ್ಲಿ ನೀರು ಸುತ್ತುವರಿದು ಜನ ಜೀವನ ಅಸ್ತವ್ಯಸ್ತವಾಗಿದೆ. ಅದೇ ರೀತಿ ಧಾರವಾಡದ ರೈತರು ತಗ್ಗು ಪ್ರದೇಶದಲ್ಲಿ ಜಮೀನ್ನನು ಹೊಂದಿರುವವರು ಬೀಜಗಳನ್ನು ಬಿತ್ತನೆ ಮಾಡಿದ್ದಾರೆ ಆದರೆ ಈ ಭಾಗದಲ್ಲಿಮಳೆ ಜಾಸ್ತಿಯಾದ ಕಾರಣ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ರೈತರು ಬೆಳೆದಿರುವ ಶೇಂಗಾ ಸೋಯಾಬಿನ್ ಮೆಣಸಿನಕಾಯಿ ಬೆಳೆಗಳು ನೀರಿನಲ್ಲಿ ಮುಳುಗಿ ಹೋಗಿವೆ.
ಧಾರವಾಡ ಜಿಲ್ಲೆಯ ನವಲೂರು, ಸೋಮಾಪುರು, ಹೆಬ್ಬಳ್ಳಿ ಶಿವಳ್ಳಿ ಇನ್ನಿತರ ಗ್ರಾಮಗಳಲ್ಲಿ ರೈತ ಬೆಳೆದ ಬೆಳೆಗಳು ನೀರಿನಲ್ಲಿ ಮುಳುಗಿ ಬೆಳೆ ಹಾನಿ ಸಂಭವಿಸಿವೆ. ಕಳೆದ ಐದು ದಿನಗಳಿಂದ ನಿರಂತರ ಮಳೆಗೆ ಜನ ಹೈರಾಣಾಗಿದ್ದಾರೆ.ಈಗಲೂ ಸಹ ದಿನದಲ್ಲಿ ಒಂದು ದಿನವಾದರು ಮಳೆ ಬಂದು ಹೋಗುತ್ತಿದೆ,
ಇಷ್ಟುದಿನ ಮಳೆ ಇಲ್ಲದೆ ಮಳೆಗಾಗಿ ಕಾಯುತ್ತಿದ್ದರು ಆದರೆ ಈಗ ಮಳೆ ನಿಂತರೆ ಬಿತ್ತನೆ ಮಾಡಬಹುದು ಎಂದು ಕಾಯುತ್ತಿದ್ದಾರೆ . ಅದೇ ರೀತಿ ಈಗಾಗಲೆ ಬಿತ್ತನೆ ಮಾಡಿರುವ ರೈತರು ಬೆಳೆ ನಾಶವಾಗಿ ಹೋಗುತ್ತದೆಂದು ಭಯದಲ್ಲಿದ್ದಾರೆ.