ದೂಡಾದ ವಸತಿ ಯೋಜನೆಗೆ ಜಮೀನು ನೀಡಲು ಮುಂದಾದ ರೈತರು: ಎಕರೆಗೆ ಎಷ್ಟು ಕೋಟಿ ಗೊತ್ತಾ.!?
ದಾವಣಗೆರೆ: ದಾವಣಗೆರೆ ತಾಲ್ಲೂಕು ಕುಂದುವಾಡ ಗ್ರಾಮದ ವಿವಿಧ ರಿಸನಂ, ಗಳಲ್ಲಿ ಒಟ್ಟು 53 ಎಕರೆ 19.8 ಗುಂಟೆ ಜಮೀನು ಪ್ರದೇಶದಲ್ಲಿ ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಸತಿ ಯೋಜನೆ ಅಭಿವೃದ್ಧಿಪಡಿಸಲು ಉದ್ದೇಶಿಸಿದ್ದು ಇದಕ್ಕೆ ರೈತರು ಜಮೀನು ನೀಡಲು ಸಮ್ಮತಿಸಿದ್ದಾರೆ ಎಂದು ಧೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ರೈತರೊಂದಿಗಿನ ಸಭೆಯಲ್ಲಿ ರೈತರು ಇದಕ್ಕೆ ಸಮ್ಮತಿಸಿ ಜಮೀನು ನೀಡಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ದಾವಣಗೆರೆ ತಾಲ್ಲೂಕು ಕುಂದವಾಡ ಗ್ರಾಮದ ವಿವಿಧ ರಿ.ಸನಂ. ಗಳಲ್ಲಿ ಜಮೀನುಗಳ ಒಟ್ಟು 53 ಎಕರೆ 19.8 ಗುಂಟೆ ಜಮೀನು ಪ್ರದೇಶದಲ್ಲಿ ವಸತಿ ಯೋಜನೆಯನ್ನು ಅಭಿವೃದ್ಧಿಪಡಿಸಲು ದೂಡಾದಿಂದ ಉದ್ದೇಶಿಸಲಾಗಿದೆ. ಈ ಯೋಜನೆಗೆ ಜಮೀನು ಅಗತ್ಯವಿದ್ದು, ರೈತರು ಒಪ್ಪಿಗೆ ಸೂಚಿಸಿದ್ದಾರೆ ಎಂದಿದ್ದಾರೆ.
ದೂಡಾ ಅಧ್ಯಕ್ಷ ದೇವರಮನಿ ಶಿವಮಕುಮಾರ್ ಅವರ ಸಮ್ಮುಖದಲ್ಲಿ ವಸತಿ ಯೋಜನೆ ಅಭಿವೃದ್ಧಿಪಡಿಸಲು ನೇರ ಖರೀದಿ ಮುಖಾಂತರ ಜಮೀನು ನೀಡಲು ಸಂಬಂಧಿಸಿದ ಖಾತೆದಾರರೊಂದಿಗೆ ದರ ನಿಗದಿ ಮಾಡಲು ಶುಕ್ರವಾರ ಸಭೆ ನಡೆಸಲಾಯಿತು. ಜಿಲ್ಲಾಧಿಕಾರಿಗಳು ಜಮೀನಿಗೆ ಎಕರೆ ಒಂದಕ್ಕೆ 1.18 ಕೋಟಿ ರು., ನೀಡಲು ಆ ಭಾಗದ ಜಮೀನಿನ ಮಾಲೀಕರೊಂದಿಗೆ ಚರ್ಚೆ ನಡೆಸಿದರು. ಅದರಂತೆ ಜಮೀನಿಗೆ ಪ್ರತಿ ಎಕರೆಗೆ 1.18 ಕೋಟಿ ರು., ನಂತೆ ಪಡೆಯಲು ಎಲ್ಲ ರೈತರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಭೆಯಲ್ಲಿ ಧೂಡಾ ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ತಹಸಿಲ್ದಾರ್ ಗಿರೀಶ್, ಉಪನೊಂದಣಾಧಿಕಾರಿ ಹಾಗೂ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಹೆಚ್. ಶ್ರೀಕರ್, ಪ್ರಾಧಿಕಾರದ ಸದಸ್ಯರುಗಳಾದ ಮಾರುತಿರಾವ್ ಘಾಟೆ, ಲಕ್ಷ್ಮಣ, ಬಾತಿ ಚಂದ್ರಶೇಖರ್, ಗೌರಮ್ಮ ವಿ ಪಾಟೀಲ್, ರೈತ ಮುಖಂಡರುಗಳಾದ ಜಿ.ಸಿ. ದೇವರಾಜ್, ಎಂ. ಹನುಮಂತಪ್ಪ, ಷಣ್ಮುಖಪ್ಪ, ನರಸಪ್ಪರ ಶಿವಣ್ಣ ಮತ್ತಿತರರು ಸಭೆಯಲ್ಲಿ ಹಾಜರಿದ್ದರು ಎಂದು ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ದೇವರಮನಿ ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.