ಫೆ. 10 ಮತ್ತು 11 ರಂದು ಪೂಜಾಹೋಮ, ಶ್ರೀ ಮಹಾಮೃತ್ಯುಂಜಯ ಯಾಗ
ದಾವಣಗೆರೆ: ಹದಡಿ ರಸ್ತೆಯ ಗ್ರಾಮಾಂತರ ಪೋಲಿಸ್ ಠಾಣೆ ಎದುರಿರುವ ಕ್ಷೇತ್ರ ನವಸ್ಥಾನ, ಶ್ರೀ ಶನೇಶ್ವರ ದೇವಸ್ಥಾನದಲ್ಲಿ ಶ್ರೀ ಕೊಪ್ಪರಾಂದ ಸೇವಾ ಟ್ರಸ್ಟ್ ವತಿಯಿಂದ 27ನೇವರ್ಷದ ವಾರ್ಷಿಕ ಮಹಾಯಾಗದ ಪ್ರಯುಕ್ತ ಶನಿಶಾಂತಿ ಪೂಜಾಹೋಮ ಹಾಗೂ ಶ್ರೀ ಮಹಾಮೃತ್ಯುಂಜಯ ಯಾಗ ಪೂಜಾ ಕಾರ್ಯಕ್ರಮವು ಫೆ.10 ಮತ್ತು 11 ರಂದು ನಡೆಯಲಿದೆ.
ಫೆ. 10ರ ಇಂದು ಬೆಳಿಗ್ಗೆ 4-30ಕ್ಕೆ ಗಂಗಾಪೂಜೆ, ವೀರಗಾಸೆ ಸಮೇತರಾಗಿ ಶಾಲಾಪ್ರವೇಶ, ಬಲಿ, ಸಂಜೆ: 6-30ಕ್ಕೆ ರಕ್ಷೆಲ್ಲಿ ಪೂಜೆ, ಗಣಪತಿ ಪೂಜೆ ಮಕ್ಕಾದ ನಾಂದಿ, ಪಂಚಗವ್ಯ, ಪರಿವಾರ ಕಳಸ ಸ್ಥಾಪನೆ, ಪೂಜಾಧಿಗಳನ್ನು ಶಾಂತಿ ಹೋಮವನ್ನು ನೆರವೇರಿಸಲಾಗುವುದು.
ಫೆ. 11ರಂದು ಬೆಳಿಗ್ಗೆ 7 ಗಂಟೆಗೆ ಪ್ರಧಾನ ಕಳಸ ಸ್ಥಾಪನೆ, ನವಗ್ರಹ ಶ್ರೀ ಮೃತುಂಜಯ ಕಳಸ ಸ್ಥಾಪನೆ ಆರಾಧನೆಗಳನ್ನು ನಡೆಸಿ, ಶನಿಶಾಂತಿ ಹೋಮ ಹಾಗೂ ಶ್ರೀ ಮೃತ್ಯುಂಜಯ ಹೋಮಾದಿಗಳನ್ನು ನೆರವೇರಿಸಲಾಗುವುದು. ನಂತರ ಶಾಂತಿ ಹೋಮ ಜಯಾದಿ ಹೋಮಗಳನ್ನು ನೆರೆವೇರಿಸಿ ಮಧ್ಯಾಹ್ನ 12-30 ಗಂಟೆಗೆ ಪೂರ್ಣಾಹುತಿ ಹಾಗೂ ಮಹಾಮಂಗಳಾರತಿ ನಂತರ ಅನ್ನದಾಸೋಹ ಇರುತ್ತದೆ. ತದನಂತರ ಸಂಜೆ 6 ಕ್ಕೆ ಉತ್ತರ ಪೂಜೆ, ಮಹಾಮಂಗಳಾರತಿ ಹಾಗೂ ಸೇವಾಕರ್ತರುಗಳಿಗೆ ಪ್ರಸಾದ ವಿನಿಯೋಗ. ಪೂಜೆಯಲ್ಲಿ ಸೇವಾರ್ಥವನ್ನು ಮಾಡಿದ ಎಲ್ಲಾ ಭಕ್ತಾಧಿಗಳಿಗೆ ಶನಿದೋಷ ನಿವಾರಣಯಂತ್ರವನ್ನು ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಟ್ರಸ್ಟ್ ವ್ಯವಸ್ಥಾಪಕರು ಮೊ: 9902990207, 9141336112, 8904109409 ಸಂಪರ್ಕಿಸಬಹುದು.