ಅನಾಥ ಮಹಿಳೆ ಸಾವು : ಪೋಷಕರಿದ್ದಲ್ಲಿ ದಾವಣಗೆರೆ ರಾಜ್ಯ ಮಹಿಳಾ ನಿಲಯ ಸಂಪರ್ಕಿಸಲು ಮನವಿ

ದಾವಣಗೆರೆ: ರಾಜ್ಯ ಮಹಿಳಾ ನಿಲಯ ದಾವಣಗೆರೆ ಸಂಸ್ಥೆಯ ಅನಾಥ ನಿವಾಸಿಯಾಗಿದ್ದ 50 ವರ್ಷದ ಲಕ್ಷ್ಮಿ ಎಂಬ ಮಹಿಳೆ ಅನಾರೋಗ್ಯದಿಂದ ನ. 29 ರಂದು ನಗರದ ಸಿ.ಜೆ. ಜಿಲ್ಲಾಸ್ಪತ್ರೆಯಲ್ಲಿ ಮರಣಹೊಂದಿದ್ದು, ಮಹಿಳೆಗೆ ಸಂಬಂಧಿಸಿದಂತೆ ಯಾರಾದರೂ ಪೋಷಕರು ಇದ್ದಲ್ಲಿ ನಗರದ ಮಹಿಳಾ ನಿಲಯವನ್ನು ಸಂಪರ್ಕಿಸುವಂತೆ ಸೂಚನೆ ನೀಡಲಾಗಿದೆ.
ಲಕ್ಷ್ಮಿ ಎಂಬ ಮಹಿಳೆ ದಾವಣಗೆರೆಯಲ್ಲಿನ ರಾಜ್ಯ ಮಹಿಳಾ ನಿಲಯ ಸಂಸ್ಥೆಗೆ 2014 ರ ಅಕ್ಟೋಬರ್ 30 ರಂದು ಜಗಳೂರು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಮೂಲಕ ದಾಖಲಾಗಿದ್ದರು. ನಿವಾಸಿಯು ಮಾನಸಿಕ ಅಸ್ವಸ್ಥೆಯಾಗಿದ್ದು, ಇತ್ತೀಚೆಗೆ ಮಧುಮೇಹ ರೋಗದಿಂದ ಬಳಲುತ್ತಿದ್ದರು. ಆರೋಗ್ಯ ಸರಿ ಇಲ್ಲದ ಕಾರಣ ಸಿ.ಜಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೂ ನ.29 ರಂದು ರಾತ್ರಿ 10.30ಕ್ಕೆ ಸಿ.ಜಿ.ಆಸ್ಪತ್ರೆಯಲ್ಲಿ ಮರಣ ಹೊಂದಿರುತ್ತಾರೆ. ಅವರ ಮೃತದೇಹವನ್ನು ಸಿ.ಜಿ.ಆಸ್ಪತೆಯ ಶವಗಾರದಲ್ಲಿ ಇರಿಸಲಾಗಿದೆ. ನಿವಾಸಿಗೆ ಇದುವರೆಗೂ ಯಾರು ಪೋಷಕರು ಪತ್ತೆಯಾಗಿರುವುದಿಲ್ಲ. ಮಹಿಳೆಗೆ ಸಂಬಂಧಿಸಿದಂತೆ ಯಾರಾದರೂ ಪೋಷಕರು ಇದ್ದಲ್ಲಿ ಅಧೀಕ್ಷಕರ ಕಚೇರಿ, ರಾಜ್ಯ ಮಹಿಳಾ ನಿಲಯ, ಇಂಡಸ್ಟ್ರೀಯಲ್ ಏರಿಯಾ ಶ್ರೀರಾಮನಗರ, ದಾವಣಗೆರೆ-577005 ಮೊ.ಸಂ:94489403 ಇವರನ್ನು ಸಂಪರ್ಕಿಸಬಹುದೆಂದು ರಾಜ್ಯ ಮಹಿಳಾ ನಿಲಯದ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.