ಎಸ್ ಎಸ್ ಹಾಗೂ ಎಸ್ ಎಸ್ ಎಂ ವಿರುದ್ದ ಎಫ್ ಐ ಆರ್ ದಾಖಲು. ಬಿಜೆಪಿಯವರ ಷಡ್ಯಂತ್ರ ಎಂದ ಮಲ್ಲಣ್ಣ
ದಾವಣಗೆರೆ: ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆ ದಾವಣಗೆರೆ ಉತ್ತರ ಕ್ಷೇತ್ರದ ಅಭ್ಯರ್ಥಿ ಎಸ್.ಎಸ್ ಮಲ್ಲಿಕಾರ್ಜುನ್ ಬೆಂಗಳೂರಿಗೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೀಘ್ರದಲ್ಲಿಯೇ ಕಾಂಗ್ರೆಸ್‌ನ ಎರಡನೇ ಪಟ್ಟಿ ಬಿಡಗಡೆಯಲಾಗಿದೆ ಎಂದು ಹೇಳಿದರು.
ಪಕ್ಷದ ಹೈ ಕಮಾಂಡ್ ಯಾವ ರೀತಿ ಹೇಳಿತ್ತು ಆ ರೀತಿ ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮಲ್ಲಿ ಸ್ವಲ್ಪ ಕಾಂಪ್ಲಿಕೇಷನ್ ಇರುವುದರಿಂದ ಸಭೆಗಳು ನಡೆಯುತ್ತಿವೆ ಎಂದು ಹೇಳಿದರು.
ಜಿ.ಎಂ. ಸಿದ್ದೇಶ್ವರ ದಾವಣಗೆರೆ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಸ್ಪರ್ಧೆ ಮಾಡಿದರೆ ನಮಗೇನೂ ಸಮಸ್ಯೆ ಇಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಎಲ್ಲಿಂದನಾದರೂ ಸ್ಪರ್ಧಿಸಬಹುದು. ನಾವು ದಾವಣಗೆರೆಯಿಂದ ಸ್ಪರ್ಧೆ ಮಾಡುವಂತೆ ಕೇಳಿಕೊಂಡಿದ್ದೇವೆ ಎಂದು ಹೇಳಿದರು.
ಮತದಾರರಿಗೆ ಕುಕ್ಕರ್ ಗಳನ್ನು ನಾವು ಹಂಚಿರುವ ಆರೋಪದ ಬಗ್ಗೆ ದಾವಣಗೆರೆಯ ಕೆಟಿಜೆ ನಗರ ಪೋಲಿಸ್ ಠಾಣೆಯಲ್ಲಿ ಎ1 ಆರೋಪಿಯಾಗಿ ಶಾಮನೂರು ಶಿವಶಂಕರಪ್ಪ ಹಾಗೂ A2 ಆರೋಪಿಯಾಗಿ ಎಸ್ ಎಸ್ ಮಲ್ಲಿಕಾರ್ಜುನ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಈ ವಿಚಾರ ನಮಗೆ ಗೊತ್ತೂ ಇಲ್ಲ. ನಮ್ಮ ಅಭಿಮಾನಿಗಳು, ಗೆಳೆಯರು ಹಂಚಿರಬಹುದು ಅಥವಾ ಇದು ಬಿಜೆಪಿಯವರ ಕೆಲಸವೂ ಇರಬಹುದು ಎಂದು ಹೇಳಿದರು.ಈ ಹಿಂದೆ ಜಿಂಕೆ ವಿಷಯದಲ್ಲಿ ಮಾಡಿದ್ದರು ಅದೇ ರೀತಿ ಮಾಡಿಸಿರಬಹುದು ಎಂದು ತೀಕ್ಷ್ಣವಾಗಿ ಕಯಟುಕಿದರು.
ಐಟಿ ರೇಡ್ ಮಾಡಲು ನನ್ನ ಬಳಿ ಏನೂ ಇಲ್ಲ. ಎಲ್ಲಾ ಅವನ ಬಳಿಯೇ ಇದೆ ಎಂದು ಪರೋಕ್ಷವಾಗಿ ಸಿದ್ದೇಶ್ವರ ವಿರುದ್ದ ಮಲ್ಲಿಕಾರ್ಜುನ್ ಕಿಡಿಕಾರಿದರು.