FIR: ಪೌರಾಯುಕ್ತ ಸೇರಿ 7 ಜನರ ವಿರುದ್ದ ಹರಿಹರ ಪೋಲೀಸ್ ಠಾಣೆಯಲ್ಲಿ ಲೋಕಾಯುಕ್ತ ಡಿ ವೈ ಎಸ್ ಪಿ ದೂರು, ಎಫ್ ಐ ಆರ್ ದಾಖಲು

ದಾವಣಗೆರೆ: (FIR) ದಾವಣಗೆರೆ ಜಿಲ್ಲೆಯ ಹರಿಹರ ನಗರಸಭೆಯ ಪೌರಾಯುಕ್ತರು, ಕಛೇರಿ ವ್ಯವಸ್ಥಾಪಕರು, ಕಂದಾಯ ನಿರೀಕ್ಷಕರು, ಸೇರಿದಂತೆ ಖಾಸಗಿ ವ್ಯಕ್ತಿಗಳ ವಿರುದ್ದ ದಾವಣಗೆರೆ ಲೋಕಾಯುಕ್ತ ಡಿ ವೈ ಎಸ್ ಪಿ ಕಲಾವತಿ ಯವರು ಹರಿಹರ ಪೋಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ.
FIR Details: ದಿನಾಂಕ:-09-04-2025 ರಂದು 07:10 PM ಗಂಟೆ ಪಿರ್ಯಾದುದಾರರಾದ ಶ್ರೀಮತಿ ಕಲಾವತಿ ಕೆ. ಪೊಲೀಸ್ ಉಪಾಧೀಕ್ಷಕರು, ಲೋಕಾಯುಕ್ತ ಪೊಲೀಸ್ ಠಾಣೆ ದಾವಣಗೆರೆ ಠಾಣೆಗೆ ಹಾಜರಾಗಿ “ನಾನು ಮಾನ್ಯ ನಿಬಂಧಕರು, ಆದೇಶದಂತೆ ದಿನಾಂಕ 07-04-2025 ರಂದು ಬೆಳಿಗೆ 10-30 ಗಂಟೆ ಸಮಯದಲ್ಲಿ ಹರಿಹರ ನಗರಸಭೆ ಕಛೇರಿಗೆ ಸಿಬ್ಬಂಧಿಯೊಂದಿಗೆ ಭೇಟಿ ನೀಡಿದಾಗ ಹರಿಹರ ನಗರಸಭೆ ಆವರಣದಲ್ಲಿ ಹರಿಹರ ನಗರ ಸಭೆ ಅಧಿಕಾರಿಗಳಾದ ಶ್ರೀ ಸುಬ್ರಮಣ್ಯ ಶೆಟ್ಟಿ, ಪೌರಾಯುಕ್ತರು ನಗರ ಸಭೆ ಹರಿಹರ, ಶ್ರೀಮತಿ ನಿರಂಜನಿ ಕಛೇರಿಯ ಮ್ಯಾನೇಜರ್, ನಗರ ಸಭೆ ಹರಿಹರ ಮತ್ತು ಕಂದಾಯ ನಿರೀಕ್ಷಕರಾದ ಶ್ರೀಮತಿ ಚಿತ್ರ ಮತ್ತು ಪ್ರಭಾರ ಕಂದಾಯ ನಿರೀಕ್ಷಕರಾದ ಶ್ರೀ ರಮೇಶ್ ರವರ ಶಾಮಿಯಾನ ಹಾಕಿಕೊಂಡು ಕಂಪ್ಯೂಟರ್ ಸಿಸ್ಟಂ ಹಾಗೂ ಪ್ರಿಂಟರ್ ಗಳನ್ನು ಬಳಕೆ ಮಾಡುತ್ತಾ ಏಪ್ರಿಲ್ 2025 ರ ಮಾಹೆಯೊಳಗೆ ಆಸ್ತಿ ತೆರಿಗೆ ಪಾವತಿ ಮಾಡಿದಲ್ಲಿ ಶೇ. 5 ರಷ್ಟು ವಿನಾಯ್ತಿ ನೀಡಲಾಗುವುದು ಅಂತಾ ಹೇಳುತ್ತಾ ಸಾರ್ವಜನಿಕರಿಂದ ಅರ್ಜಿಯೊಂದಕ್ಕೆ 30 ರಿಂದ 40 ರೂ ಗಳನ್ನು ಅಧಿಕಾರಿಗಳ ದುಪ್ರೇರಣೆಯಿಂದ ಖಾಸಗಿ ವ್ಯಕ್ತಿಗಳಾದ 1) ಶ್ರೀ ಮೌನೇಶ್ ಮತ್ತು 2) ಮಹ್ಮದ್ ಹಫೀಜ್ ವುಲ್ಲಾ, ಸಾರ್ವಜನಿಕ ನೌಕರರಂತೆ ನಟಿಸುತ್ತಾ ಹಣ ಪಡೆದುಕೊಂಡು ಯಾವುದೇ ರಶೀದಿ ನೀಡದೇ ಇರುವುದು ಕಂಡು ಬಂದಿರುತ್ತದೆ.
ಹಣ ಪಡೆದುಕೊಳ್ಳುತಿದ್ದ ಖಾಸಗಿ ವ್ಯಕ್ತಿಗಳಾದ 1) ಶ್ರೀ ಮೌನೇಶ್ ಮತ್ತು 2) ಮಹ್ಮದ್ ಹಫೀಜ್ ವುಲಾ.. ರವರನ್ನು ವಿಚಾರಿಸಲಾಗಿ ಶ್ರೀ ಸುಬ್ರಮಣ್ಯಶೆಟ್ಟಿ, ಪೌರಾಯುಕ್ತರು ನಗರ ಸಭೆ ಹರಿಹರ, ಶ್ರೀಮತಿ ನಿರಂಜನಿ ಕಛೇರಿಯ ಮ್ಯಾನೇಜರ್, ನಗರ ಸಭೆ ಹರಿಹರ ರವರ ಆದೇಶದ ಮೇರೆಗೆ ನಾವುಗಳು ಹಾಗೂ ಹನುಮಂತಪ್ಪ ತುಂಬಿಗೆರೆ ಹಣ ಸಂಗ್ರಹಿಸುತಿದ್ದಾಗಿ ತಿಳಿಸಿರುತ್ತಾರೆ,
ಕಂಪ್ಯೂಟರ್ ಹಾಗೂ ಪ್ರಿಂಟರ್ ಗಳನ್ನು ಈಗ್ಗೆ ಒಂದು ವಾರದಿಂದ ಬಳಕೆ ಮಾಡಿದ್ದು ಮೌನೇಶ್ ರವರ Bank of Maharashtra. 60249334579 01-01-202500 2.07-04-2025 1,63,266/- ರೂ ಗಳು ಜಮಾ ಆಗಿದ್ದು ಶ್ರೀ ಮಹಮದ್ ಹಫೀಜ್ ವುಲಾ.. ಈತನ ಹೆಸರಿನಲಿ.. ಹರಿಹರದಲಿ., ಆಕೌಂಟ್ ಇಲ್ಲದೇ ಇದ್ದುದರಿಂದ ಸಹೋದರನಾದ ಮಹಮದ್ ತೌಸಿಫ್‌ವುಲಾ ರವರ ಹರಿಹರದ SBI ಖಾತೆ ನಂ:- 41192379728 ರಲ್ಲಿ.. ವ್ಯವಹರಿಸುತ್ತಿದ್ದರಿಂದ ಸದರಿ ಖಾತೆಗೆ 89400/- ಗಳು ಜಮಾ ಆಗಿರುವುದು ಕಂಡುಬಂದಿರುತ್ತದೆ,
ಸದರಿ ರವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಕೋರಿದೆ.” ಎಂದು ಹರಿಹರ ಪೋಲೀಸ್ ಠಾಣಾ ಗುನ್ನೆ ಸಂಖ್ಯೆ 62/2025 ರಿತ್ಯಾ ಕಲಂ 204, 54, R/W 3(5) BNS-2023 ಕಾಯ್ದೆಯಡಿ ಪ್ರಕರಣ ದಾಖಲಿಸಿದೆ ಎಂದು ಎಫ್ ಐ ಆರ್ ನಲ್ಲಿ ಉಲ್ಲೇಖಿಸಲಾಗಿದೆ.