Fire Video: ಹರಿಹರದಲ್ಲಿ ಆಕಸ್ಮಿಕ ಅಗ್ನಿ ಅವಘಡ.! ಲಕ್ಷಾಂತರ ಮೌಲ್ಯದ ವಸ್ತುಗಳು ಭಸ್ಮ.! ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ವಿಡಿಯೋ ನೋಡಿ

ದಾವಣಗೆರೆ: ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ಮುಖ್ಯ ರಸ್ತೆಯಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಅವಘಡದಲ್ಲಿ ಲಕ್ಷಾಂತರ ಮೌಲ್ಯದ ಫ್ಲೋರಿಂಗ್, ಫರ್ನಿಷಿಂಗ್ ವಸ್ತುಗಳು ಅಗ್ನಿಗೆ ಆಹುತಿಯಾಗಿದೆ.
ಹರಿಹರದ ಶಿವಮೊಗ್ಗ ರಸ್ತೆಯ ಈ ಘಟನೆ ನಡೆದಿದ್ದು,
ಮಿಠಾಯಿ ಮಂಜುನಾಥ ಮಾಲೀಕತ್ವದ ವಾಣಿಜ್ಯ ಸಂಕೀರ್ಣ ಎನ್ನಲಾಗಿದೆ. ವಾಣಿಜ್ಯ ಸಂಕೀರ್ಣದಲ್ಲಿ ಪ್ರಭಾಕರ್ ಫ್ಲೋರಿಂಗ್, ಫರ್ನಿಶಿಂಗ್, ಪ್ರಶಾಂತ ಜ್ಯೂಯಲರ‌್ಸ್, ಮಮತಾ ವಾಚ್ ಸೆಂಟರ್ ಅಂಗಡಿಗಳು ಇದ್ದವು.
ಆಕಸ್ಮಿಕವಾಗಿ ಪ್ರಭಾಕರ್ ಫ್ಲೋರಿಂಗ್, ಫರ್ನಿಶಿಂಗ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಳ್ಳುವ ಮೂಲಕ ಇನ್ನೂಳಿದ ಅಂಗಡಿಗಳಿಗೂ ಬಂಕಿಯ ಕೆನ್ನಾಲಿಗೆ ಹಬ್ಬಿದೆ. ಅಂಗಡಿಯಲ್ಲಿ ಇದ್ದ ಎಲ್ಲಾ ವಸ್ತುಗಳು ಸಂಪೂರ್ಣವಾಗಿ ಬೆಂಕಿಗೆ ಅಹುತಿಯಾಗಿದೆ ಎನ್ನಲಾಗಿದೆ.
ಬೆಂಕಿಯ ಕೆನ್ನಾಲಿಗೆಗೆ ಅಂಗಡಿಗಳಲ್ಲಿದ್ದ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.ಅಗ್ನಿ ನಂದಿಸಲು ಹರಿಹರ, ಕುಮಾರಪಟ್ಟಣಂ ಹಾಗೂ ದಾವಣಗೆರೆ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ. 6 ಅಗ್ನಿಶಾಮಕ ವಾಹನಗಳಿಂದ ಅಗ್ನಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.