ಐದು ಜನ ಅಂತರ್ ರಾಜ್ಯ ದರೋಡೆಕೋರರ ಬಂಧನ

ಮಧ್ಯರಾತ್ರಿ ಸಮಯದಲ್ಲಿ ಆಜಾದ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಗನಹಳ್ಳಿ ರಸ್ತೆಯ ಚೌಡೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಬಿಳಿಯ ಬಣ್ಣದ ಸ್ಕಾರ್ಪಿಯೊ ಕಾರನ್ನು ನಿಲ್ಲಿಸಿಕೊಂಡು ಐದು ಜನರು ದರೋಡೆ ಮಾಡುವ ಉದ್ದೇಶದಿಂದ ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ನಿಲ್ಲಿಸಲು ಪ್ರಯತ್ನಿಸುತ್ತಾ ದರೋಡೆ ಮಾಡಲು ಯತ್ನಿಸುತ್ತಿದ್ದಾರೆಂದು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರವರಿಗೆ ಮಾಹಿತಿ ಬಂದಿದ್ದು, ಮಾಹಿತಿಯನ್ನು ಖಚಿತಪಡಿಸಿಕೊಂಡು ಕೂಡಲೇ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರು ಹಾಗೂ ನಗರ ಪೊಲೀಸ್ ಉಪಾಧೀಕ್ಷಕರವರುಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದು,ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ತಂಡವನ್ನು ರಚಿಸಿ ಮೇಲ್ಕಂಡ ಸ್ಥಳಕ್ಕೆ ಹೋಗಿ ದರೋಡೆ ತಂಡದ ಮೇಲೆ ದಾಳಿ ಮಾಡಿದ್ದು, ದರೋಡೆಗೆ ಹೊಂಚು ಹಾಕಿದ್ದ 5 ಜನ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಾದ 1.ದುರ್ಯೊಧನ ಸೇಲ್ ಗಾವ್ ಕರ್ಮಳ (ತಾ) ಸೊಲ್ಲಾಪುರ ಜಿಲ್ಲೆ., ) 2.ರಮೇಶ ಸೋಪಾನ , ಮಾಳಂಗಿ, ಕರ್ಜತ್ (ತಾ) ಅಹಮ್ಮದ್ ನಗರ ಜಿಲ್ಲೆ., 3.ಲಕ್ಷ್ಮಣ್ ಮಾಳಂಗಿ ಕರ್ಜತ್ (ತಾ) ಅಹಮ್ಮದ್ ನಗರ ಜಿಲ್ಲೆ , 4.ಲಕ್ಷ್ಮಣ ,ಸೈದಾಪುರ ಗ್ರಾಮ, ಸಾತಾರ (ತಾ), 5.ಗಣೇಶ ಜೊಪಡಿಪಟ್ಟಿ ಕರ್ಮಳ ಸೊಲ್ಲಾಪುರ (ತಾ) ಇವರೆಲ್ಲರೂ ಮಹಾರಾಷ್ಟ್ರ ಮೂಲದವರೆಂದು ತಿಳಿದುಬಂದಿದೆ.

ಬೆಂಗಳೂರಿನಿಂದ ಬಂಗಾರದ ವ್ಯಾಪರಿಯನ್ನು ಹಿಂಬಾಲಿಸಿ ಬಂದಿದ್ದು, ಬಂಗಾರದ ವ್ಯಾಪರಿಯು ಬೆಂಗಳೂರಿನಿಂದ 11 ಕೆಜಿ ಗಿಂತ ಹೆಚ್ಚು ಬಂಗಾರದ ಆಭರಣಗಳನ್ನು ತೆಗೆದುಕೊಂಡು ಬಂದು ದಾವಣಗೆರೆಯ ಲಾಡ್ಜ್ ವೊಂದರಲ್ಲಿ ರಾತ್ರಿ ತಂಗಿದ್ದು, ಇವರನ್ನು ಹಿಂಬಾಲಿಸಿ ಬಂದಿದ್ದ ದರೋಡೆ ತಂಡ ಸದರಿ ಬಂಗಾರ ವ್ಯಾಪರಿಯಲ್ಲಿದ್ದ ಆಭರಣಗಳನ್ನು ದರೋಡೆ ಮಾಡಲು ಲಾಡ್ಜ್ ಬಳಿ ಹೊಂಚು ಹಾಕಿದ್ದಾರೆ.

ಆದರೆ ಆ ಕೆಲಸ ವಿಫಲವಾಗಿದ್ದು, ನಂತರ ವಾಪಾಸ್ ಹೋಗಲು ನಿರ್ಧರಿಸಿದ್ದು, ವಾಪಸ್ ಹೋಗಲು ಖರ್ಚಿಗೆ ಹಣಕ್ಕಾಗಿ ದಾವಣಗೆರೆ ನಗರದಲ್ಲಿ ಸಂಚರಿಸಿ ರಾತ್ರಿ ಸಮಯದಲ್ಲಿ ದರೊಡೆ ಮಾಡಲು ಮೇಲ್ಕಂಡ ಸ್ಥಳದಲ್ಲಿ ಇರುವುದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.

ಆರೋಪಿಗಳು ಹಲವು ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದು ಹಾಗೂ ಈ ದರೋಡೆಕೋರರ ಮುಖ್ಯ ಟಾರ್ಗೆಟ್ ಬಂಗಾರದ ವ್ಯಾಪರಿಗಳುಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಆರೋಪಿಗಳನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಆರೋಪಿಗಳ ಸ್ಕ್ರಾಪಿಯೋ ಕಾರ್ ನಲ್ಲಿದ್ದ ಒಂದು ಶಾಕ್ ಅಬ್ಜರ್ ಪೈಪ್, ಒಂದು ಕಬ್ಬಿಣದ ರಾಡ್ ,ಒಂದು ಕಬ್ಬಿಣದ ನಲ್ಲಿ ಪೈಪ್ ,ಒಂದು ಜಾಲರಿ ಕಟ್ಟರ್ ,ಒಂದು ವೈರ್ ಕಟ್ಟರ್,, ಚಾಕುಗಳು,,ಹ್ಯಾಂಡ್ ಗ್ಲೌಸ್ , 3 ಹಗ್ಗಗಳು , ಮಾಸ್ಕ್, 5 ಕಾರದ ಪುಡಿ ಪಾಕಿಟ್ ಗಳು, ಒಂದು ಗಮ್ ಟೇಪ್, ಒಂದು ಬ್ಯಾಗ್ ಹಾಗೂ ಎರಡು MH-42-BJ-5141 ಸಂಖ್ಯೆ ಇರುವ ವಾಹನದ ನಂಬರ್ ಪ್ಲೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆ ಬಗ್ಗೆ ಠಾಣಾ ಗುನ್ನೆ ನಂ. 33/2024 ಕಲಂ. 399, 402, ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.

ದರೋಡೆಕೋರರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಹಾಗೂ ಆಗಬಹುದಾಗಿದ್ದ ದರೋಡೆ ಪ್ರಕರಣವನ್ನು ತಡೆಯುವಲ್ಲಿ ದಾವಣಗೆರೆ ಪೊಲೀಸ್ ತಂಡ ಯಾಶಸ್ವಿಯಾಗಿದ್ದು, ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪೊಲೀಸ್ ಅಧಿಕಾರಿಗಳಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ಶ್ರೀ ವಿಜಯಕುಮಾರ ಎಂ ಸಂತೋಷ ರವರು & ಶ್ರೀ ಜಿ ಮಂಜುನಾಥ ರವರು ಹಾಗೂ ನಗರ ಪೊಲೀಸ್ ಉಪಾಧೀಕ್ಷಕರವರಾದ ಶ್ರೀ ಮಲ್ಲೇಶ್ ದೊಡ್ಮನಿ ರವರು, ಆಜಾದ್ ನಗರ ಪೊಲೀಸ್ ನಿರೀಕ್ಷಕರಾದ ಶ್ರೀ ಅಶ್ವಿನ್ ಹಾಗೂ ಸಿಬ್ಬಂದಿಗಳಾದ – ಆಂಜನೇಯ ಕೆ.ಟಿ, ಮಜೀದ್ ಕೆ.ಸಿ, ರಾಘವೇಂದ್ರ, ಬಾಲರಾಜ್, ರಮೇಶ್ ನಾಯ್ಕ ಹಾಗು ಆಜಾದ್ ನಗರ ಠಾಣೆಯ ಸಿಬ್ಬಂದಿಗಳಾದ – ಮಂಜುನಾಥ ನಾಯ್ಕ, ಕೃಷ್ಣ ನಂದ್ಯಾಲ್, ತಿಪ್ಪೇಸ್ವಾಮಿ, ನಾಗರಾಜ ಡಿ ಬಿ, ವೆಂಕಟೇಶ, ನಾಗರಾಜ್, ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜು ರವರುಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಶ್ಲಾಘಿಸಿರುತ್ತಾರೆ.

 

Leave a Reply

Your email address will not be published. Required fields are marked *

error: Content is protected !!