ಅತಿವೃಷ್ಟಿ, ಬೆಳೆ ಹಾನಿ – 5.56 ಕೋಟಿ ಪರಿಹಾರ ಪಾವತಿ – ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ದಾವಣಗೆರೆ: ಜಿಲ್ಲೆಯಲ್ಲಿ ಅತಿ ವೃಷ್ಟಿಯಿಂದಾಗಿ 2021-22 ರ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 15,862.34 ಹೆಕ್ಟೇರು ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಈವರಗೆ 22095 ರೈತರ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಲಾಗಿದೆ.ನವೆಂಬರ್ ಅಂತ್ಯಕ್ಕೆ 12171 ರೈತರಿಗೆ 5ಕೋಟಿ 56 ಲಕ್ಷ ಪಾವತಿಸಲಾಗಿದ್ದು.ಅದರಲ್ಲಿ ನವೆಂಬರ್ ಮಾಹೆಯಲ್ಲಿ 8908 ರೈತರಿಗೆ 4ಕೋಟಿ 49 ಲಕ್ಷ 68 ಸಾವಿರ ರೂಗಳನ್ನು ಪಾವತಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.