ಹೂವಿನ ಮಾರುಕಟ್ಟೆಯಲ್ಲಿ ರೈತರಿಗೆ ಪುಂಡರ ಕಾಟ.! ರಸ್ತೆ ತಡೆದು ಪ್ರತಿಭಟನೆ.!
ದಾವಣಗೆರೆ: ದಾವಣಗೆರೆಯಲ್ಲಿ ಬೆಳ್ಳಂ ಬೆಳಗ್ಗೆ ಹೂ ಬೆಳೆಗಾರರು ಹಾಗೂ ರೈತರು ದಿಢೀರ್ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ನಗರದ ಭಾರತ್ ಕಾಲೋನಿಯಲ್ಲಿರುವ ಹೂ ಮಾರುಕಟ್ಟೆಯಲ್ಲಿ ಹೂ ಬೆಳೆದ ರೈತರು ಹಾಗೂ ಮಾರಾಟಗಾರಿಂದ ಸ್ಥಳೀಯ ಕೆಲ ಪುಡಾರಿ ಗುಂಡಾಗಳು ದೌರ್ಜನ್ಯ ನಡೆಸುತ್ತಿದ್ದಾರೆ ಹಾಗೂ ಚಾಕು ತೋರಿಸಿ ಹಣ ವಸೂಲಿ ಮಾಡುತ್ತಾರೆ, ಹೂವಿನ ಮಾರುಕಟ್ಟೆಯಲ್ಲಿ ಪುಂಡರ ದೌರ್ಜನ್ಯ ಅತಿರೇಕಕ್ಕೆ ತಲುಪಿದೆ ಎಂದು ಆರೋಪಿಸಿ ದಾವಣಗೆರೆ ಪಿಬಿ ರಸ್ತೆಯ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಎದುರುಗಡೆ ಪ್ರತಿಭಟನೆ ನಡೆಸಿದರು.
ವಾಹನಗಳನ್ನು ಅಡ್ಡಗಟ್ಟಿ ರಸ್ತೆ ತಡೆ ನಡೆಸಿದ ರೈತರು, ಮಾರುಕಟ್ಟೆಯಲ್ಲಿ ಮಾರಲು ತಂದಿದ್ದ ಹೂವನ್ನ ರಸ್ತೆಯಲ್ಲಿ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.ವರ್ತಕರಿಗೆ ಹೂ ಮಾರಾಟ ಮಾಡಿ ದಾರಿಯಲ್ಲಿ ಹೋಗುವಾಗ ಪುಂಡರ ಹಾವಳಿ ಜಾಸ್ತಿಯಾಗಿದೆಚಾಕುವಿನಿಂದ ಹಲ್ಲೆಗೆ ಯತ್ನಿಸಿ ಹಣ ದೋಚುತ್ತಾರೆ ಎಂಬ ಆರೋಪ ಹಲವಾರು ದಿನಗಳಿಂದ ಕೇಳಿಬಂದಿದೆ ಈ ಮಾರುಕಟ್ಟೆಯನ್ನ ಸ್ಥಳಾಂತರಿಸಿ ಎಂದು ಮನವಿ ಮಾಡಿಕೊಂಡರು.
ಹೂ ಬೆಳೆಯುವ ರೈತರ ಜೊತೆ ವರ್ತಕರು ಕೂಡ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಕೆಟಿಜೆ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸಲು ಪ್ರಯತ್ನಿಸಿದರು.