Fly Over Rain Water Stock: ಫ್ಲೈ ಓವರ್ ಮೇಲೆ ನೀರು.! ಮೇಲು ಸೇತುವೆ ನಿರ್ಮಾತರಿಗೆ ಹಿಡಿಶಾಪ: ಮಳೆ ನೀರು ಹೊರಹಾಕಿದ ಟ್ರಾಫಿಕ್ ಪೋಲೀಸ್

ಬೆಂಗಳೂರು: ಕೆ.ಆರ್ ಮಾರ್ಕೆಟ್ ಪ್ಲೈ ಓವರ್ ಮೇಲೆ ಮಳೆನೀರು ನಿಂತ ಪರಿಣಾಮ ವಾಹನ ಸಂಚಾರ ದಟ್ಟಣೆ ಉಂಟಾದ ಘಟನೆ ನಡೆದಿದೆ.
ಬೆಳ್ಳಂಬೆಳಗ್ಗೆ ಸುರಿದ ಭಾರಿ ಮಳೆಗೆ ಫ್ಲೈ ಓವರ್ ಮೇಲೆ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಯಿತು. ಕಚೇರಿಗೆ, ಅಂಗಡಿಗಳಿಗೆ ಹೋಗುತ್ತುದ್ದವರಿಗೆ ಭಾರೀ ತೊಂದರೆಯಾಯಿತು. ಈ ವೇಳೆ ಟ್ರಾಫಿಕ್ ಪೊಲೀಸರು ನೀರು ಹೊರಹಾಕಲು ಪ್ರಯತ್ನಿಸಿದರು.
ಆದರೆ, ಫ್ಲೈಓವರ್ ಮೇಲೂ ಮಳೆ ನೀರು ನಿಲ್ಲುವ ಹಾಗೆ ನಿರ್ಮಾಣ ಮಾಡಿರುವ ಇಂಜಿನಿಯರ್, ಟೆಂಡರ್ ದಾರರಿಗೆ ಜನರು ಹಿಡಿಶಾಪ ಹಾಕಿದ್ದು ಮಾತ್ರವಲ್ಲದೇ ಸಿವಿಲ್ ಕಾಮಗಾರಿಗಳ ತಲೆಬುಡದ ಅರಿವು ಇಲ್ಲದ ಇಂತಹ ಟೆಂಡರ್ ದಾರರಿಗೆ ಟೆಂಡರ್ ನೀಡಿರುವ ಬಿಬಿಎಂಪಿ ಕ್ರಮಕ್ಕೂ ಜನರು ಉಗಿದಿದ್ದಾರೆ.