Food: ಬೆಂಕಿ ಇಲ್ಲದ ಅಡುಗೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಆರೋಗ್ಯಕರ : ದಿನೇಶ್ ಕೆ ಶೆಟ್ಟಿ

ದಾವಣಗೆರೆ: (FOOD) ದಿ ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್, ಕರ್ನಾಟಕ ರಾಜ್ಯದ ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆ, ದಾವಣಗೆರೆ ಇವರ ವತಿಯಿಂದ ದಿನಾಂಕ 02-08-2018 ಶನಿವಾರದಂದು ಸೇಂಟ್ ಫಾಲ್ಸ್ ಕಾನ್ವೆಂಟ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆ ಮತ್ತು ಸೃಜನಾತ್ಮಕತೆಯನ್ನು ಉತ್ತೇಜಿಸುವ ಉದ್ದೇಶದಿಂದ “ಬೆಂಕಿ ಇಲ್ಲದ ಅಡುಗೆ (Cooking Without Fire)” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಮಾರಂಭದ ಉದ್ಘಾಟನೆಯನ್ನು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಕೊಂಡಜಿಬಸಪ್ಪ ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ವಿದ್ಯಾರ್ಥಿಗಳ ಚಾತುರ್ಯ, ಕಲ್ಪನೆ ಹಾಗೂ ಆಹಾರ ತಯಾರಿಕೆಯಲ್ಲಿ ತೋರಿದ ನೈಪುಣ್ಯವನ್ನು ಶ್ಲಾಘಿಸಿದರು. ಈ ರೀತಿಯ ಆಹಾರ ಈ ರೀತಿಯ ಆಹಾರ ಜೀವನದಲ್ಲಿ ಬದಲಾವಣೆ ಮಾಡಿಕೊಂಡರೆ ಜೀವನವು ಆರೋಗ್ಯವು ತುಂಬಾ ಉತ್ತಮ ರೀತಿಯಲ್ಲಿ ಇರುತ್ತದೆ ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ತಂಡ ಕೌಶಲ್ಯ ಹಾಗೂ ಆರೋಗ್ಯಪೂರ್ಣ ಜೀವನಶೈಲಿ ಬಗ್ಗೆ ಅರಿವು ಉಂಟುಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮನೆಯಿಂದ ತಯಾರಿಸಿದ ವಿವಿಧ ರೀತಿಯ ಪೌಷ್ಟಿಕ, ರುಚಿಕರ ಹಾಗೂ ಆಕರ್ಷಕ ತಿನಿಸುಗಳನ್ನು ಶಾಲೆಯ ಆವರಣದಲ್ಲಿ ಪ್ರದರ್ಶನಗೊಳಿಸಿದರು. ಆರೋಗ್ಯಕರ ಆಹಾರ ಸಂಸ್ಕೃತಿಯನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ ಅತ್ಯಂತ ಪರಿಣಾಮಕಾರಿಯಾಗಿ ಜರುಗಿತು.

ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರಾದ ಸಿಸ್ಟರ್ ಸ್ಕೆಲಮೇರಿ, ಆಡಳಿತಾಧಿಕಾರಿ ಸಿಸ್ಟರ್ ರಶ್ಮಿ, ಕಾಲೇಜ್ ಪ್ರಿನ್ಸಿಪಾಲ್ ಶ್ರೀ ಮೇಘನಾಥ್, ಗೈಡ್ ಕ್ಯಾಪ್ಟನ್ ಶ್ರೀಮತಿ ಆಶಾ ಸೂಸಿ ಮೇರಿ, ಮತ್ತು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ರವೀಂದ್ರಸ್ವಾಮಿ ಟಿ.ಎಂ. ಉಪಸ್ಥಿತರಿದ್ದರು.
ಅಂತಿಮವಾಗಿ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ಹಾಗೂ ಉತ್ಕೃಷ್ಟ ತಯಾರಿಕೆಗೈದವರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳ ಉತ್ಸಾಹ ಹಾಗೂ ಶಿಕ್ಷಕರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.