ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ ಆಹಾರ ವಿತರಿಸಿದ ಸ್ನೆಹಿತರ ಬಳಗ, ಮೇಯರ್ ವಿರೇಶ್ ಎಸ್ ಪಿ ಹನುಮಂತರಾಯ ಚಾಲನೆ

ದಾವಣಗೆರೆ: ವಾರದ ಕೊನೆ ದಿನದ ಕರ್ಪ್ಯೂ ಹಿನ್ನೆಲೆ, ಕರ್ತವ್ಯದಲ್ಲಿರುವ ಪೊಲೀಸರಿಗೆ ದಾವಣಗೆರೆ ಗೆಳೆಯರ ಬಳಗದಿಂದ ಆಹಾರ ವಿತರಣೆ ಮಾಡಲಾಯಿತು. ಛಾಯಾಗ್ರಾಹಕ ಸಾಗರ್ ಹಾಗೂ ಸ್ನೇಹಿತರು ಸೇರಿಕೊಂಡು 300 ಆಹಾರದ ಪೊಟ್ಟಣ ಹಾಗೂ ನೀರಿನ ಬಾಟಲ್ ಗಳನ್ನ ವಿತರಿಸಿದರು.
ನಗರದ ಜಯದೇವ ವೃತ್ತದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ಮಹಾಪೌರರಾದ ಎಸ್ ಟಿ ವಿರೇಶ್ ಹಾಗೂ ಜಿಲ್ಲಾ ರಕ್ಷಣಾಧಿಕಾರಿ ಹನುಮಂತರಾಯ ಪೊಲೀಸ್ ಸಿಬ್ಬಂದಿಗಳಿಗೆ ಆಹಾರವನ್ನ ನೀಡಿದರು. ವೀಕೆಂಡ್ ಕರ್ಪ್ಯೂ ಹಿನ್ನೆಲೆ ನಗರದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದೆ,ಎಲ್ಲೂ ಕೂಡ ಹೊಟೆಲ್ ತೆರೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.ಇದರಿಂದ ಕರ್ತವ್ಯ ನಿರ್ವಹಿಸುವ ಎಲ್ಲಾ ಪೊಲಿಸ್ ರಿಗೆ ಆಹಾರದ ಪೊಟ್ಟಣ ನೀಡಲಾಗಿದೆ ಎನ್ನುತ್ತಾರೆ ಸ್ನೇಹ ಬಳಗದ ಸ್ನೇಹಿತರು.