ತಾಯಿ ಆಸೆಯಂತೆ ನೊಂದವರಿಗೆ ನೆರವು ನೀಡಿದ ನಿವೃತ್ತ ಇಂಜಿನಿಯರ್ ಆನಂದಪ್ಪ:ಛಾಯಾಗ್ರಾಹಕರಿಗೆ ದಿನಸಿ ಕಿಟ್ ವಿತರಣೆ

food_kit_distribute_engineer_anandappa_to_photographers[1]

ದಾವಣಗೆರೆ: ಛಾಯಾಗ್ರಾಹಣ ವೃತ್ತಿ ಮಾಡುವುದರ ಜೊತೆಗೆ ನೀವುಗಳು ನಿಮ್ಮ ಆರೋಗ್ಯ, ಕುಟುಂಬದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು ಎಂದು ಛಾಯಾಗ್ರಾಹಕರಿಗೆ ನಿವೃತ್ತ ಇಂಜಿನಿಯರ್ ಎಸ್.ಎಲ್.ಆನಂದಪ್ಪ ತಿಳಿಸಿದರು.

ನಗರದ ವಿನೋಬನಗರದಲ್ಲಿ ಛಾಯಾಗ್ರಾಹಕ ಮನು ನಿವಾಸದ ಬಳಿ ಶನಿವಾರ ಕೊರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ಅವರ ತಾಯಿ ಶ್ರೀಮತಿ ದ್ಯಾಮಮ್ಮ ಲಕ್ಷ್ಮಪ್ಪ ಯಕ್ಕನಹಳ್ಳಿ ಇವರ ಜ್ಞಾಪಕಾರ್ಥವಾಗಿ ನಡೆದ ಆಹಾರ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿ, ನನಗೆ ನಿಮ್ಮೊಂದಿಗೆ ಬೆರೆಯುವ ಅವಕಾಶ ದೊರಕಿದ್ದು ಬಹಳ ಸಂತೋಷದ ವಿಷಯ ಎಂದರು.

ಕಳೆದ ವರ್ಷ ಹಾಗೂ ಈ ವರ್ಷ ಕೊರೋನಾ ಲಾಕ್‍ಡೌನ್‍ನಿಂದಾಗಿ ಬಹಳ ಸಂಕಷ್ಟದಲ್ಲಿದ್ದು ಬಹಳ ತೊಂದರೆ ಅನುಭವಿಸುತ್ತಿದ್ದು ಅಂತಹವರಿಗೆ ನೆರವಾಗುವ ನಿಟ್ಟಿನಲ್ಲಿ ನಮ್ಮ ತಾಯಿಯವರ ಆಸೆಯಂತೆ ಕೊರೋನಾ ಸಂಕಷ್ಟದಲ್ಲಿ ಏನಾದರೂ ಇನ್ನೊಬ್ಬರಿಗೆ ಸಹಾಯ ಮಾಡು ಎಂದು ನಮ್ಮ ತಾಯಿ ತಾವು ಸಾಯುವ ಕೆಲವು ದಿನಗಳ ಹಿಂದೆ ನನಗೆ ತಿಳಿಸಿದ್ದರು. ಅವರುಗಳ ಬಡವರಿಗೆ, ಪತ್ರಕರ್ತರಿಗೆ, ಛಾಯಾಗ್ರಾಹಕರಿಗೆ ಆಹಾರ ದಿನಸಿ ಕಿಟ್ ವಿತರಿಸುತ್ತಿದ್ದೇನೆ. ಇನ್ನೂ ನನ್ನ ಕೈಲಾದ ಮಟ್ಟಿಗೆ ಸಹಾಯ ಹಸ್ತ ನೀಡಲು ನಾನು ತಯಾರಿದ್ದೇನೆ. ಇದರಿಂದ ನಮ್ಮ ಪೋಷಕರ ಆತ್ಮಕ್ಕೆ ಶಾಂತಿ ಸಿಕ್ಕಂತಾಗುತ್ತದೆ ಎಂದು ತಮ್ಮ ದುಃಖ ವ್ಯಕ್ತಪಡಿಸಿದರು.

ಜಿಲ್ಲಾ ಕುರುಬ ಸಮಾಜದ ಮುಖಂಡರಾದ ಪಿ.ಷಣ್ಮುಖಪ್ಪ, ಪರಶುರಾಮಪ್ಪ, ಮಾಜಿ ಮೇಯರ್ ಗೋಣೆಪ್ಪ, ಅಡನಿ ಸಿದ್ದಪ್ಪ, ಮಾಜಿ ನಗರಸಭಾ ಸದಸ್ಯ ಎನ್.ಜಿ.ನಿಂಗಪ್ಪ, ದಾವಣಗೆರೆ ತಾ. ಫೋಟೋ ಮತ್ತು ವಿಡಿಯೋ ಗ್ರಾಫರ್ಸ್ ಸಂಘದ ಅಧ್ಯಕ್ಷ ಬಿ.ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎಂ.ಮನು, ಉಪಾಧ್ಯಕ್ಷ ಗಣೇಶ ಚಿನ್ನಿಕಟ್ಟೆ, ಸಹಕಾರ್ಯದರ್ಶಿ ಚನ್ನಬಸವ, ಸದಸ್ಯರಾದ ಮಲ್ಲೇಶ, ವೀರೇಶ, ಹರೀಶ, ಸಂತೋಷ, ಗಣೇಶ ಶಾಮಿಯಾನ ರಮೇಶ, ಮಾಲತೇಶ, ಸಂತೋಷ, ಭೂಮಿಕಾ ಸಂಜಯ್, ಜನಾಂದೋಲನ ಕರ್ನಾಟಕ ಬಾಪುಲೆ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಆನಂದರಾವ್, ರವೀಂದ್ರಜಿ, ವಿಶ್ವ ಹಿಂದು ಪರಿಷತ್ ಅಧ್ಯಕ್ಷರು, ಆರ್.ಪ್ರತಾಪ್, ವಕ್ತಾರವರ ಸಿಂಗ್, ರಾಕೇಶ ಜೈನ್, ರತ್ನಾಕರ್, ಬಗಲಿ ಮರಾಠ ಸಮಾಜದ ಮುಖಂಡರು, ಆರ್‍ಎಸ್‍ಎಸ್ ಮುಖಂಡ ಮಂಜುನಾಥ ಗಾಂಧಿನಗರ, ಶಿಕ್ಷಕ ಮಹಾಲಿಂಗಪ್ಪ, ಪಂಚಾಕ್ಷರಯ್ಯ ಸೇರಿದಂತೆ ಇತರರು ಇದ್ದರು. ಈ ಸಂದರ್ಭದಲ್ಲಿ 65 ಜನ ಛಾಯಾಗ್ರಾಹಕರಿಗೆ ಆಹಾರ ದಿನಸಿ ಕಿಟ್ ವಿತರಿಸಲಾಯಿತು.

Leave a Reply

Your email address will not be published. Required fields are marked *

error: Content is protected !!