ಪುಡ್ ಕಿಟ್ ವಿತರಿಸುವಲ್ಲಿ ಬ್ರೋಕರ್ ಗಳ ಹಾವಳಿ.!

ದಾವಣಗೆರೆ: ಸರ್ಕಾರದ ಯಾವುದೇ ಇಲಾಖೆಗೆ ಹೋದರೂ ಅಲ್ಲಿ ಬ್ರೋಕರ್ ಗಳ ಹಾವಳಿ ತಪ್ಪಿದ್ದಲ್ಲ. ಯಾವುದೇ ಕೆಲಸಗಳು ಆಗಬೇಕೆಂದರೂ ಅಲ್ಲಿ ದಲ್ಲಾಳಿಗಳು ಇರಲೇಬೇಕು ಎಂಬಂತಾಗಿದೆ ಪರಿಸ್ಥಿತಿ!
ಆ ದಲ್ಲಾಳಿಗಳಿಗೆ ಒಂದಷ್ಟು ಹಣ ನೀಡಿದರೆ ನಿಮ್ಮ ಕೆಲಸ ಆಯಿತು ಎಂಬಂತೇ ಲೆಕ್ಕ. ಆದರೆ, ಈಗ ದಲ್ಲಾಳಿಗಳು ಫುಡ್ ಕಿಟ್ ವಿತರಿಸುವಲ್ಲಿಯೂ ಪಾತ್ರ ವಹಿಸುತ್ತಿರುವುದು ಇಲಾಖೆಗೆ ನಾಚಿಕೆಗೇಡಿನ ಸಂಗತಿಯೇ ಸರಿ.
ಹೌದು, ಕಾರ್ಮಿಕ ಇಲಾಖೆಯಿಂದ ಕಟ್ಟಡ ಕಾರ್ಮಿಕರಿಗೆ ಕೊಡಲಾಗುತ್ತಿರುವ ಫುಡ್ ಕಿಟ್ ನಲ್ಲೂ ಸಹ ಈ ಬ್ರೋಕರ್ ಗಳ ಹಾವಳಿ ಕಂಡುಬಂದಿದೆ. ಕಾರ್ಮಿಕರ ಇಲಾಖೆ ಕಿಟ್ ಈಗ ಬ್ರೋಕರ್ ಮಧ್ಯಸ್ಥಿಕೆಯಲ್ಲೇ ನಡೆಯುತ್ತಿದೆ.
ಕಾರ್ಮಿಕರ ಇಲಾಖೆಯಿಂದ ಕೂಪನ್ ಗಳನ್ನು ಯೂನಿಯನ್ ಗಳಿಗೆ ನೀಡಲಾಗಿದೆ. ಆಹಾರ ಕಿಟ್ ಕೂಪನ್ ನೀಡುತ್ತೇವೆ ಎಂದು 100 ಅಥವಾ 200 ರೂ., ಹಣ ಪಡೆದು ದಲ್ಲಾಳಿಗಳು ಕೂಪನ್ ವಿತರಿಸುತ್ತಿದ್ದಾರೆ.
ಅಧಿಕಾರಿಗಳ ಮುಂದೆಯೇ ತಮಗೆ ಬೇಕಾದವರಿಗೆ ಕಿಟ್ ವಿತರಿಸುತ್ತಿದ್ದು, ಕೂಪನ್ ಇಲ್ಲದೆ, ಕಾರ್ಮಿಕ ಕಾರ್ಡ್ ತೆಗೆದುಕೊಂಡು ಬಂದ ಕಾರ್ಮಿಕರಿಗಿಲ್ಲ ಕಿಟ್ ನೀಡುತ್ತಿಲ್ಲ.
ಒಟ್ಟಿನಲ್ಲಿ ನಿಜವಾದ ಕಾರ್ಮಿಕರ ಕೈಗೆ ಸಿಗದೇ ಕಾರ್ಮಿಕರ ಹೆಸರೇಳಿಕೊಂಡಿರುವ ಬೋಗಸ್ ಜನರಿಗೆ ಈ ಫುಡ್ ಕಿಟ್ ಸಿಗುತ್ತಿದ್ದು, ದಲ್ಲಾಳಿಗಳ ಹಾವಳಿ ಹೆಚ್ಚಾಗುವಂತೆ ಮಾಡುತ್ತಿರುವ ಕಾರ್ಮಿಕ ಇಲಾಖೆಗೆ ನೈಜ ಕಟ್ಟಡ ಕಾರ್ಮಿಕರು ಹಿಡಿ ಶಾಪ ಹಾಕುತ್ತಿದ್ದಾರೆ.