ಬೆಂಗಳೂರಿನ ನಾಲ್ಕು ಶಾಲೆಗಳಿಗೆ ಬಾಂಬ್ ಇಟ್ಟಿದ್ದೇವೆ! ಜೋಕ್ ಅಲ್ಲ, ಅನಾಮಿಕ ಇ-ಮೇಲ್ ಸಂದೇಶ
ಬೆಂಗಳೂರು: ಬೆಂಗಳೂರು ನಗರದ ನಾಲ್ಕು ಶಾಲೆಗಳಲ್ಲಿ ಬಾಂಬ್ ಇಟ್ಟಿರುವುದಾಗಿ ಅನಾಮಿಕ ಇ-ಮೇಲ್ ಮೂಲಕ ಬೆದರಿಕೆ ಹಾಕಲಾಗಿದೆ. ಅನಾಮಿಕ ಇ-ಮೇಲ್ ಆಧರಿಸಿ ಬೆಂಗಳೂರಿನ ನಾಲ್ಕು ಶಾಲೆಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ತಾಂತ್ರಿಕ ನಿಪುಣರು ಇ-ಮೇಲ್ ಜಾಡು ಹಿಡಿದು ತನಿಖೆ ನಡೆಸುತ್ತಿದ್ದಾರೆ. ಮತ್ತೊಂದೆಡೆ ಉಲ್ಲೇಖಿತ ಶಾಲೆಗಳಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅನಾಮಿಕ ಇ ಮೇಲ್ ಮೂಲಕ ನಾಲ್ಕು ಕಡೆ ಬಾಂಬ್ ಇಟ್ಟಿರುವ ಬೆದರಿಕೆ ಹಾಕಿರುವ ವಿಚಾರವನ್ನು ಸ್ವತಃ ಬೆಂಗಳೂರಿನ ನಗರ ಪೊಲೀಸ್ ಆಯುಕ್ತ ಕಮಲಪಂತ್ ಅವರೇ ಸ್ಪಷ್ಟಪಡಿಸಿದ್ದಾರೆ.
ಪವರ್ ಪುಲ್ ಬಾಂಬ್ ನ್ನು ನಿಮ್ಮ ಶಾಲೆಯಲ್ಲಿ ಇಡಲಾಗಿದೆ. ಇದು ತಮಾಷೆ ಎಂದು ಪರಿಗಣಿಸಬೇಡಿ. ತುಂಬಾ ಪವರ್ ಪುಲ್ ಬಾಂಬ್ ನಿಮ್ಮ ಶಾಲೆಯಲ್ಲಿಡಲಾಗಿದ್ದು, ಇದು ಸ್ಫೋಟಿಸಿದರೆ, ತುಂಬಾ ಸಾವು ನೋವು ಸಂಭವಿಸಲಿವೆ. ಕೂಡಲೇ ಪೊಲೀಸರಿಗೆ ತಿಳಿಸಿ. ಈಗ ಪ್ರತಿಯೊಂದು ನಿಮ್ಮ ಕೈಯಲ್ಲಿದೆ ಎಂದು ಇಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ.
ಈ ಇ-ಮೇಲ್ ಆಧರಿಸಿ ಬೆಂಗಳೂರು ಹೊರ ವಲಯದ ಹೆಬ್ಬಗೋಡಿ ಸಮೀಪದ ಖಾಸಗಿ ಶಾಲೆ ಹಾಗೂ ಹೆಣ್ಣೂರು ಬಳಿಯ ಖಾಸಗಿ ಶಾಲೆ ಹೆಸರು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಾಂಬ್ ನಿಷ್ಕಿçಯ ದಳದೊಂದಿಗೆ ಭೇಟಿ ನೀಡಿ ತಪಾಸಣೆ ನಡಸಿದ್ದಾರೆ. ಸದ್ಯದ ಮಟ್ಟಿಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಶಾಲೆಗಳಲ್ಲಿನ ಸಿಬ್ಬಂದಿ ಮತ್ತು ಪೋಷಕರನ್ನು ಹೊರ ಕಳಿಸಿ ಪೊಲೀಸರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದರು. ಬಹುತೇಕ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿದೆ. ಅದರ ಜತೆಗೆ ಶುಕ್ರವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಿದ್ದು, ಯಾರೋ ಕಿಡಿಗೇಡಿಗಳು ಹುಸಿ ಬಾಂಬ್ ಬೆದರಿಕೆ ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಬೆದರಿಕೆ ಹಾಕಿದ ಇ ಮೇಲ್ ಜಾಡು ಹಿಡಿದು ಪೊಲೀಸರ ಮತ್ತೊಂದು ತಂಡ ತನಿಖೆ ನಡೆಸುತ್ತಿದೆ.
ಸುದ್ದಿಗಾಗಿ ಸಂಪರ್ಕಿಸಿ: garudavoice21@gmail.com 9740365719