ಮಸೀದಿ ಬಳಿ ಕೇಸರಿ ಧ್ವಜ ಹಾರಿಸಿದ ನಾಲ್ವರು ಯುವಕರ ಬಂಧನ

ಮಸೀದಿ ಬಳಿ ಕೇಸರಿ ಧ್ವಜ ಹಾರಿಸಿದ ನಾಲ್ವರು ಯುವಕರ ಬಂಧನ

ಉತ್ತರ ಪ್ರದೇಶ : ಮಸೀದಿ ಬಳಿ ಕೇಸರಿ ಧ್ವಜ ಹಾರಿಸಿದ ಕಾರಣಕ್ಕಾಗಿ ನಾಲ್ವರನ್ನು ಬಂಧಿಸಿರುವ ಘಟನೆ ನಡೆದಿದೆ.
ಮಥುರಾದ ಜಮಾಲ್‌ ಮಸೀದಿಯ ಸಮೀಪ ಶಾಂತಿಭಂಗ ಮಾಡಿದ ಪ್ರಕರಣದಲ್ಲಿ ಕಾವ್ಯ, ಹನಿ, ರಾಜೇಶ್‌ ಹಾಗೂ ದೀಪಕ್‌ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಗುರುವಾರ ನಡೆದ ರಾಮನವಮಿ ಮೆರವಣಿಗೆ ವೇಳೆ ಮಸೀದಿಯ ಸಮೀಪ ಇರುವ ಕಟ್ಟಡವೊಂದರಲ್ಲಿ ಕೇಸರಿ ಧ್ವಜ ಹಾರಿಸಿದ ಆರೋಪ ಇವರ ಮೇಲೆ ಇದೆ.
ಘಿಯಾಮಂಡಿ ‍ಪ್ರದೇಶದಲ್ಲಿರುವ ರಾಮ ಮಂದಿರದ ರಾಮ ಜನ್ಮ ಮಹೋತ್ಸವ ಸಮಿತಿ ಆಯೋಜಿಸಿದ್ದ ಮೆರವಣಿಗೆಯು ಚೌಕ್‌ ಬಜಾರ್‌ ಬಳಿ ತಲುಪಿದಾಗ ಇವರು ಈ ಕೃತ್ಯ ಎಸಗಿದ್ದಾರೆ.
ವಾಹನ ಚಲಾಯಿಸುತ್ತಿದ್ದ ಈ ನಾಲ್ವರು, ಮಸೀದಿಯ ಬಳಿ ಇದ್ದ ಕಟ್ಟಡ ಏರಿ, ಅಲ್ಲಿ ಕೇಸರಿ ಧ್ವಜಗಳನ್ನು ಹಾರಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಅವರ ಕೃತ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸ್ಥಳದಲ್ಲಿ  ಹಿಂದೂ–ಮುಸ್ಲಿಮರ ನಡುವೆ ಕೋಮು ಉದ್ವೇಗಗೊಳಿಸುವ  ವಾತಾವರಣ ಸೃಷ್ಠಿಯಾಗಿತ್ತು.
ಕೂಡಲೇ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ, ಸಂಭಾವ್ಯ ಅಪಾಯವನ್ನು ತಪ್ಪಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!