ದಾವಣಗೆರೆಯ ಪ್ರತಿಷ್ಠಿತ ದವನ್ ಕಾಲೇಜಿನಲ್ಲಿ ಪ್ರತಿಭಾ ಪುರಾಸ್ಕಾರ ಉದ್ಘಾಟಿಸಿದ ಫ್ರೋ.ಬಿ.ಡಿ.ಕುಂಬಾರ್

ದಾವಣಗೆರೆ: ದಾವಣಗೆರೆಯ ಪ್ರತಿಷ್ಠಿತ ದವನ್ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೇರವೆರಿಸಲಾಯಿತು.
ದಾವಣಗೆರೆ ವಿಶ್ವವಿದ್ಯಾನಿಲಯ ದ ಕುಲಪತಿ ಪ್ರೊ. ಬಿ. ಡಿ. ಕುಂಬಾರ್ ರವರು ಸಮಾರಂಭ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ವರದಾನವಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಕರೆನೀಡಿದರು. ಈ ಸಂದರ್ಭದಲ್ಲಿ ಬಾಪೂಜಿ ಬಿ ಸ್ಕೂಲ್ ನ ನಿರ್ದೇಶಕರಾದ ಡಾ. ಸ್ವಾಮಿ ತ್ರಿಭುವಾನಂದ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಶ್ರೀ ಏನ್ ಪರಶುರಾಮಗೌಡ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ಕಾರ್ಯದರ್ಶಿ ವೀರೇಶ್ ಪಟೇಲ್, ನಿರ್ದೇಶಕ ಹರ್ಷರಾಜ್ ಗುಜ್ಜಾರ್, ಕಾಲೇಜಿನ ಶೈಕ್ಷಣಿಕ ಸಲಹೆಗಾರ ಪ್ರೊ. ಬಾತಿ ಬಸವರಾಜ್, ನೂತನ ಕಾಲೇಜು ಪ್ರಾಂಶುಪಾಲ ಎಸ್. ಹಾಲಪ್ಪ, ಜಂಟಿ ಕಾರ್ಯದರ್ಶಿ ಡಾ. ಜಿ.ಎಸ್. ಅಂಜು, ನೂತನ ವಿದ್ಯಾಸಂಸ್ಥೆ ಖಜಾಂಚಿ ಎಂ.ಇ. ವಾಣಿ ಉಪಸ್ಥಿತರಿದ್ದರು.