ಐದು ಲಕ್ಷ ರೂಪಾಯಿ ಮೊತ್ತದ ಉಚಿತ ಮನೆ.!ಒಂದರಿಂದ ದ್ವಿತೀಯ ಪಿಯುಸಿ ವರೆಗೆ ಉಚಿತ ಶಿಕ್ಷಣ – ಹೆಚ್ ಡಿ ಕೆ
ದಾವಣಗೆರೆ: ಕೊಂಡಜ್ಜಿಯಲ್ಲಿ ಹೆಚ್ ಡಿ ಕೆ ಭಾಷಣದ ತುಣುಕುಗಳು..
2018ರಲ್ಲಿ ನಾನು 25000 ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ
ಸಾಲ ಮನ್ನಾ ಮಾಡಲು ಕಾಂಗ್ರೆಸ್ ಜತೆ ಮೈತ್ರಿ ಸರಕಾರ ಮಾಡಿದೆ
ಆದರೆ, ಕಾಂಗ್ರೆಸ್ ಪಕ್ಷ ಸಹಕಾರ ಕೊಡಲಿಲ್ಲ
ಆದರೂ ಹಠ ಬಿಡದೆ ಸಾಲ ಮನ್ನಾ ಮಾಡಿದೆ
ಕೊಂಡಜ್ಜಿ ಗ್ರಾಮ ಒಂದರಲ್ಲೆ 85 ಲಕ್ಷ ರು ಸಾಲ ಮನ್ನಾ ಆಗಿದೆ
ಬಿಜೆಪಿ ಸರಕಾರ ಬಂದ ಮೇಲೆ ಎರಡು ಲಕ್ಷ ಕುಟುಂಬಗಳಿಗೆ ಸಾಲ ಮನ್ನಾ ಆಗಲು ಬಿಡಲಿಲ್ಲ
ಸುಮಾರು 7000 ಕೋಟಿ ರೂಪಾಯಿಯನ್ನು ಬಿಜೆಪಿ ಸರಕಾರ ಬೇರೆಡೆ ಗೆ ವರ್ಗಾಯಿಸಿಕೊಂಡಿತು
ಎರಡು ಲಕ್ಷ ಕುಟುಂಬಗಳಿಗೆ ಬಿಜೆಪಿ ಸರಕಾರ ಅನ್ಯಾಯ ಮಾಡಿತು
ವಿಧವಾ ತಾಯಂದಿರ ಮಾಶಾಸನ ವನ್ನು 800 ರು.ಗಳಿಂದ 2000 ರು.ಗಳಿಗೆ ಹೆಚ್ಚಳ ಮಾಡುವೆ
ಅರವತ್ತು ವರ್ಷ ಮೀರಿದ ಹಿರಿಯರಿಗೆ ಮಾಸಿಕ 5000 ಮಾಸಾಶನ ಕೊಡುವೆ
ವಿಕಲಚತನರಿಗೆ ಮಾಸಿಕ 1200 ಮಾಶಾಸನ ಇದ್ದು, ಅದನ್ನು 2500 ಕ್ಕೆ ಹೆಚ್ಚಿಸುವೆ
ಹಾಗೆಯೇ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುತ್ತೇನೆ.
ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ಈ ಸಾಲ ಮನ್ನಾ ಮಾಡುತ್ತೇನೆ
ತೆಲಂಗಾಣ ಮಾದರಿಯ ರೈತಬಂಧು ಕಾರ್ಯಕ್ರಮ ಜಾರಿ ಮಾಡುತ್ತೇನೆ
ಬಿತ್ತನೆ ಮಾಡುವ ಕಾಲಕ್ಕೆ ಸರಿಯಾಗಿ ಪ್ರತಿ ವರ್ಷ ಎಕರೆಗೆ 10,000 ರು. ಕೊಡಲಾಗುವುದು
ಹತ್ತು ಎಕರೆ ಇದ್ದಾರೆ ಹತ್ತು ಲಕ್ಷ ಕೊಡಲಾಗುವುದು
ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ರೈತರು ಖಾಸಗಿ ಮಂದಿ ಬಳಿ ಸಾಲ ಮಾಡಬಾರದು
ಐದು ಲಕ್ಷ ರೂಪಾಯಿ ಮೊತ್ತದ ಉಚಿತ ಮನೆ
ಒಂದರಿಂದ ದ್ವಿತೀಯ ಪಿಯುಸಿ ವರೆಗೆ ಉಚಿತ ಶಿಕ್ಷಣ
ರೈತರಿಗೆ ನಿತ್ಯ 24 ಗಂಟೆಯೂ ಉಚಿತ ವಿದ್ಯುತ್
ಕುಮಾರಸ್ವಾಮಿ ಅವರ ಭರವಸೆ
ಪಂಚರತ್ನ ಯೋಜನೆಗಳನ್ನು ಜಾರಿ ಮಾಡುವುದು ನನ್ನ ಗುರಿ