ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದ ಪರ ಮತದಾರರ ಸೆಳೆಯುತ್ತಿರುವ ಜಿ.ಎಸ್. ಶ್ಯಾಮ್

ದಾವಣಗೆರೆ :ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಜಿಲ್ಲೆಯಲ್ಲಿ ಪಕ್ಷಗಳು ಮತ್ತು ಅಭ್ಯರ್ಥಿಗಳ ಪ್ರಚಾರ ಬಿರುಸಿನಿಂದ ಸಾಗಿದ್ದು, ಆ ಮೂಲಕ ಮತದಾರರ ಸೆಳೆದು ಗೆಲುವಿಗಾಗಿ ಸೆಣಸಾಟ ನಿರಂತರವಾಗಿ ನಡೆದಿದೆ.ಅಂತೆಯೇ ಜಿಲ್ಲೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಆಕಾಂಕ್ಷಿ ಜಿ.ಎಸ್. ಶ್ಯಾಮ್ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷದತ್ತ ಮತದಾರರ ಸೆಳೆಯುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ.
ಅಂತೆಯೇ ತಮ್ಮ ಕ್ಷೇತ್ರ ವ್ಯಾಪ್ತಿಯ ತ್ಯಾವಣಗಿ ಶಕ್ತಿ ಕೇಂದ್ರದಲ್ಲಿ ಬಿಜೆಪಿ ಜಿಲ್ಲಾ ಎಸ್.ಟಿ. ಮೋರ್ಚಾ ಅಧ್ಯಕ್ಷ ಕೃಷ್ಣಕುಮಾರ್ ಮನೆಯಲ್ಲಿ 97ನೇ ಮನ್ ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.
ನಂತರ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಬೂತ್ ಅಧ್ಯಕ್ಷರುಗಳ ಮನೆ ಮುಂದೆ ಬಿಜೆಪಿಯೇ ಭರವಸೆ (ಸ್ಟಿಕರ್ ) ಅಂಟಿಸಿ ಪಕ್ಷದ ಬಾವುಟವನ್ನು ಕಟ್ಟಲಾಯಿತು. ಹಾಗೆ ಬಿಜೆಪಿಯೇ ಭರವಸೆ ನಮ್ಮ ಮತ ಬಿಜೆಪಿಗೆ ಎಂದು ಗೋಡೆಗಳ ಮೇಲೆ ಚಿತ್ರಿಸಲಾಯಿತು.
ದಾಗಿನಕಟ್ಟೆ ಗ್ರಾಮಕ್ಕೆ ಭೇಟಿ ನೀಡಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಲ್ಲದೇ, ಎಲ್ಲಾ ಬೂತಿನ ಅಧ್ಯಕ್ಷರು, ಯುವ ಮೋರ್ಚಾ ಅಧ್ಯಕ್ಷರು, ಹಾಗೂ ಮುಖಂಡರು, ಪಕ್ಷದ ಕಾರ್ಯಕರ್ತರ ಜೊತೆಗೆ ವಿಜಯ ಸಂಕಲ್ಪ ಅಭಿಯಾನವನ್ನು ಬೂತ್ ಅಧ್ಯಕ್ಷರ ಮನೆಗಳಿಗೆ ಭೇಟಿ ನೀಡಿ ಬಿಜೆಪಿಯ ¨
ಭರವಸೆ ( ಸ್ಟಿಕರ್ ) ಆಂಟಿಸಿ, ಮೊಬೈಲ್ ಮುಖಾಂತರ ಮಿಸ್ ಕಾಲ್ ನೀಡಿ ರಿಜಿಸ್ಟ್ರೇಷನ್ ಮಾಡಿಸಲಾಯಿತು.
ತದನಂತರ ಲೋಕಿಕೆರೆ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಆಗೋ ಕೆಲ್ಸರೋಹಣ ಕಾರ್ಯಕ್ರಮಕ್ಕೆ ಭೇಟಿ ನೀಡಿ ಗುರುಗಳ ಆಶೀರ್ವಾದ ಪಡೆಯಲಾಯಿತು. ಲೋಕಿಗೆರೆ ಗ್ರಾಮದ ಬೂತ್ ಅಧ್ಯಕ್ಷ ರಾಮಸ್ವಾಮಿ (ರಾಮಣ್ಣ ) ಮನೆಗೆ ಭೇಟಿ ನೀಡಿ ಅವರ ಆರೋಗ್ಯ ಹಾಗೂ ಕುಶಲೋಪರಿಗಳನ್ನು ವಿಚಾರಿಸಿ ಅಲ್ಲಿ ನೆರದಿದ್ದ ಎಲ್ಲಾ ಮುಖಂಡರ ಜೊತೆ ಸಂವಾದ ನಡೆಸಿ, ನಂತರ ಪಕ್ಷದ ಹಿರಿಯ ಮುಖಂಡರಾದ ಕಾರಿಗನೂರ್ ನಿಜಲಿಂಗಪ್ಪ ಅಣ್ಣನವರ ಮಗನ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಕೋರಲಾಯಿತು.
ಇದೇ ವೇಳೆ ಬೂತಿನ ಎಲ್ಲಾ ಅಧ್ಯಕ್ಷರು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.