Gambling: ದಾವಣಗೆರೆಯ ಲಾಯರ್ ರಸ್ತೆಯಲ್ಲಿ ಇಸ್ಫೀಟ್ ಜೂಜಾಟ ಮೇಲೆ ಕೆಟಿಜೆ ನಗರ ಪೊಲೀಸರ ದಾಳಿ, 1,04,110 ರೂ ಹಣ ವಶ

GAMBLING_ KTJ Nagar Police raids Isfeet Gambling on Davangere Lawer Road, Rs 1,04,110.

ದಾವಣಗೆರೆ: (Gambling) ದಿನಾಂಕ; 24-02-2025 ರಂದು ದಾವಣಗೆರೆ ನಗರದ ಪಿಬಿ ರಸ್ತೆಗೆ ಹೊಂದಿಕೊಂಡಿರುವ ಲಾಯರ್ ರಸ್ತೆಯ ಕೊನೆಯಲ್ಲಿ ಮುತ್ತೂಟ್ ಗೋಲ್ಡ್ ಪಾಯಿಂಟ್ ನ ಮೇಲ್ಭಾಗದ ಮಹಡಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜಾಟ ನಡೆಯುವ ಸ್ಥಳದಲ್ಲಿ ಪೊಲೀಸ್ ಸಿಬ್ಬಂದಿ ದಾಳಿ ಮಾಡಿದ್ದಾರೆ.

ಇಸ್ಪೀಟು ಆಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ. ಐಪಿಎಸ್ ರವರ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರವರುಗಳಾದ ಶ್ರೀ ವಿಜಯಕುಮಾರ ಎಂ ಸಂತೋಷ ಮತ್ತು ಶ್ರೀ ಜಿ ಮಂಜುನಾಥ ರವರು ಹಾಗೂ ನಗರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಶರಣಬಸವೇಶ್ವರ. ಬಿ ರವರುಗಳ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸುನೀಲ್ ಕುಮಾರ ಹೆಚ್ ಎಸ್ . ರವರು ಹಾಗೂ ಸಿಬ್ಬಂದಿಯವರನ್ನು ಒಳಗೊಂಡ ತಂಡ ಮೇಲ್ಕಂಡ ಸ್ಥಳಕ್ಕೆ ಹೋಗಿ ದಾಳಿ ಮಾಡಿದ್ದರು.

ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ 21 ಜನರನ್ನು ವಶಕ್ಕೆ ಪಡೆದು ಆರೋಪಿತರಿಂದ ಇಸ್ಪೀಟ್ ಜೂಜಾಟ ಆಡಲು ತೊಡಗಿಸಿದ್ದ 1.04.110 ರೂ ನಗದು ಹಣವನ್ನು ಮತ್ತು ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದಿದ್ದು. ಇಸ್ಪೀಟ್ ಜೂಜಾಟ ಆಡುತ್ತಿದ್ದ ಆರೋಪಿತರು ಮತ್ತು ಮನೆಯನ್ನು ಬಾಡಿಗೆ ನೀಡಿ ಅಕ್ರಮ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಟ್ಟ ಮನೆಯ ಮಾಲೀಕರ ವಿರುದ್ದ  ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಕಲಂ:79 80 ಕೆ.ಪಿ ಆಕ್ಟ್ ರೀತ್ಯಾ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!