ವೀಕ್ ಎಂಡ್ ಕೊರೊನಾ ಕರ್ಪ್ಯೂ ನಡುವೆಯೂ ಚನ್ನಗಿರಿಯಲ್ಲಿ ಅಂದರ್ ಬಾಹರ್; ಮೂವರು ಸೇರಿದಂತೆ 3200 ನಗದು ವಶಕ್ಕೆ ಪಡೆದ ಪೊಲೀಸ್
ದಾವಣಗೆರೆ (ಚನ್ನಗಿರಿ): ಸರ್ಕಾರ ಕೊರೊನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆ ವೀಕ್ ಎಂಡ್ ಕರ್ಪ್ಯೂ ಜಾರಿ ಮಾಡಿದೆ, ಆದ್ರೆ ಕೆಲವರಿಗೆ ಇದು ಯಾವುದೇ ಲೆಕ್ಕಕ್ಕೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಇದೇ ಶನಿವಾರ ಸಂಜೆ ಚನ್ನಗಿರಿ ತಾಲ್ಲೂಕು ಹೆಬ್ಬಳಗೆರೆ ಗ್ರಾಮದ ಮಾರಿಕಾಂಭ ದೇವಸ್ಥಾನದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವರು ಅಂದರ್-ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಚನ್ನಗಿರಿ ಪಿ ಎಸ್ ಐ ಜಗದೀಶ್ ರಿಂದ ದಾಳಿ ನಡೆಸಿ ಮೂವರನ್ನ ವಶಕ್ಕೆ ಪಡೆಯಲಾಗಿದೆ.
ಈ ಸಂದರ್ಭದಲ್ಲಿ ಆರೋಪಿತರನ್ನು ಹಿಡಿದುಕೊಂಡಾಗ ಇಸ್ಪೀಟ್ ಜೂಜಾಟಕ್ಕೆ ಸಂಭಂಧಿಸಿದ್ದ 3,200/- ರೂ ನಗದು ಹಣ, ಮತ್ತು 52 ಇಸ್ಪೀಟ್ ಎಲೆಗಳನ್ನು
ವಶ ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.ಜೀವಕ್ಕೆ ಅಪಾಯಕಾರಿಯಾದ ಮಾರಕ ರೋಗಗಳ ( ಕೋರೋನಾ ವೈರಸ್ ) ಸೋಂಕು ಬರುವ ಸಾದ್ಯತೆ ಇದೇ
ಅಂತಾ ತಿಳಿದಿದ್ದರೂ ಹಾಗೂ ಸರ್ಕಾರ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರೂ
ಸಹ ದುಂಡಾಗಿ ಕುಳಿತುಕೊಂಡು ನಿರ್ಲಕ್ಷತನದಿಂದ
ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದವರನ್ನ ಬಂದಿಸಲಾಗಿದೆ.