ಸ್ವಾತಂತ್ರ್ಯ ತಂದುಕೊಡಲು ಹಗಲಿರುಳು ಶ್ರಮಿಸಿದ ರಾಷ್ಟ್ರಪಿತ ಗಾಂಧೀ ಜಯಂತಿ ಶುಭಾಶಯಗಳು – ಗಣೇಶ್ ಕೆ ಯಡಿಹಳ್ಳಿ

ದಾವಣಗೆರೆ: ಗಾಂಧೀಜಿ ತಮ್ಮಿಂದ ಅಥವಾ ಆಶ್ರಮದ ಬೇರೆ ಯಾರಿಂದಲಾದರೂ ತಪ್ಪು ನಡೆದರೆ ಅದನ್ನು ಸರಿಪಡಿಸಲು ಉಪವಾಸ ಕೈಗೊಳ್ಳುತ್ತಿದ್ದರು. ಹೊಟ್ಟೆ ಖಾಲಿಯಾದರೆ ಆತ್ಮ ಶುದ್ಧವಾಗಿ ಮನಸ್ಸಿನಲ್ಲಿ ಕೆಟ್ಟ ವಿಚಾರಗಳು ಸುಳಿಯುವುದಿಲ್ಲ ಎಂಬುದು ಅವರ ನಂಬಿಕೆಯಾಗಿತ್ತು.

ಮನುಷ್ಯ ತಪ್ಪುಗಳ ಕೈಗೊಂಬೆ ಎನ್ನುತ್ತಿದ್ದರು ತಪ್ಪು ಮಾಡದ ವ್ಯಕ್ತಿ ತಪ್ಪು ಒಪ್ಪಿಕೊಂಡಿಲ್ಲ ಇಲ್ಲವೇ ಅದಕ್ಕೆ ವಿಷಾದ ಸೂಚಿಸಿದರೆ ಗಾಂಧೀಜಿ ಆತನನ್ನು ಕ್ಷಮಿಸುತ್ತಿದ್ದರು ಅವರಲ್ಲಿ ಕ್ಷಮಿಸುವ ಶಕ್ತಿಯಿತ್ತು. ೧೯೧೪ ರಲ್ಲಿನ ಸಂಗತಿ – ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿದ್ದಾಗ ಒಂದು ದಿನ ಸ್ವಾಮಿ ಭವಾನಿ ದಯಾಳ್ ಸನ್ಯಾಸಿ ಹಾಗೂ ಮತ್ತು ಕೆಲವರು ಅವರನ್ನು ಭೇಟಿಯಾಗಲು ಬಂದರು. ಪರಸ್ಪರ ಮಾತಿನಲ್ಲಿದ್ದಾಗ ಬಾಪು ತಮ್ಮನ್ನು ನೋಡಲು ಮೀರ್ ಆಲಮ್ ಬಂದಿದ್ದಾರೆ ಎಂದು ವ್ಯಕ್ತಿಯೊಬ್ಬ ಸುದ್ದಿ ತಿಳಿಸಿದ.
ಮೀರ್ ಆಲಮ್ ಈ ಹಿಂದೆ ತಮ್ಮ ಇಚ್ಛೆಯಿಂದ ಪ್ರಮಾಣ ಪತ್ರ ಪಡೆಯಲು ಅವರಲ್ಲಿಗೆ ಹೋದಾಗ ಲಾಠಿಯಿಂದ ಹೊಡೆಸಿ ಗಾಯಗೊಳಿಸಿದರು. ಗಾಂಧೀಜಿ ಅದನ್ನು ಮರೆತಿರಲಿಲ್ಲ ಸುದ್ದಿ ಕೇಳಿ ಗಾಂಧೀಜಿ ಅಚ್ಚರಿಗೊಂಡರು ಆ ಕ್ಷಣ ಮೇಲೆದ್ದು ಸರಸರನೆ ಹೊರಗಡೆ ಬಂದರು ಅವರೊಡನೆ ಇದ್ದವರು ಹೊರಗೆ ಬಂದರು ಗಾಂಧೀಜಿ ತನ್ನ ಸೋದರರನ್ನು ಕಾಣುತ್ತಿದ್ದೇನೆ ಎನ್ನುವಂತೆ
ಮೀರ್ ಆಲಮ್ರರನ್ನು ಆಲಂಗಿಸಿಕೊಂಡು ಬನ್ನಿ ಒಳಗೆ ಬನ್ನಿ ಎಂದು ಆತ್ಮೀಯವಾಗಿ ಒಳಗೆ ಕರೆತಂದರು.  ಮೀರ್ ಆಲಮ್ಗೆ ಮಾತನಾಡಲು ಏನೂ ಉಳಿದಿರಲಿಲ್ಲ.ಅವರ ಕಣ್ಣಗಳಂಚಿನ ನೀರು ಎಲ್ಲವನ್ನು ಹೇಳುತ್ತಿತ್ತು ನಾನು ತಪ್ಪು ಮಾಡಿದ್ದೇನೆ ದಯವಿಟ್ಟು ಕ್ಷಮಿಸಿ ಇದಕ್ಕಿಂತ ಅವರಿಗೆ ಹೆಚ್ಚಿನದೇನನ್ನೂ ಹೇಳಲಾಗಲಿಲ್ಲ ಗಾಂಧೀಜಿ ಅವರಿಗೆ ಕೈ ಮೃದುವಾಗಿ ನೇವರಿಸಿದರು.

[ ತಪ್ಪು ಎಲ್ಲರಿಂದಲೂ ಆಗುತ್ತದೆ ತಪ್ಪು ಒಪ್ಪಿಕೊಳ್ಳುವುದರಿಂದ ಮನಸ್ಸು ನಿರ್ಮಲವಾಗುತ್ತದೆ ] ಮಹಾತ್ಮ ಗಾಂಧೀಜಿ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹಗಲಿರುಳು ಶ್ರಮಿಸಿದ ಮಹಾನ್ ಚೇತನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜಯಂತಿಯ ಶುಭಾಶಯಗಳು.

ಇಂತಿ ನಿಮ್ಮ ವಿಶ್ವಾಸಿ
*ಗಣೇಶ್ ಕೆ ಯಡಿಹಳ್ಳಿ*
(ಬಿ ಎ ವಿದ್ಯಾರ್ಥಿ)
ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ದಾವಣಗೆರೆ

Leave a Reply

Your email address will not be published. Required fields are marked *

error: Content is protected !!