ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗಾಂಧೀಜಿ ಮತ್ತು ಶಾಸ್ತ್ರೀಜಿ ಜನ್ಮ ದಿನಾಚರಣೆ.

ಗಾಂಧೀಜಿಯವರ ಸಂದೇಶಗಳು ಇಂದಿಗೂ ವಿಶ್ವಕ್ಕೆ ಸ್ಪೂರ್ತಿ..
ಏಳು ಸಾಮಾಜಿಕ ಪಾಪಗಳ ಕುರಿತು ಗಾಂಧೀಜಿಯವರು ಮೂಡಿಸಿದ ಜನಜಾಗೃತಿ ವಿಶ್ವ ಮಾನ್ಯವಾಗಿದೆ..
— ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ, ನಿಕಟಪೂರ್ವ ಅಧ್ಯಕ್ಷರು, ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು.
ದಾವಣಗೆರೆ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಆದರ್ಶಮಯ ಬದುಕು ಹಾಗೂ ಸಂದೇಶಗಳು ಇಡೀ ವಿಶ್ವಕ್ಕೆ ಇಂದಿಗೂ ಸ್ಪೂರ್ತಿದಾಯಕವಾಗಿದೆ. 20 ನೇ ಶತಮಾನದಲ್ಲಿ ಗಾಂಧೀಜಿಯವರಷ್ಟು ತಮ್ಮ ಚಿಂತನೆಗಳು ಹಾಗೂ ಸಂದೇಶಗಳ ಮೂಲಕ ವಿಶ್ವದ ಮೇಲೆ ಗಾಡವಾಗಿ ಪರಿಣಾಮ ಬೀರಿದ ಇನ್ನೊಬ್ಬ ನಾಯಕನಿಲ್ಲ ಎಂದು ಹೇಳಬಹುದಾಗಿದೆ. ಅವರು ವಿಶ್ವವ್ಯಾಪಿಯಾದ ಸಾರ್ವಕಾಲಿಕ ಜನಪ್ರಿಯ ನಾಯಕರಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷರಾದ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿಯವರು ಅಭಿಪ್ರಾಯಪಟ್ಟರು. ನಗರದ ಕುವೆಂಪು ಕನ್ನಡ ಭವನದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 152ನೇ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿಯವರ 117 ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡುತ್ತಿದ್ದರು. ದುಡಿಮೆಯಿಲ್ಲದೆ ಗಳಿಸಿದ ಸಂಪತ್ತು, ಆತ್ಮಸಾಕ್ಷಿಯಿಲ್ಲದ ಭೋಗ, ಚಾರಿತ್ರ್ಯವಿಲ್ಲದ ಜ್ಞಾನ, ನೀತಿಯಿಲ್ಲದ ವ್ಯಾಪಾರ, ಮಾನವೀಯತೆಯಿಲ್ಲದ ವಿಜ್ಞಾನ, ತ್ಯಾಗವಿಲ್ಲದ ಧರ್ಮ, ನೀತಿಯಿಲ್ಲದ ರಾಜಕೀಯ ಎಂಬ ಏಳು ಸಾಮಾಜಿಕ ಪಾಪಗಳ ಕುರಿತಾಗಿ ಗಾಂಧೀಜಿಯವರು ಸದಾ ಜನರಲ್ಲಿ ಜಾಗೃತಿಯನ್ನು ಮೂಡಿಸುತ್ತಿದ್ದರು. ಈ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಡಾ.ಕುರ್ಕಿಯವರು ಪ್ರತಿಪಾದಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಲಯನ್ ಎ.ಆರ್.ಉಜ್ಜನಪ್ಪ ಅವರು ಮಾತನಾಡಿ ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿಯವರು ಸ್ವತಂತ್ರ ಭಾರತವನ್ನು ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಲು ಶ್ರಮಿಸಿದ ಮಹಾನ್ ವ್ಯಕ್ತಿ. ತಾವು ನಂಬಿದ ತತ್ವಾದರ್ಶಗಳಿಗಾಗಿಯೇ ತಮ್ಮ ಬದುಕನ್ನು ಗಂಧದ ಕೊರಡಿನಂತೆ ತೇಯ್ದ ಶಾಸ್ತ್ರೀಜಿಯವರು ದೇಶದ ಎರಡನೇ ಪ್ರಧಾನಿಯಾಗಿ ಗಮನಾರ್ಹ ಸೇವೆ ಸಲ್ಲಿಸಿದವರು. ಹೊಟ್ಟೆಗೆ ಅನ್ನ ನೀಡುವ ರೈತ, ದೇಶ ಕಾಯುವ ಯೋಧರಿಬ್ಬರೂ ದೇಶದ ಬೆನ್ನೆಲಬು ಎಂದು ನಂಬಿಕೊಂಡಿದ್ದ ಅವರ ‘ಜೈ ಜವಾನ್, ಜೈ ಕಿಸಾನ್’ ಘೋಷಣೆ ಪ್ರಸಿದ್ಧಿ ಪಡೆದಿತ್ತು ಎಂದು ಶಾಸ್ತ್ರೀಜಿಯವರನ್ನು ಕೊಂಡಾಡಿದರು.
ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನಡಪರ ಸಂಘಟಕರಾದ ಬಿ.ವಾಮದೇವಪ್ಪ, ಬಿ. ದಿಲ್ಯಪ್ಪ, ಜಿ.ಆರ್.ಷಣ್ಮುಖಪ್ಪ, ಕೆ.ರಾಘವೇಂದ್ರ ನಾಯರಿ, ಲಯನ್ ಸುದರ್ಶನ್ ಕುಮಾರ್, ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.
ಧನ್ಯವಾದಗಳೊಂದಿಗೆ
ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ
ನಿಕಟಪೂರ್ವ ಅಧ್ಯಕ್ಷರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು
ದಾವಣಗೆರೆ.
ಮೊ: 9480065533
8310823279ವರದಿ:
ಕೆ.ರಾಘವೇಂದ್ರ ನಾಯರಿ
ಕನ್ನಡಪರ ಸಂಘಟಕ
ಕೆನರಾ ಬ್ಯಾಂಕ್ – ದಾವಣಗೆರೆ
ಮೊ: 9844314543
ಮೈಲ್ ಐಡಿ: krnairycbeu@gmail.com