Ganesha Festival: ಗಣೇಶ ಚತುರ್ಥಿಯನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಆಚರಿಸಿ – ಎಸ್ ಪಿ. ಸಿ.ಬಿ. ರಿಷ್ಯಂತ್
ದಾವಣಗೆರೆ: ಸಾರ್ವಜನಿಕರು ಗಣೇಶ ಚತುರ್ಥಿಯನ್ನು ಸರ್ಕಾರದ ಮಾರ್ಗಸೂಚಿ ಅನ್ವಯ ಆಚರಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಂತ್ ಕೋರಿದ್ದಾರೆ.
ಕೋವೀಡ್ ಸೋಂಕು ಹೆಚ್ಚಳವಾಗುತ್ತಿರುವ ಕಾರಣ ಕೋವಿಡ್ ನಿಯಮ ಉಲ್ಲಂಘಿಸದೆ ಆಚರಿಸಬೇಕು. ಮನೆಗಳಲ್ಲಿ ಎರಡು ಅಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ನಾಲ್ಕು ಅಡಿ ಮೀರದಂತೆ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸುವಂತೆ ಅವರು ವೀಡೀಯೋ ಮುಖಾಂತರ ತಿಳಿಸಿದ್ದಾರೆ.
ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಟಾಪನೆ ಮಾಡುವಲ್ಲಿ ದರ್ಶನಕ್ಕೆ ಇಪ್ಪತ್ತು ಜನರು ಮೀರದಂತೆ ಅವಕಾಶ ನೀಡಬೇಕು, ಧ್ವನಿವರ್ಧಕ, ಮನರಂಜನೆ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಮನೆಗಳಲ್ಲಿ ಪ್ರತಿಷ್ಟಾಪಿಸಿರುವ ಗಣೇಶಮೂರ್ತಿಗಳನ್ನು ಆದಷ್ಟು ಮನೆಯಲ್ಲಿಯೇ ವಿಸರ್ಜಿಸಿ ಅಥವಾ ಪಾಲಿಕೆಯಿಂದ ನಿಗದಿಪಡಿಸಲಾದ ಸ್ಥಳಗಳಿಗೆ ಒಂದಿಬ್ಬರು ಮಾತ್ರ ತೆರಳಿ ವಿಸರ್ಜನೆ ಮಾಡಬೇಕು. ಇಂತಹ ಮಾರ್ಗಸೂಚಿಯನ್ನು ಜನರು ಕಡ್ಡಾಯವಾಗಿ ಪಾಲನೆ ಮಾಡಬೇಕೆಂದು ಎಸ್ಪಿ ತಿಳಿಸಿದ್ದಾರೆ.