Ganesha Festival: ಗಣೇಶೋತ್ಸವಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ | ಷರತ್ತಿನ ಜೊತೆ 3 ದಿನಕ್ಕೆ ಮಾತ್ರ ಸೀಮಿತ
ಬೆಂಗಳೂರು: ಕೆಲವೊಂದು ಷರತ್ತು ವಿಧಿಸಿ ಸಾರ್ವಜನಿಕ ಗಣೇಶೋತ್ಸವಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಹಿಂದಿನಿಂದಲೂ ಆಚರಿಸಿಕೊಂಡು ಬಂದಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಅವಕಾಶ ನೀಡಲೇಬೇಕೆಂದು ಹಲವಾರು ಹಿಂದೂ ಪರ ಸಂಘಟನೆಗಳು, ಗಣೇಶನ ಭಕ್ತರು ಸರ್ಕಾರದ ಮೇಲೆ ಹಾಕಿದ್ದ ಒತ್ತಡಕ್ಕೆ ಕೊನೆಗೂ ಸರ್ಕಾರ ಮಣಿದು ಗಣೇಶೋತ್ಸವ ಆಚರಣೆಗೆ ಮೂರು ದಿನಗಳಿಗೆ ಸೀಮಿತಗೊಳಿಸಿ ಅವಕಾಶ ನೀಡಿದೆ.
ಗಣೇಶ ಮೂರ್ತಿಯನ್ನು ತರುವ ವೇಳೆ ಮತ್ತು ವಿಸರ್ಜಿಸುವ ವೇಳೆ ಯಾವುದೇ ಮೆರವಣಿಗೆ ಮಾಡುವಂತಿಲ್ಲ, 20 ಜನರಿಗಿಂತ ಹೆಚ್ಚು ಜನರು ಗುಂಪು ಕೂಡುವಂತಿಲ್ಲ, ಮನರಂಜನಾ ಕಾರ್ಯಕ್ರಮ ಆಯೋಜಿಸುವಂತಿಲ್ಲ. ಒಂದು ವೇಳೆ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿದರೆ ಆಯೋಜಕರೆ ಹೊಣೆಯಾಗಬೇಕಾಗುತ್ತದೆ ಎಂದು ತಾಕೀತು ಮಾಡಿದೆ.