Ganja: ಸೈಬರ್ ಪೋಲೀಸ್ ಟೀಂ ದಾಳಿ, 1.75 ಲಕ್ಷ ಮೌಲ್ಯದ 2 ಕೆಜಿ 360ಗ್ರಾಂ ಗಾಂಜಾ ವಶಕ್ಕೆ, ಇಬ್ಬರ ಬಂಧನ

Ganja_ Cyber ​​Police Team Raid, 2 Kg 360gm Ganja worth 1.75 Lakhs, Two Arrested

ದಾವಣಗೆರೆ: (Ganja) ದಾವಣಗೆರೆ ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದಾವಣಗೆರೆ ಸೈಬರ್ ಪೋಲೀಸ್ ಠಾಣೆಯ ಪೋಲೀಸರು 1.75 ಲಕ್ಷ ರೂ ಬೆಲೆಯ 2 ಕೆಜಿ 360 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಮನ್ಸೂರು ಅಲಿ, ಸಂಜಯ್ ಕುಮಾರ್ ಬಂಧಿತರ ಆರೋಪಿಗಳು. ದಾವಣಗೆರೆ ನಗರದ ಶಿರಮಗೊಂಡನಹಳ್ಳಿ ಕಡೆ ಹೋಗುವ ಬ್ರಿಡ್ಜ್ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾರೆಂದು ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರುತ್ತಿದ್ದಾರೆ ಎಂದು ಸಿ ಇ ಎನ್ ಠಾಣೆಯ ಪೋಲೀಸ್ ಇನ್ಸ್‌ಪೆಕ್ಟರ್ ವಸಂತ್ ಅವರಿಗೆ ಭಾತ್ಮಿದಾರರಿಂದ ಖಚಿತ  ಮಾಹಿತಿ ನೀಡಿದ್ದರಿಂದ, ಸಿ ಇ ಎನ್ ಠಾಣೆಯ ಡಿವೈಎಸ್ಪಿ ನೇತೃತ್ವದಲ್ಲಿ ಹಾಗೂ ಹಿರಿಯ ಪೋಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ  ಪೊಲೀಸರು ದಾಳಿ ನಡೆಸಿ ಯಶಸ್ವಿಯಾಗಿದ್ದಾರೆ.

ದಾಳಿಯಲ್ಲಿ ಭಾಗಿಯಾದ ಸೈಬರ್ ಎನ್ಫೋರ್ಸಮೆಂಟ್ ನಾರ್ಕೊಟಿಕ್ಸ್ (CEN)ತಂಡದ ಸಿಬ್ಬಂದಿಗಳಿಗೆ ಎಸ್ ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳು

error: Content is protected !!