Matka Raid Impact: ಮಟ್ಕಾ (OC) ಅಡ್ಡಾದಲ್ಲಿ ಕೆಡ್ಡಾ ತೋಡಿದ ಹಾವೇರಿ ಎಸ್ ಪಿ ಹನುಮಂತರಾಯ: ಗರುಡವಾಯ್ಸ್ ವರದಿ ಇಂಪ್ಯಾಕ್ಟ್

SP Haveri Hanumantharaya Raided matka place

Garudavoice ಬಿಗ್ ಇಂಪ್ಯಾಕ್ಟ್ 

ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ಮಟ್ಕಾದಂಧೆ ರಾಜಾರೋಷವಾಗಿ ನಡೆಯುತ್ತಿದ್ದ ಬಗ್ಗೆ ಹಾವೇರಿ ಪೊಲೀಸ್ ಇಲಾಖೆ ಮಾತ್ರ ಮೌನ ವಹಿಸಿದೆ ಎಂಬ ಸುದ್ದಿಯನ್ನು ಗರುಡವಾಯ್ಸ್ ತಂಡ ರಹಸ್ಯ ಕಾರ್ಯಾಚರಣೆ ಮೂಲಕ ಮಟ್ಕಾ ಅಡ್ಡೆಗೆ ನುಗ್ಗಿ ಅಲ್ಲಿ ನಡೆಯುವ ದಂಧೆ ಬಗ್ಗೆ ವಿಡಿಯೋ ಸಮೇತ ವರದಿ ಮಾಡಿತ್ತು, ಹಾಗೂ ಹಾವೇರಿ  ಎಸ್ ಪಿ ಗಮನಕ್ಕೆ ತಂದಿತ್ತು.

ಜುಲೈ 14 ರ ತಡರಾತ್ರಿ ಮಟ್ಕಾ ದಂದೆ ನಡೆಯುತ್ತಿರುವ ವರದಿ ಮಾಡಿದ್ದ ಗರುಡವಾಯ್ಸ್ ಸಂಬಂಧಿಸಿದವರ ಗಮನಕ್ಕೆ ತಂದು 24 ಗಂಟೆಯಲ್ಲಿಯೇ ಹಾವೇರಿ ಎಸ್ ಪಿ ಹನುಮಂತರಾಯ ನೇತೃತ್ವದಲ್ಲಿ ಪೊಲೀಸ್ ತಂಡ ಕಾರ್ಯಪ್ರವೃತ್ತರಾಗಿ ಇಂದು ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿದೆ.

23 ಜನರನ್ನ ಬಂಧಿಸಿ  1,48,020. ಹಣವನ್ನ ವಶಕ್ಕೆ ಪಡೆಯಲಾಗಿದೆ ಹಾಗೂ ಕೆಪಿ ಆಕ್ಟ್ ಅಡಿ ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ಕೇಸ್ ಮಾಡಲಾಗಿದೆ ಎಂದು ಎಸ್ ಪಿ ಹನುಮಂತರಾಯ ಗರುಡವಾಯ್ಸ್ ಗೆ ಮಾಹಿತಿ ನೀಡಿದ್ದಾರೆ.

ದಾವಣಗೆರೆ-ಹರಿಹರ ಗಡಿ ಭಾಗದ ತುಂಗಭದ್ರಾ ನದಿ ಪಕ್ಕದ‌ ಕೊಡಿಯಾಲ ಹೊಸಪೇಟೆ ಬಳಿಯ ಇಟ್ಟಿಗೆ ಬಟ್ಟಿಗಳ ಸಮೀಪದಲ್ಲಿ ಮಟ್ಕಾ ದಂಧೆಕರೋರರು ಜಾತ್ರೆಯ ಸ್ವರೂಪದಲ್ಲಿ ಮಟ್ಕಾ ಬರೆಯುತ್ತಿರುವುದು ಕಂಡು ಬಂದಿದ್ದು, ಆ ಸ್ಥಳದಿಂದ ಕೂಗಳತೆಯ ದೂರದಲ್ಲಿ ಪೊಲೀಸ್ ಠಾಣೆಯಿದ್ದರೂ ಇದ್ಯಾವುದಕ್ಕೂ ಸೊಪ್ಪು ಹಾಕದೆ ಮಟ್ಕಾ ಆಡುತ್ತಿದ್ದರೂ ಇದನ್ನು ಸದೆ ಬಡಿಯಬೇಕಾದ ಪೊಲೀಸರು ಮಾತ್ರ ಜಾಣ ಕುರುಡುತನ ತೋರುತ್ತಿದ್ದರು ಆದ್ರೆ ಇಂದು ಹಾವೇರಿ ಎಸ್ ಪಿ ಹನುಮಂತರಾಯ  ಖುದ್ದು ಖಾಸಗಿ ವಾಹನದಲ್ಲಿ ಬಂದು ಮಟ್ಕಾ ಅಡ್ಡೆ ಮೇಲೆ ತಾವೇ ದಾಳಿ ಮಾಡಿದ್ದಾರೆ ಹಾಗೂ ಸ್ಥಳೀಯರ ಪ್ರಶಂಸೆಗೆ ಭಾಜನರಾಗಿದ್ದಾರೆ.

ಗರುಡವಾಯ್ಸ್ ವರದಿ ಬಗ್ಗೆ ಎಸ್ ಪಿ ಹನುಮಂತರಾಯ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!