ಎಸ್.ಎಸ್ ಅಥವಾ ಎಸ್.ಎಸ್.ಎಂ ಗೆ ಡಿಸಿಎಂ ಸ್ಥಾನ ನೀಡಿ.! ಮಧ್ಯ ಕರ್ನಾಟಕ ಲಿಂಗಾಯತ ಕೋಟಾದಡಿ ಪ್ರಾಶಸ್ತ್ಯ ಕೊಡಿ – ಕೆ.ಎಲ್.ಹರೀಶ್ ಬಸಾಪುರ.

ಎಸ್.ಎಸ್ ಅಥವಾ ಎಸ್.ಎಸ್.ಎಂ ಗೆ ಡಿಸಿಎಂ ಸ್ಥಾನ ನೀಡಿ.! ಮಧ್ಯ ಕರ್ನಾಟಕ ಲಿಂಗಾಯತ ಕೋಟಾದಡಿ ಪ್ರಾಶಸ್ತ್ಯ ಕೊಡಿ - ಕೆ.ಎಲ್.ಹರೀಶ್ ಬಸಾಪುರ.

ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆತಿದ್ದು, ಮಧ್ಯ ಕರ್ನಾಟಕ ದಾವಣಗೆರೆ ಜಿಲ್ಲೆಯಲ್ಲಿ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಜಯಗಳಿಸಿದ್ದು, ಪಕ್ಷದ ಹೈಕಮಾಂಡ್ ಇದನ್ನು ಪರಿಗಣಿಸಿ ಆರು ಬಾರಿ ಶಾಸಕರಾಗಿರುವ ಮಾಜಿ ಸಚಿವ ಡಾ. ಶಾಮನೂರು ಶಿವಶಂಕರಪ್ಪ ನವರನ್ನು ಅಥವಾ ನಾಲ್ಕು ಬಾರಿ ಶಾಸಕರಾಗಿರುವ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಲಿಂಗಾಯತ ಸಮುದಾಯಕ್ಕೆ ಹಾಗೂ ಮಧ್ಯ ಕರ್ನಾಟಕ ಭಾಗಕ್ಕೆ ಪ್ರಾತಿನಿತ್ಯ ನೀಡಬೇಕೆಂದು ಪಕ್ಷದ ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ವಿನಂತಿಸಿದ್ದಾರೆ.

ಕಾಂಗ್ರೆಸ್ ಪಕ್ಷದ 135 ಶಾಸಕರ ಪೈಕಿ ಲಿಂಗಾಯತ ಸಮುದಾಯದ 39 ಶಾಸಕರು ಆಯ್ಕೆಯಾಗಿದ್ದು, ದಾವಣಗೆರೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಆರರಲ್ಲಿ, ಚಿತ್ರದುರ್ಗ ಹಾಗೂ ಹಾವೇರಿ ಎರಡು ಜಿಲ್ಲೆಗಳ ತಲಾ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಪಕ್ಷ ಭರ್ಜರಿ ಜಯಗಳಿಸಿದ್ದು, ಮಾಜಿ ಸಚಿವರಾದ ಡಾ. ಶಾಮನೂರು ಶಿವಶಂಕರಪ್ಪನವರನ್ನು ಅಥವಾ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ರವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವುದರಿಂದ ಮಧ್ಯ ಕರ್ನಾಟಕಕ್ಕೆ, ಲಿಂಗಾಯತ ಸಮುದಾಯಕ್ಕೆ ಹಾಗೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿಸಿದ ಈ ಜಿಲ್ಲೆಯ ಮತದಾರರಿಗೆ ಗೌರವ ತೋರಿಸಿದಂತಾಗುತ್ತದೆ, ಆದಕಾರಣ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!