ಲಸಿಕೆ ನೀಡಿ ಜೀವ ಉಳಿಸಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ

 

ದಾವಣಗೆರೆ.ಜು.೩: ಲಸಿಕೆ ನೀಡದ ಬಿಜೆಪಿ ಸರಕಾರ ತೊಲಗಲಿ, ಲಸಿಕೆ ನೀಡಿ ಜನರ ಜೀವ ಉಳಿಸಿ ಲಸಿಕೆ ಸಮರ್ಪಕವಾಗಿ ಪೂರೈಸದ ಸರ್ಕಾರದ ವಿರುದ್ಧ ಘೋಷಣೆ ಕೂಗುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ದಾವಣಗೆರೆ ನಗರದ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂಭಾಗ ಪ್ರತಿಭಟನೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ನಗರದ 9 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂಭಾಗದಲ್ಲಿ ಏಕಕಾಲದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಲಸಿಕೆ ನೀಡಿ ಜೀವ ಉಳಿಸಬೇಕೆಂದು ಆಗ್ರಹಿಸಿದರು.

ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್, ಸದಸ್ಯ ಜಿ.ಎಸ್.ಮಂಜುನಾಥ್ ಅವರುಗಳು  ಮಾತನಾಡಿ ಕರೋನಾ ಸೋಂಕಿನಿಂದ ಲಕ್ಷಾಂತರ ಜನ ಸಾವು ಕಂಡಿದ್ದಾರೆ. ಕೋಟ್ಯಂತರ ಜನಜೀವನ ಕಳೆದುಕೊಂಡಿದ್ದಾರೆ. ಇದು ಕೊಲೆಗಡುಕ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಲಸಿಕೆ ಪಡೆಯಲು ಜಿಲ್ಲಾದ್ಯಂತ ಹಾಹಾಕಾರ ಎದ್ದಿದ್ದು, ಸಾರ್ವಜನಿಕರು ಕಿಲೋ ಮೀಟರ್ ಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ತಂದಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಲಸಿಕೆ ನೀಡುತ್ತೇವೆ ಎನ್ನುವುದು ಸುಳ್ಳು ಹೇಳಿಕೆ ಎಂದರು.
ಕೇಂದ್ರ ಸರ್ಕಾರ ಪ್ರತಿದಿನ ಕೋಟಿ ಲಸಿಕೆ ನೀಡುತ್ತೇವೆ ಎಂದು ಹೇಳಿಕೆ ನೀಡಿ ತಿಂಗಳೂ ಕಳೆದರೂ ಸಹ ಲಸಿಕೆ ನೀಡುವುದನ್ನೇ ಸರ್ಕಾರ ಮರೆತಂತಿದೆ. ದಾವಣಗೆರೆ ಸಂಸದರು, ಜಿಲ್ಲೆಯ ಬಿಜೆಪಿ ಶಾಸಕರುಗಳು ಮೋದಿಯನ್ನು ಹೊಗಳುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ದೂರಿದರು.

ದಾವಣಗೆರೆ ನಗರದಲ್ಲಿ ಶಾಸಕರಾದ ಡಾ. ಶಾಮನೂರು ಶಿವಶಂಕರಪ್ಪನವರು ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಅವರು ಲಸಿಕೆ ನೀಡುತ್ತಿರುವುದರಿಂದ ದಾವಣಗೆರೆ ಜನರ ಜೀವ ಉಳಿಯುತ್ತಿದೆ. ಸರ್ಕಾರವನ್ನು ನಂಬಿದ್ದರೆ ಜೀವ ಕಳೆದುಕೊಳ್ಳಬೇಕಾಗಿತ್ತು ಎಂದರು.

ದಾವಣಗೆರೆ ನಗರದ ನಗರ ಆರೋಗ್ಯ ಕೇಂದ್ರ-1,  ನಗರ ಆರೋಗ್ಯ ಕೇಂದ್ರ-2, ನಗರ ಆರೋಗ್ಯ ಕೇಂದ್ರ-3, ನಗರ ಆರೋಗ್ಯ ಕೇಂದ್ರ-4, ನಗರ ಆರೋಗ್ಯ ಕೇಂದ್ರ- ಹೆಚ್.ಕೆ.ಆರ್. ನಗರ,ದಾವಣಗೆರೆ., ನಗರ ಆರೋಗ್ಯ ಕೇಂದ್ರ-ಭಾರತ್ ಕಾಲೋನಿ, ದಾವಣಗೆರೆ. , ನಗರ ಆರೋಗ್ಯ ಕೇಂದ್ರ- ಎಸ್.ಎಂ.ಕೆ.ನಗರ, ದಾವಣಗೆರೆ., ನಗರ ಆರೋಗ್ಯ ಕೇಂದ್ರ-ಆಜಾದ್ ನಗರ, ದಾವಣಗೆರೆ., ನಗರ ಆರೋಗ್ಯ ಕೇಂದ್ರ-ಬಾಷಾನಗರ, ದಾವಣಗೆರೆ ಪಕ್ಷದ ಎಲ್ಲಾ ಜನಪ್ರತಿನಿಧಿಗಳು, ಮುಖಂಡರುಗಳು, ಕಾರ್ಯಕರ್ತರು, ಪಕ್ಷದ ವಿವಿಧ ಘಟಕಗಳಾದ ಎನ್‍ಎಸ್‍ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಜಿಲ್ಲಾ ಸೇವಾದಳ, ಕಿಸಾನ್ ಕಾಂಗ್ರೆಸ್, ಕಾರ್ಮಿಕ ವಿಭಾಗ, ಪರಿಶಿಷ್ಟ ಜಾತಿ, ಪಂಗಡ, ಓ.ಬಿ.ಸಿ., ಅಲ್ಪಸಂಖ್ಯಾತ ವಿಭಾಗದ ಎಲ್ಲಾ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಮಹಾನಗರ ಪಾಲಿಕೆ ಸದಸ್ಯರುಗಳು ಏಕಕಾಲದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯೂಬ್ ಪೈಲ್ವಾನ್, ಮಹಾನಗರ ಪಾಲಿಕೆ ಸದಸ್ಯ ಸುಧಾ ಇಟ್ಟಿಗುಡಿ ಮಂಜುನಾಥ್, ಮೀನಾಕ್ಷಿ ಜಗದೀಶ್, ಮೈನುದ್ದೀನ್ ಹೆಚ್.ಜೆ. , ಸಾಗರ್.ಎಲ್.ಹೆಚ್., ಸುಭಾನ್ ಸಾಬ್ , ಮಹಮ್ಮದ್ ಸಾದಿಕ್ ಸದ್ದಾಂ,ಮಹಮ್ಮದ್ ವಾಜಿದ್, ಸೈಯದ್ ಇರ್ಫಾನ್, ದೀಪ, ಹಬೀಬಾ, ಸೈಯದ್ ಮುಬಾರಕ್.ಖಾಜಾ ಮೈನುದ್ದೀನ್.ವೈ. ಜಬೀವುಲ್ಲಾ ಸಮೀರ್ ಮಹಬೂಬ್ ಬಾಷಾ, ಅಲೆಕ್ಸಾಂಡರ್(ಜಾನ್) ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!