ಜಿಎಂ ಹಾಲಮ್ಮ ಪದವಿಪೂರ್ವ ಕಾಲೇಜ್: ಸೈನ್ಸ್ ಅಂಡ್ ಕಾಮರ್ಸ್ ವಿದ್ಯಾರ್ಥಿಗಳಿಂದ ಒಂದು ದಿನದ ಎಜುಫೆಸ್ಟ್

WhatsApp Image 2022-02-08 at 6.49.36 PM

ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ಹಾಲಮ್ಮ ಪದವಿ ಪೂರ್ವ ಕಾಲೇಜು ವತಿಯಿಂದ ಇದೇ ದಿನಾಂಕ 8 ರಂದು ನಡೆದ ಸೈನ್ಸ್ ಅಂಡ್ ಕಾಮರ್ಸ್ ಎಜುಫೆಸ್ಟ್ ಮತ್ತು ಪೋಷಕರ ಸಭೆಯ ಉದ್ಘಾಟನೆಯನ್ನು ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ಅಧ್ಯಾಪಕರುಗಳ ಸಹಕಾರದಿಂದ ಸುಮಾರು 60ಕ್ಕೂ ಹೆಚ್ಚು ಪ್ರಾಜೆಕ್ಟ್ ಗಳನ್ನು ತಯಾರಿಸಿ ಉತ್ಸಾಹದಿಂದ ಪಾಲ್ಗೊಂಡಿದ್ದು ಹರ್ಷವನ್ನುಂಟು ಮಾಡಿತ್ತು. ಕೆಲವು ಪ್ರಾಜೆಕ್ಟ್ ಗಳು ಮಾನವನ ಅಂಗಾಂಗ ರಚನೆಯ ಬಗ್ಗೆ ಬೆಳಕು ಚೆಲ್ಲುವಂತಹ ವಾಗಿದ್ದವು ಮತ್ತು ಇನ್ನೂ ಕೆಲವು ಪ್ರಾಜೆಕ್ಟ್ ಗಳು ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತಹ ಯೋಜನೆಗಳ ಆಗಿದ್ದವು.

ವಿದ್ಯಾರ್ಥಿಗಳು ತಯಾರಿಸಿದ ವಿವಿಧ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಾಜೆಕ್ಟ್ ಗಳ ಪ್ರದರ್ಶನ ಮತ್ತು ಮೇಳ ಇದಾಗಿತ್ತು ಎಂದು ಕಾಲೇಜಿನ ಸಿಇಓ ಮತ್ತು ಪ್ರಾಂಶುಪಾಲರಾದ ಡಾ ವೆಂಕಟ ರಾಯುಡು ವಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯಾರ್ಥಿಗಳು ತಾವು ತಯಾರಿಸಿದ ವಿಜ್ಞಾನ ಪ್ರಾಜೆಕ್ಟ್ ಗಳನ್ನು ಅತಿ ಉತ್ಸಾಹದಿಂದ ತಮ್ಮ ಕಿರಿಯ ವಿದ್ಯಾರ್ಥಿಗಳಿಗೆ ಮತ್ತು ಅತಿಥಿಗಳಿಗೆ ವಿವರಿಸುವಲ್ಲಿ ತಲ್ಲೀನರಾಗಿದ್ದು ಕಂಡುಬಂದಿತ್ತು. ಒಟ್ಟಾರೆ ಹಬ್ಬದಂತಹ ವಾತಾವರಣ ಕಂಡುಬಂದಿದ್ದು ಪೋಷಕರಲ್ಲಿ ಮತ್ತು ಅಧ್ಯಾಪಕ ವರ್ಗದವರಲ್ಲಿ ಸಂತೋಷವನ್ನುಂಟುಮಾಡಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಮತ್ತು ಜಿಎಂ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ ಗಿರೀಶ್ ಬೋಳಕಟ್ಟಿ ನೆರವೇರಿಸಿದರು. ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಗುರಿ ಮತ್ತು ಭವಿಷ್ಯ ರೂಪಿಸಿಕೊಳ್ಳುವ ಬಗ್ಗೆ ಹಿತವಚನವನ್ನು ನುಡಿದರು.

ಸುಮಾರು ಅರುವತ್ತಕ್ಕೂ ಹೆಚ್ಚು ವಿಜ್ಞಾನ ಮತ್ತು ತಾಂತ್ರಿಕ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಾಜೆಕ್ಟ್ ಗಳು ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ ಜಿ ಎಂ ಎಚ್ ಪಿ ಯು ಕಾಲೇಜಿನ ಪ್ರಾಂಶುಪಾಲರು ಮತ್ತು ಸಿಇಓ ಡಾ ವೆಂಕಟ ರಾಯುಡು ವಿ, ಜಿಎಂಎಸ್ ಫಸ್ಟ್ ಗ್ರೇಡ್ ಕಾಲೇಜಿನ ಪ್ರಾಂಶುಪಾಲರಾದ ಶ್ವೇತ ಮರಿಗೌಡರ್, ಜಿಎಂಐಟಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ಜಿಎಂ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಶ್ರೀ ವೀರಣ್ಣ ಜಿಎಂ, ಅಧ್ಯಾಪಕ ವರ್ಗದವರು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!