ಜಿಎಂಐಟಿ: ಕಿರ್ಲೋಸ್ಕರ್ ಟೊಯೋಟಾ ಕಂಪನಿಗೆ ಮೆಕ್ಯಾನಿಕಲ್ ವಿಭಾಗದ 27 ವಿದ್ಯಾರ್ಥಿಗಳು ಆಯ್ಕೆ

ಜಿಎಂಐಟಿ: ಕಿರ್ಲೋಸ್ಕರ್ ಟೊಯೋಟಾ ಕಂಪನಿಗೆ ಮೆಕ್ಯಾನಿಕಲ್ ವಿಭಾಗದ 27 ವಿದ್ಯಾರ್ಥಿಗಳು ಆಯ್ಕೆ

ದಾವಣಗೆರೆ :ನಗರದ ಪ್ರತಿಷ್ಠಿತ ಜಿ ಎಮ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್ಟೈಲ್ ಮಷೀನರಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಂದರ್ಶನ ಪ್ರಕ್ರಿಯೆಯಲ್ಲಿ ಒಟ್ಟು 27 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಎಂಐಟಿ ಕಾಲೇಜಿನ ಅಂತಿಮ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮತ್ತು ಅಂತಿಮ ವರ್ಷದ ವಿವಿಧ ಕಾಲೇಜಿನ ಡಿಪ್ಲೋಮೋ ಮೆಕ್ಯಾನಿಕಲ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಈ ಸಂದರ್ಶನ ಪ್ರಕ್ರಿಯೆಯಲ್ಲಿ ಒಟ್ಟು 27 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಇದೇ ವೇಳೆ ತಿಳಿಸಿದರು.

ಜಿಎಂಐಟಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ 10 ವಿದ್ಯಾರ್ಥಿಗಳು ಗ್ರಾಜುಯೇಟ್ ಟ್ರೈನಿ ಇಂಜಿನಿಯರ್ ಸ್ಥಾನಕ್ಕೆ ಮತ್ತು ವಿವಿಧ ಕಾಲೇಜಿನ ಡಿಪ್ಲೋಮಾ ಮೆಕಾನಿಕಲ್ ವಿಭಾಗದ 17 ವಿದ್ಯಾರ್ಥಿಗಳು ಅಪ್ರೆಂಟಿಸ್ ಟ್ರೈನಿ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಆಯ್ಕೆಯಾದ 17 ಡಿಪ್ಲೋಮಾ ಮೆಕ್ಯಾನಿಕಲ್ ವಿದ್ಯಾರ್ಥಿಗಳಲ್ಲಿ ಒಂಬತ್ತು ವಿದ್ಯಾರ್ಥಿಗಳು ಜಿಎಂಐಟಿ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿಸಿದರು.

ಆಯ್ಕೆಯಾದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಶ್ರೀ ಜಿಎಂ ಲಿಂಗರಾಜು, ಆಡಳಿತ ಅಧಿಕಾರಿ ಶ್ರೀ ವೈ ಯು ಸುಭಾಷ್ ಚಂದ್ರ, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಜಯ್ ಪಾಂಡೆ ಎಂ ಬಿ, ಜಿಎಂ ಪಾಲಿಟೆಕ್ನಿಕ್ ಪ್ರಾಂಶುಪಾಲರಾದ ಡಾ ಶ್ರೀಧರ್ ಬಿ ಆರ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥರಾದ ಡಾ ಶ್ರೀನಿವಾಸ್ ಸಿವಿ, ವಿವಿಧ ವಿಭಾಗದ ಮುಖ್ಯಸ್ಥರುಗಳು ಮತ್ತು ಅಧ್ಯಾಪಕ ವರ್ಗದವರು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!