ಜಿಎಂಐಟಿ: ಎಲೆಕ್ಟ್ರಾನಿಕ್ಸ್ ವಿಭಾಗದಿಂದ ಮೂರು ದಿನಗಳ ಸರ್ಕ್ಯೂಟ್ ಪ್ರೋಟೋಟೈಪಿಂಗ್ ಕಾರ್ಯಗಾರ
ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದಿಂದ ಮೂರು ದಿನಗಳ ಸರ್ಕ್ಯೂಟ್ ಪ್ರೋಟೋಟೈಪಿಂಗ್ ಕಾರ್ಯಾಗಾರದ ಉದ್ಘಾಟನೆಯನ್ನು ದಿನಾಂಕ 25ನೇ ಶುಕ್ರವಾರದಂದು ವಿಭಾಗದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಾಗಾರವನ್ನು ಬೆಂಗಳೂರಿನ ಹೆಸರಾಂತ ಆರ್ ಲಾಜಿಕ್ ಟೆಕ್ನೋಲಜಿಸ್ ಕಂಪನಿಯ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಕಂಪನಿಯ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಹರೀಶ್ ಕುಮಾರ್ ಮತ್ತು ರಾಕೇಶ್ ಈ ಕಾರ್ಯಗಾರವನ್ನು ನಡೆಸಿಕೊಡಲಿದ್ದಾರೆ ಎಂದು ವಿಭಾಗದ ಮುಖ್ಯಸ್ಥರಾದ ಡಾ ಪ್ರವೀಣ್ ಜೆ ತಿಳಿಸಿದರು.
ಈ ಮೂರು ದಿನಗಳ ಕಾರ್ಯಾಗಾರವು ಮೂರನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿದ್ದು, ಪ್ರಾಯೋಗಿಕ ಜ್ಞಾನವನ್ನು ಕೊಡುವುದಲ್ಲದೆ ಮುಂದೆ ಬರುವ ಕಂಪನಿಗಳ ಸಂದರ್ಶನ ಪ್ರಕ್ರಿಯೆ ಎದುರಿಸಲು ಅನುಕೂಲವಾಗುವುದು ಎಂದು ಕಾಲೇಜಿನ ಪ್ರಾಂಶುಪಾಲರಾದ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಭಾಗದ ಅಧ್ಯಾಪಕರುಗಳು ಮತ್ತು ಕಾರ್ಯಾಗಾರದ ಸಂಯೋಜಕರುಗಳಾದ ಶ್ರೀ ಹರೀಶ್ ಜಿಸಿ, ಶ್ರೀ ಚೇತನ್ ಬಿವಿ, ಶ್ರೀಮತಿ ದೀಪ ಟಿ ಬಹಳ ಅಚ್ಚುಕಟ್ಟಾಗಿ ಉದ್ಘಾಟನಾ ಕಾರ್ಯಕ್ರಮದ ರೂಪುರೇಷೆ ಮತ್ತು ಕಾರ್ಯಗಾರಕ್ಕೆ ಬೇಕಾದ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯ್ ಕುಮಾರ್, ವಿಭಾಗದ ಮುಖ್ಯಸ್ಥರಾದ ಡಾ ಪ್ರವೀಣ್ ಜೆ, ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್, ವಿಭಾಗದ ಎಲ್ಲಾ ಅಧ್ಯಾಪಕ ವರ್ಗದವರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು