ಜಿಎಂಐಟಿ: ಎಐಎಂಎಲ್ ವಿಭಾಗದಿಂದ ಗ್ರೇಪ್ ಅಂಡ್ ಎ ಡಬ್ಲ್ಯೂ ಕೆ ಟೆಕ್ನೋಲಜಿಸ್ ಕಂಪನಿಯೊಂದಿಗೆ ಒಡಂಬಡಿಕೆ
ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ದಿನಾಂಕ ಏಳರಂದು ರಂದು ನಡೆದ ಸಮಾರಂಭದಲ್ಲಿ ಜಿಎಂಐಟಿ ಕಾಲೇಜಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷೀನ್ ಲರ್ನಿಂಗ್ ವಿಭಾಗವು ಗ್ರೇಪ್ ಅಂಡ್ ಎ ಡಬ್ಲ್ಯೂ ಕೆ ಟೆಕ್ನೋಲಜಿಸ್ ಕಂಪನಿಯೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಭಾಗದ ಮುಖ್ಯಸ್ಥರಾದ ಶ್ರೀ ಕೀರ್ತಿಪ್ರಸಾದ್ ಮಾತನಾಡಿ, ಈ ಒಡಂಬಡಿಕೆಯಿಂದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ, ಕೈಗಾರಿಕಾ ತರಬೇತಿ, ಸಂಶೋಧನಾ ಅಭಿವೃದ್ಧಿ, ಇಂಟರ್ನ್ಶಿಪ್ ಮತ್ತು ಉದ್ಯೋಗಾಧಾರಿತ ಚಟುವಟಿಕೆಗಳನ್ನು ನಡೆಸಲು ಈ ಒಪ್ಪಂದವು ಸಹಕಾರಿಯಾಗಿದೆ ಎಂದು ತಿಳಿಸಿದರು.ಇದುವರೆಗೂ ಜಿಎಂಐಟಿ ಕಾಲೇಜು ಒಟ್ಟು 85 ಕಂಪನಿಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಮತ್ತು ಅಧ್ಯಾಪಕರುಗಳ ಏಳಿಗೆಗೆ ಇವುಗಳು ಸಹಕಾರಿಯಾಗಲಿವೆ ಎಂದು ಕಾಲೇಜಿನ ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ಹೇಳಿದರು.
ಇದೇ ವೇಳೆ ಕಾಲೇಜಿನ ಆಡಳಿತ ಅಧಿಕಾರಿ ಶ್ರೀ ವೈ ಯು ಸುಭಾಶ್ಚಂದ್ರ, ವಿಭಾಗದ ಅಧ್ಯಾಪಕರುಗಳಾದ ಆಶಾ ಕೆ, ಕಾವ್ಯ ಎನ್ ಸಿ, ಮತ್ತು ಕಂಪನಿಯ ವತಿಯಿಂದ ಹಿರಿಯ ತಾಂತ್ರಿಕ ಸಲಹೆಗಾರರು ಮತ್ತು ಮ್ಯಾನೇಜರ್ ಶ್ರೀ ಚಂದ್ರಶೇಖರ್ ಎಂ ವಿ, ಸತೀಶ್ ಎಸ್ ಮುಂತಾದವರುಗಳು ಉಪಸ್ಥಿತರಿದ್ದರು.