ಜಿಎಂಐಟಿ: “ಜನೆಲಿಕ್ಸ್” ಉದ್ಘಾಟನಾ ಸಮಾರಂಭ

ದಾವಣಗೆರೆ: ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದ ಫೋರಂ “ಜನೆಲಿಕ್ಸ್” ಉದ್ಘಾಟನಾ ಸಮಾರಂಭವನ್ನು ದಿನಾಂಕ 18ನೇ ಗುರುವಾರದಂದು ವಿಭಾಗದ ಸಭಾಂಗಣದಲ್ಲಿ ಹಮ್ಮಿ ಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಎಸ್. ಶಿಶುಪಾಲ, ಮುಖ್ಯಸ್ಥರು ಮೈಕ್ರೋಬಯಾಲಜಿ ವಿಭಾಗ, ದಾವಣಗೆರೆ ವಿಶ್ವವಿದ್ಯಾಲಯ, ಇವರು ದೀಪ ಬೆಳಗಿಸುವುದರ ಮೂಲಕ ಫೋರಂ ಉದ್ಘಾಟಿಸಿದರು. ನಂತರ ಮಾತನಾಡಿ,ವಿದ್ಯಾರ್ಥಿಗಳು ಸ್ವಯಂ ಕಲಿಕಾ ವಿಧಾನದಿಂದ ಹಲವು ವಿಚಾರಗಳನ್ನು ತಿಳಿದುಕೊಳ್ಳಬೇಕಾಗಿದೆ. ತಮ್ಮ ಮುಂದಿನ ವೃತ್ತಿಜೀವನದ ಬಗ್ಗೆ ಚಿಂತಿಸಿ, ಅದನ್ನು ಸಾಕಾರ ಗೊಳಿಸಬೇಕಾಗಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ್ ರವರು ಮಾತನಾಡಿ, ಬಯೋಟೆಕ್ನಾಲಜಿ ವಿಭಾಗದಲ್ಲಿ ಹಲವು ಸಂಶೋಧನೆಗಳ ಮೂಲಕ ಉಪಯುಕ್ತ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವಂತಹ ಪವಾಡವನ್ನು ಮಾಡಬಹುದಾಗಿದೆ ಎಂದು ತಿಳಿಹೇಳಿದರು.
ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ರವರು ಮಾತನಾಡಿ, ಬಯೋಟೆಕ್ನಾಲಜಿ ಪದವೀಧರರಿಗೆ ಕೈಗಾರಿಕೆ ವಲಯದಲ್ಲಿ ಅದರಲ್ಲೂ ಉತ್ಪನ್ನ ಮತ್ತು ಮಾರುಕಟ್ಟೆ ಹಾಗೂ ಸಂಶೋಧನೆಗಳಲ್ಲಿ ಹಲವು ಅವಕಾಶಗಳಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಜಿಎಂಐಟಿ ಸುತ್ತಮುತ್ತ ಬಯೋಟೆಕ್ನಾಲಜಿ ಗೆ ಸಂಬಂಧಪಟ್ಟ ಹಲವು ಕೈಗಾರಿಕೆಗಳಿದ್ದು, ಉದ್ಯೋಗ, ಇಂಟರ್ನ್ಶಿಪ್, ಕೈಗಾರಿಕಾ ಭೇಟಿಗಳನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.
ಇದೇ ವೇಳೆ ವಿಭಾಗದ ಮುಖ್ಯಸ್ಥರಾದ ಡಾ ಪ್ರಕಾಶ್ ಕೆ ಕೆ ರವರು ಜೆನೆಟಿಕ್ಸ್ ಫೋರಂನ ರೂಪುರೇಷೆಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಸಿಮ್ರಾನ್ ಮತ್ತು ಶ್ರೀಹರಿ, ಸ್ವಾಗತ ಭಾಷಣವನ್ನು ಮೇಘನಾ, ಪ್ರಾರ್ಥನೆಯನ್ನು ಚಂದನ ಮತ್ತು ಜೀವಿತ ತಂಡದವರಿಂದ ಹಾಗೂ ವಂದನಾರ್ಪಣೆಯನ್ನು ಪ್ರಾಧ್ಯಾಪಕರಾದ ಶ್ರೀ ಗಣೇಶ್ ಟಿ ನೆರವೇರಿಸಿಕೊಟ್ಟರು.