Gmit MBA Scholarship: ಎಂ.ಬಿ.ಎ ವಿದ್ಯಾರ್ಥಿಗಳಿಗೆ ಜಿ. ಎಂ. ಐ. ಟಿ. ಮಹಾ ವಿದ್ಯಾಲಯದಿಂದ ಶಿಷ್ಯವೇತನ
ದಾವಣಗೆರೆ:ನಗರದ ಪ್ರತಿಷ್ಠಿತ ಜಿ. ಎಂ. ಐ. ಟಿ. ಮಹಾವಿದ್ಯಾಲಯದಲ್ಲಿ ಎಂ. ಬಿ.ಎ ಪ್ರಥಮ ವರ್ಷದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣಾ ಸಮಾರಂಭ ಎಂ. ಬಿ.ಎ ಸಭಾಂಗಣದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಪ್ರೊ. ವೈ. ವಿಜಯಕುಮಾರ್ ರವರು ವಹಿಸಿದ್ದರು. ಮುಖ್ಯಅಥಿತಿಗಳಾಗಿ ಜಿ. ಎಂ. ಐ. ಟಿ. ಮಹಾವಿದ್ಯಾಲಯದ ಆಡಳಿತಾಧಿಕಾರಿಗಳಾದ ಶ್ರೀ. ವೈ. ಯು. ಸುಭಾಶ್ಚಂದ್ರ ರವರು ಆಗಮಿಸಿದ್ದರು.
ಪ್ರತಿವರ್ಷವೂ ಜಿ. ಎಂ. ಐ. ಟಿ.. ಎಂ. ಬಿ.ಎ ವಿಭಾಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಎಂ. ಬಿ.ಎ – ಪಿ ಜಿ ಸಿ ಈ ಟಿ ಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ಪರೀಕ್ಷಾ ತರಬೇತಿಯನ್ನು ನೀಡುತ್ತದೆ. ಈ ವರ್ಷ ಸುಮಾರು 1೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿಗೆ ನೋಂದಾಯಿಸಿದ್ದರು. ತರಬೇತಿಯ ಮೂಲಕ ಜಿ. ಎಂ. ಐ. ಟಿ.. ಎಂ. ಬಿ.ಎ ವಿಭಾಗಕ್ಕೆ ಸೇರಿರುವ ಅರ್ಹ 7 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮಹಾವಿದ್ಯಾಲಯದ ಮುಖಾಂತರ ತಲಾ 10,000/- ರೂ ಚೆಕ್ ಅನ್ನು ಮಹಾವಿದ್ಯಾಲಯದ ಆಡಳಿತಾಧಿಕಾರಿಗಳಾದ ಶ್ರೀ. ವೈ. ಯು. ಸುಭಾಶ್ಚಂದ್ರ ಹಾಗು ಪ್ರಾಂಶುಪಾಲರಾದ ಪ್ರೊ. ವೈ. ವಿಜಯಕುಮಾರ್ ರವರು ವಿತರಿಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ಮಹಾವಿದ್ಯಾಲಕ್ಕೆ ಹೆಸರು ತನ್ನಿ ಎಂದು ಹಾರೈಸಿದರು .ಎಂ. ಬಿ.ಎ ವಿಭಾಗದ ನಿರ್ದೇಶಕರಾದ ಪ್ರೊ. ಬಿ. ಬಕ್ಕಪ್ಪ ವಿದ್ಯಾರ್ಥಿಗಳು ವಿಭಾಗದಲ್ಲಿನ ಗ್ರಂಥಾಲಯದ ಸೌಲಭ್ಯವನ್ನು ಹೆಚ್ಚಿನ ರೀತಿಯಲ್ಲಿ ಉಪಯೋಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದರು. ವಿದ್ಯಾರ್ಥಿಗಳ ಪಾಲಕರು ಸಹ ವಿದ್ಯಾರ್ಥಿಗಳ ಪಾಲಕರು ಸಹ ಉಪಸ್ಥಿತರಿದ್ದು ತಮ್ಮ ಸಂತೋಷ ವ್ಯಕ್ತಪಡಿಸಿದರು. ಡಾ. ಗುರುರಾಜ್ ಫಾಟಕ್ ನಿರೂಪಿಸಿದರು, ಎಂ. ಬಿ.ಎ ವಿಭಾಗದ ಮುಖ್ಯಸ್ಥರಾದ ಡಾ. ಮಂಜುನಾಥ. ಬಿ. ಆರ್. ವಂದಿಸಿದರು.