Goals: ವಿದ್ಯಾರ್ಥಿಗಳಿಗೆ ಜೀವನದಲ್ಲಿ‌ ಗುರಿ ಮುಖ್ಯ; ಸಕ್ಷಮ ಸಮಾರೋಪದಲ್ಲಿ ಸಂವಾದ ನಡೆಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

IMG-20250412-WA0012

ದಾವಣಗೆರೆ; (Goals) ವಿದ್ಯಾರ್ಥಿಗಳಿಗೆ ಜೀವನದಲ್ಲಿ ಗುರಿ ಇರುವುದು ಮುಖ್ಯ ಅದರ ಜೊತೆ ಜೀವನದಲ್ಲಿ ಯಾವುದೇ ಅಡೆತಡೆಗಳು ಬಂದರೂ ಅದನ್ನು ಸಮರ್ಥವಾಗಿ ಎದುರಿಸುವ ಛಲ ಇರಬೇಕು.

ಸಾಧನೆ ಒಂದೇ ಕ್ಷೇತ್ರದಲ್ಲಿ ಮಾಡಬೇಕು ಎಂಬುದಲ್ಲ ಏನೇ ಬಂದರೂ ಮುನ್ನುಗ್ಗುವ ಧೈರ್ಯ‌ ಇರಬೇಕು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ನೂತನ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಖಾಸಗಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘ ಮತ್ತು ಜಿಲ್ಲಾ ಪಂಚಾಯತ್,ಪದವಿ ಪೂರ್ವ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಸಕ್ಷಮ’ ಸರ್ಕಾರಿ ಹಾಗೂ ಅನುದಾನಿತ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಕೆಸಿಇಟಿ ಮತ್ತು ನೀಟ್ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಂಸದರು ವಿದ್ಯಾರ್ಥಿಗಳಿಗೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಬೇಕು.ಶೇ ೧೦೦ ರಷ್ಟು ಶ್ರಮ ಹಾಕಿದಾಗ ನೀವು ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ ಎಂದು ಬುದ್ದಿಮಾತು ಹೇಳಿದರು.ಪರೀಕ್ಷೆಯಲ್ಲಿ ಸಮಯ ನಿರ್ವಹಣೆ ಮುಖ್ಯ ಈ ಬಗ್ಗೆ ಗಮನಹರಿಸಬೇಕು ಈ ನಿಟ್ಟಿನಲ್ಲಿ ಸಕ್ಷಮ ತರಬೇತಿ ಉಪಯುಕ್ತವಾಗಿದೆ ಹಾಗೂ ದೈನಂದಿನ ಚಟುವಟಿಕೆಗಳಲ್ಲಿ ಇಲ್ಲಿ ಕಲಿತುಕೊಂಡ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಸಾಧ್ಯ ಎಂದರು.

ವಿದ್ಯಾರ್ಥಿಗಳ ಯಶಸ್ಸಿನಲ್ಲಿ ನಮ್ಮ ಸಕ್ಷಮದ ಯಶಸ್ಸು ನಮ್ಮ ಯಶಸ್ಸು ಅಡಗಿದೆ ಎಂದರು.ಮಕ್ಕಳು ಪರೀಕ್ಷೆ ಬರೆಯುವ ಮುನ್ನ ಮನಸ್ಸನ್ನು ಶಾಂತರೀತಿಯಲ್ಲಿಟ್ಟುಕೊಳ್ಳಬೇಕು ಆಗ ಅಭ್ಯಾಸ ಮಾಡಿದ ಅಂಶಗಳು ನೆನಪಿನಲ್ಲಿರುತ್ತದೆ ಸಕ್ಷಮದ ಮೂಲಕ ಉತ್ತಮ‌ ತರಬೇತಿ ‌ನೀಡಲಾಗಿದೆ ವಿದ್ಯಾರ್ಥಿಗಳು ಪರೀಕ್ಷೆ ಯಲ್ಲಿ ಉತ್ತಮ‌ ಅಂಕಗಳಿಸುವ ಮೂಲಕ ನಮ್ಮ ಶ್ರಮ ಸಾರ್ಥಕಗೊಳಿಸಬೇಕು.ಸಿಇಟಿ,ನೀಟ್ ಹಾಗೂ ಜೆಇಇ ಪರೀಕ್ಷೆ ಯಾವರೀತಿ ಬರೆಯಬಹುದು ಎಂದು ಶಿಕ್ಷಣ ತಜ್ಞರಾದ ಚೇತನ್ ರಾಂ ಅವರು ಈಗಾಗಲೇ ತಮ್ಮ ನುಡಿಗಳ ಮೂಲಕ ಹುರಿದುಂಬಿಸಿದ್ದಾರೆ ಇದು ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯೋಗವಾಗಿದೆ.


ಪರೀಕ್ಷೆ ಇನ್ನೇನು ಸಮೀಪಿಸುತ್ತಿದೆ ಸಕ್ಷಮದ ಮೂಲಕ‌ನೀಡಿರುವ ತರಬೇತಿಯ ಮನನ ಮಾಡಿಕೊಳ್ಳಬೇಕು. ಸಮಯ ನಿರ್ವಹಣೆ ಕೂಡ ಪರಿಪಾಲನೆ ಮಾಡಿಕೊಳ್ಳಬೇಕು . ಚೆನ್ನಾಗಿ ನಿದ್ದೆ ಮಾಡಬೇಕು ಹಾಗೂ ಬೇಸಿಗೆ ಕಾಲವಾದ್ದರಿಂದ ಚೆನ್ನಾಗಿ ನೀರು ಕುಡಿಯಬೇಕು ಆರೋಗ್ಯ ಉತ್ತಮವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು. ಪರೀಕ್ಷೆಯಲ್ಲಿ ಬರವಣಿಗೆ ಉತ್ತಮವಾಗಿರಲಿ‌.ಜೀವನದಲ್ಲಿ‌ ಒಂದೇ ಗುರಿಯಲ್ಲ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸಲು ಸಿದ್ದರಾಗಿರಬೇಕುಆಶಾವಾದಿಗಳಾಗಿರಬೇಕು.ನಿಮ್ಮ‌ಶೈಕ್ಷಣಿಕ ಜೀವನದ ನಂತರವೂ ನಿಮ್ಮ‌ಕಾಲೇಜಿನ‌ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಮಕ್ಕಳ ಅನಿಸಿಕೆಗಳನ್ನು ಆಲಿಸಿ ಅವರ ಅಭಿಪ್ರಾಯ ಪಡೆದರು. ದೈನಂದಿನ ದಿನಚರಿ ಹಾಗೂ ವಿದ್ಯಾಭ್ಯಾಸದ ಬಗ್ಗೆ ಮಾಹಿತಿ ಪಡೆದುಕೊಂಡರು ಹಾಗೂ ಸಕ್ಷಮದ ಪ್ರಯೋಜನದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಇದೇ ಸಂದರ್ಭದಲ್ಲಿ 2024-25ನೇ ಸಾಲಿನ ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದ ದಾವಣಗೆರೆ ಜಿಲ್ಲಾ ಟಾಪರ್ಸ್ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಜಿಪಂ ಸಿಇಓ ಡಾ. ಸುರೇಶ್ ಬಿ ಇಟ್ನಾಳ್, ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ಜಿ. ಕರಿಸಿದ್ದಪ್ಪ, ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಶ್ರೀಧರ್ ನಗರದ ವಿವಿಧ ಕಾಲೇಜುಗಳ ಮುಖ್ಯಸ್ಥರಾದ ಡಾ. ಡಿ.ಎಸ್. ಜಯಂತ್, ವೀರೇಶ್ ಪಟೇಲ್,ಡಾ.ಜಿ.ಎನ್.ಹೆಚ್. ಕುಮಾರ್, ವೈ.ವಿ. ವಿನಯ್, ಕೆ.ಎಂ. ಮಂಜಪ್ಪ, ಡಾ. ಎ. ತಿಮ್ಮಾರೆಡ್ಡಿ, ಎನ್.ಸಿ. ಪ್ರಶಾಂತ್, ನಾಡಗೌಡರು,ಪ್ರಸಾದ್ ಬಂಗೇರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!