gold; ಅಸಲಿ ಎಂದು ನಕಲಿ ಬಂಗಾರ ನೀಡಿ ವಂಚನೆ; ಇಬ್ಬರು ಆರೋಪಿಗಳ ಬಂಧನ

ದಾವಣಗೆರೆ, ಅ.6: ಅಸಲಿ ಬಂಗಾರ ಎಂದು ನಕಲಿ ಬಂಗಾರ (gold) ನೀಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ 40 ಲಕ್ಷ ರೂ. ಮೋಸ ಮಾಡಿದ್ದ ಇಬ್ಬರು ಅಂತರ್ ಜಿಲ್ಲಾ ಆರೋಪಿಗಳನ್ನು ಚನ್ನಗಿರಿ ಪೊಲೀಸರು ಬಂಧಿಸಿದ್ದಾರೆ.

ಹರಪನಹಳ್ಳಿ ತಾಲ್ಲೂಕಿನ ಪಾವನಪುರದ ಸಂದೀಪ, ಮತ್ತು ಇದೇ ತಾಲೂಕಿನ ಈಶ್ವರಪ್ಪ ಬಂಧಿತ ಆರೋಪಿಗಳು.

ದೇವನಹಳ್ಳಿ ತಾಲ್ಲೂಕಿನ ಗೋವರ್ಧನ್ ಎನ್ನುವವರಿಗೆ ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರ ನೀಡಿ 40 ಲಕ್ಷ ರೂ ಕಿತ್ತುಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ಬಸರಗಿ, ಚನ್ನಗಿರಿ ಉಪ ವಿಭಾಗದ ಉಪಾಧೀಕ್ಷಕ ಪ್ರಶಾಂತ್ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪಿಎಸ್ಐ ನಿರಂಜನ್ ನೇತೃತ್ವದ ತಂಡ ಸಂದೀಪ ಮತ್ತು ಈಶ್ವರಪ್ಪ ಅವರನ್ನು ಬಂಧಿಸಿ ಮೋಸ ಮಾಡಿದ್ದ 40 ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ.

Scientist; ದಾವಣಗೆರೆ ವಿವಿಯಿಂದ 4 ವಿಜ್ಞಾನಿಗಳು ವಿಶ್ವವಿಜ್ಞಾನಿ ಪಟ್ಟಿಗೆ ಸೇರ್ಪಡೆ

ಘಟನೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಮೂಲದ ಗುತ್ತಿಗೆದಾರರಿಗೆ ಅನಾಮಧೇಯ ವ್ಯಕ್ತಿ ಕರೆಮಾಡಿ ಪರಿಚಯ ಮಾಡಿಕೊಂಡು ನಮ್ಮ ಮನೆಯ ಪಕ್ಕದಲ್ಲಿ ಪಾಯ ತೆಗೆಯುವಾಗ ಹಳೆ ಕಾಲದ ಬಂಗಾರದ ಬಿಲ್ಲೆಗಳು ಸಿಕ್ಕಿವೆ ಎಂದು ನಂಬಿಸಿ ಒಂದು ಚಿನ್ನದ ನಾಣ್ಯ ನೀಡಿ ನಂಬಿಸಿದ್ದರು. ಮೊದಲು 2.5 ಕೆಜಿಗೆ 60 ಲಕ್ಷ ಎಂದು ಹೇಳಿದ್ದರು. ಪಿರ್ಯಾದಿ ಹಣ ನೀಡಿ ಬಂಗಾರ ನಕಲಿ ಎಂದು ಗೊತ್ತಾದಾಗ ಚನ್ನಗಿರಿ ಪೊಲೀಸ್ ಠಾಣೆಗೆ ದೂರು‌ ನೀಡಿದರು.

ಆರೋಪಿಗಳನ್ನು ಬಂಧಿಸುವಲ್ಲಿ ಪಿಎಸ್ಐ ಗುರುಶಾಂತಯ್ಯ, ಎಎಸ್ಐ ಶಶಿಧರ್, ಸಂತೆಬೆನ್ನೂರು ವೃತ್ತ ಕಚೇರಿಯ ಹೆಡ್ ಕಾನ್ಸಟೇಬಲ್ ರುದ್ರೇಶ್, ಸಿಬ್ಬಂದಿಗಳಾದ ಬೀರೇಶ್ವರ, ನರೇಂದ್ರಸ್ವಾಮಿ, ಚಂದ್ರಚಾರಿ, ರೇವಣಸಿದ್ದಪ್ಪ ಅವರ ತಂಡ ಭಾಗಿಯಾಗಿತ್ತು. ಈ ಪೊಲೀಸ್ ತಂಡವನ್ನು ಜಿಲ್ಲಾ ಎಸ್ಪಿ ಉಮಾಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!