ಕಷ್ಟ ಪಡದೇ ಬರೋಬ್ಬರಿ 5.75 ಲಕ್ಷ ಮೌಲ್ಯದ ಬಂಗಾರ ಎಗರಿಸಿದ ಕಿಲಾಡಿಚೋರ್.!

ದಾವಣಗೆರೆ: ನಗರದ ಬೆಳ್ಳೂಡಿ ಗಲ್ಲಿಯಲ್ಲಿರುವ ನ್ಯೂ ಷಾ ವರದಿಚಂದ ಮಾಂಗಿಲಾಲ್ ಜ್ಯುಯಲರ್ಸ್ ಮಾಲೀಕನಿಗೆ ದುಷ್ಕರ್ಮಿಯೊಬ್ಬ ಬರೋಬ್ಬರಿ 5.76 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚನೆ ನಡೆಸಿರುವ ಘಟನೆ ನಡೆದಿದೆ.
ಪಕ್ಕದ ಕುಲದೇವಿ ಬಂಗಾರದ ಅಂಗಡಿಯೊಂದಿಗೆ ವ್ಯವಹಾರ ಇಟ್ಟುಕೊಂಡಿದ್ದ ಜ್ಯೂಯಲರಿ ಮಾಲೀಕನಿಗೆ ಅದೇ ಅಂಗಡಿಯ ಹೇಸರೇಳಿಕೊಂಡು ಕರೆ ಮಾಡಿದ ವ್ಯಕ್ತಿಯೋರ್ವ ಕೂಡಲೇ ಐದು ನೆಕ್ಲೆಸ್ ಗಳನ್ನು ನೀಡಿ ಗ್ರಾಹಕರು ಬಂದಿದ್ದಾರೆ ಎಂದು ತಿಳಿಸಿದ್ದಾನೆ.
ಇದನ್ನು ನಂಬಿದ ಅಂಗಡಿ ಮಾಲೀಕ 5.76 ಲಕ್ಷ ರೂ., ಮೌಲ್ಯದ ಸುಮಾರು 138.910 ಗ್ರಾಂ ತೂಕದ ಚಿನ್ನಾಭರಣವನ್ನು ಕೊಟ್ಟು ಕಳುಹಿಸಿದ್ದಾರೆ.
ಅದೇ ನಂಬರ್ ಗೆ ಪುನಃ ಕರೆ ಮಾಡಿದಾಗ ಅತ್ತಲಿನಿಂದ ರಾಂಗ್ ನಂಬರ್ ಎಂಬ ಉತ್ತರ ಬಂದಿದ್ದು, ದಂಗಾದ ಮಾಲೀಕ ಕುಲದೇವಿ ಅಂಗಡಿಯವರ ಮೊಬೈಲ್ ಗೆ ಫೋನಾಯಿಸಿದಾಗ ಅವರು ಆಭರಣ ತರಲು ನಾವು ಯಾರನ್ನು ಕಳುಹಿಸಿಯೇ ಇಲ್ಲ ಎಂಬ ಉತ್ತರ ನೀಡಿದ್ದಾರೆ.
ತಕ್ಷಣ ಎಚ್ಚೆತ್ತ ಅವರು, ತಮ್ಮ ಅಂಗಡಿಯ ಹುಡುಗರನ್ನು ಕಳಿಸಿ ನೆಕ್ಲೆಸ್ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯ ಹುಡುಕಾಟಕ್ಕೆ ಮುಂದಾಗಿದ್ದಾರೆ. ಆದರೆ, ಆತ ಅಲ್ಲಿಗಾಗಲೇ ಎಸ್ಕೇಪ್ ಆಗಿದ್ದು, ನ್ಯಾಯಕ್ಕಾಗಿ ಇಲ್ಲಿನ ಬಸವನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.