ಸರ್ಕಾರಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ ಹವನ: ಕ್ರಮ ಜರುಗಿಸಲು ಹಿಂದೆಟ್ಯಾಕೆ..? ಅಂತಿದ್ದಾರೆ ಸಾರ್ವಜನಿಕರು
![Renukacharya_voilates_epidemic_act_homa_havana[1]](https://garudavoice.com/wp-content/uploads/2021/06/Renukacharya_voilates_epidemic_act_homa_havana1.jpg)
ದಾವಣಗೆರೆ: ಶಾಸಕ ರೇಣುಕಾಚಾರ್ಯ ಕಳೆದ ಶುಕ್ರವಾರ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೋಮ ಹವನ ಮಾಡಿದ್ದರು, ಈ ಹಿನ್ನೆಲೆ ತಾಲೂಕು ಆಡಳಿತದಿಂದ ಪ್ರಕರಣ ದಾಖಲಿಸುವ ಸಾಧ್ಯತೆ ಹೆಚ್ಚಾಗಿದೆ, ಕರೊನಾ ನಿರ್ಮೂಲನೆಗಾಗಿ ಪತ್ನಿಯೊಂದಿಗೆ ಮೃತ್ಯುಂಜಯ, ಧನ್ವಂತರಿ ಹೋಮವನ್ನ ರೇಣುಕಾಚಾರ್ಯ ನಡೆಸಿದ್ದರು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಶನಿವಾರ ಸುದ್ದಿ ಗೋಷ್ಠಿಯಲ್ಲಿ ಮಾಹಿತಿ ನೀಡಿ,ಕಾನೂನು ಎಲ್ಲರಿಗೂ ಒಂದೇ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ರೆ, ಐಪಿಸಿ, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆ ಅಡಿ ಶಾಸಕ ರೇಣುಕಾಚಾರ್ಯ ವಿರುದ್ಧ ಪ್ರಕರಣ ದಾಖಲಿಸಲು ಹೊನ್ನಾಳಿ ತಹಸೀಲ್ದಾರ್‌ಗೆ ಸೂಚನೆ ನೀಡಿದ್ದೆವೆ ಎಂದಿದ್ದಾರೆ. ಹೊನ್ನಾಳಿ ತಹಸೀಲ್ದಾರ್ ಬಸವನಗೌಡರಿಂದ ಶಾಸಕ ರೇಣುಕಾಚಾರ್ಯಗೆ ನೋಟೀಸ್ ನೀಡಿ ಕಾನೂನು ಕ್ರಮ ಜರುಗುಲಿಸಲು ಹೆಳಿದ್ದೆನೆ ಎಂದು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾಹಿತಿ ನೀಡಿದ್ರು.
ಶಾಸಕ ರೇಣುಕಾಚಾರ್ಯಗೆ ನೊಟೀಸ್ ನೀಡಲು ಹಿಂದೆಟು ಹಾಕುತ್ತಿರುವ ತಹಸೀಲ್ದಾರ್ :
ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್‌ನಲ್ಲಿ ಶಾಸಕ ರೇಣುಕಾಚಾರ್ಯ ಹೋಮ ನಡೆಸಿದ ವಿಚಾರಕ್ಕೆ ಹೊನ್ನಾಳಿ ತಹಸೀಲ್ದಾರ್ ನೋಟೀಸ್ ನೀಡಿದ್ದು ಶಾಸಕ ರೇಣುಕಾಚಾರ್ಯಗೆ ಅಲ್ಲ ಎಂಬ ಸತ್ಯ ಇದೀಗ ಗೊತ್ತಾಗಿದೆ, ನೋಟೀಸ್ ನೀಡಿದ್ದು, ಕೋವಿಡ್ ಕೇರ್ ಸೆಂಟರ್‌ನ ನೋಡಲ್ ಅಧಿಕಾರಿಗೆ ಬಿಟ್ರೆ ಇದುವರೆಗೂ ರೇಣುಕಾಚಾರ್ಯ ನೋಟಿಸ್ ನೀಡಿಲ್ಲ. ಜಿಲ್ಲಾಧಿಕಾರಿ ಹೇಳ್ತಾರೆ ಶಾಸಕರಿಗೆ ಎಪಿಡೆಮಿಕ್ ಹಾಗೂ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕಾಯ್ದೆ ಅಡಿ ನೋಟಿಸ್ ನೀಡಿ ಎಂದು ಹೊನ್ನಾಳಿ ತಹಸೀಲ್ದಾರ್ ಸೂಚನೆ ನೀಡಲಾಗಿದೆ ಅಂತಾರೆ. ಆದ್ರೆ ತಹಸೀಲ್ದಾರ ಬಸವನಗೌಡ ಕೊಟೂರು ಹೇಳ್ತಾರೆ ಜನಪ್ರತಿನಿಧಿಗಳಿಗೆ ನೊಟೀಸ್ ಕೊಡಬೇಕೋ ಬೇಡವೋ ವಿಚಾರಿಸಬೇಕು ಅಂತಾರೆ. ಇದಕ್ಕೂ ಮೊದಲು ಕೋವಿಡ್ ಕೇರ್ ಸೆಂಟರ್‌ನ ನೋಡಲ್ ಅಧಿಕಾರಿಗೆ ನೊಟೀಸ್ ನೀಡಿದ್ದೇನೆ,ಅವರ ವರದಿ ಆಧರಿಸಿ ಕ್ರಮ ಜರುಗಿಸುತ್ತೇವೆ ಅಂತಾರೆ ಹೊನ್ನಾಳಿ ತಹಸೀಲ್ದಾರ್. ಅಲ್ಲದೆ ನನಗೆ ಜಿಲ್ಲಾಧಿಕಾರಿ ಅವರು ನೀಡಿದ ನೊಟೀಸ್‌ಗೆ ಉತ್ತರ ನೀಡಿದ್ದೇನೆ, ಕೋವಿಡ್ ಕೇರ್ ಸೆಂಟರ್ ನೋಡಲ್ ಅಧಿಕಾರಿ ನೀಡಿದ ವರದಿ ಆಧರಿಸಿ ಕಾನೂನು ಕ್ರಮ ಕೈಗೊಳ್ಳುತ್ತೆವೆ ಅಂತಾರೆ ತಹಸೀಲ್ದಾರ್ ಬಸವನಗೌಡ ಕೊಟೂರು. ಸಧ್ಯ ಹೋಮದ ಘಟನೆ ನಡೆದು 48 ಗಂಟೆ ಸಮಯ ಕಳೆದಿದೆ,ಹೋಮ ನಡೆದ ಬಗ್ಗೆ
ಈವರೆಗೂ ವರದಿ ನೀಡಿಲ್ಲ ನೋಡಲ್ ಅಧಿಕಾರಿ, ಅಧಿಕಾರಿಗಳಿಂದ ವರದಿ ಪಡೆಯಲಾಗದ ತಹಸೀಲ್ದಾರ್ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ತಾಲೂಕು ಆಡಳಿತ ಜನಪ್ರತಿನಿಧಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ಸಾಧ್ಯತೆ ಇದೆ ಅಲ್ಲದೆ, ಅಧಿಕಾರಿಗಳು ಉಳ್ಳವರಿಗೆ ಒಂದು ನ್ಯಾಯ, ಸಾಮಾನ್ಯರಿಗೆ ಮತ್ತೊಂದು ನ್ಯಾಯ ಎಂಬುದು ಗೊತ್ತಾಗುತ್ತೆದೆ ಎಂದು ಸಾರ್ವಜನಿಕ ವಲಯದಲ್ಲಿ ಪಿಸುಮಾತುಗಳು ಕೇಳಿಬರುತ್ತಿದೆ.