ಇಂದಿನಿಂದ ತಮಿಳು ನಾಡು ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ ಕೋವಿಡ್ ಹೆಚ್ಚಳದ ಭೀತಿಯಲ್ಲಿ ಸರ್ಕಾರದ ನಿರ್ಧಾರ

ಇಂದಿನಿಂದ ತಮಿಳು ನಾಡು ಆಸ್ಪತ್ರೆಗಳಲ್ಲಿ ಮಾಸ್ಕ್ ಕಡ್ಡಾಯ ಕೋವಿಡ್ ಹೆಚ್ಚಳದ ಭೀತಿಯಲ್ಲಿ ಸರ್ಕಾರದ ನಿರ್ಧಾರ

ಚೆನ್ನೈ: ಕೋವಿಡ್‌ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಆಸ್ಪತ್ರೆಗಳಲ್ಲಿ ಮಾಸ್ಕ್‌ ಧರಿಸುವುದನ್ನು ತಮಿಳುನಾಡು ಸರ್ಕಾರ  ಶನಿವಾರದಿಂದ ಕಡ್ಡಾಯಗೊಳಿಸಿದೆ.
ಆಸ್ಪತ್ರೆಗಳಿಂದಲೇ ಸೋಂಕು ಆರಂಭವಾಗುತ್ತದೆ. ಹೀಗಾಗಿ ಸುಮಾರು 11,300 ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು, ನರ್ಸ್‌ಗಳು, ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗೆ ಭೇಟಿ ನೀಡುವವರು ಏ.1ರಿಂದ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ’ ಎಂದು ಆರೋಗ್ಯ ಸಚಿವ ಮಾ ಸುಬ್ರಮಣಿಯನ್‌ ತಿಳಿಸಿದ್ದಾರೆ.
ಸದ್ಯ ಒಮೈಕ್ರಾನ್‌ ಉಪ ತಳಿ ಎಕ್ಸ್‌ಬಿಬಿ ಮತ್ತು ಬಿಎ.2 ತಮಿಳುನಾಡಿನಲ್ಲಿ ಮಾತ್ರವಲ್ಲ ಭಾರತ ಸೇರಿದಂತೆ ಜಗತ್ತಿನಾದ್ಯಂತ ಹರಡುತ್ತಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ರಾಜ್ಯದಲ್ಲಿ 123 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ’ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಇತ್ತೀಚಿನ ಸುದ್ದಿಗಳು

error: Content is protected !!