ಜಾನುವಾರು ಸಾಗಿಸುವ ಆರೋಪದಲ್ಲಿ ಇದ್ರಿಸ್ ಪಾಷಾ ಕೊಲೆ ಸರ್ಕಾರದ ವೈಫಲ್ಯ – ಪೀಪಲ್ಸ್ ಲಾಯರ್ಸ್ ಗಿಲ್ಡ್
ದಾವಣಗೆರೆ: ಕನಕಪುರದ ಸಾತನೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಗೂಡ್ಸ್ ವಾಹನದಲ್ಲಿ ಗೋವು ಸಾಗಾಟ ಮಾಡುತ್ತಿದ್ದಾರೆಂದು ಆರೋಪಿಸಿ ಪುನೀತ್ ಕೆರೆಹಳ್ಳಿ ಮತ್ತಿತರರು ಸೇರಿ ಮೂರು ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿ ಮಂಡ್ಯದ ಇದ್ರಿಸ್ ಪಾಷಾ ಎಂಬ ಯುವಕನನ್ನು ಕೊಲೆ ಮಾಡಿರುವುದು ದೇಶ ವಿರೋಧಿ ಹಾಗೂ ಭಯೋತ್ಪಾದನಾ ಕೃತ್ಯವಾಗಿದೆ. ಈ ಘಟನೆಯನ್ನು ಪೀಪಲ್ಸ್ ಲಾಯರ್ಸ್ ಗಿಲ್ಡ್ ತೀವ್ರವಾಗಿ ಖಂಡಿಸುತ್ತದೆ.
ಈ ರೀತಿಯ ಗುಂಪು ಹತ್ಯೆಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಿರುವುದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಘಟನೆಯು ರಾಜ್ಯ ಸರ್ಕಾರದ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ಯಾವುದೋ ಒಂದು ಕಾನೂನು ಬಾಹಿರ ಕೃತ್ಯ ನಡೆದರೆ ಅದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಬದಲಾಗಿ ಯಾವುದೋ ಕೆಲವು ಕೋಮುವಾದಿ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಂಡು ಕಾನೂನುಬಾಹಿರ ಕೆಲಸ ಮಾಡಿದರೂ ಅಂತಹವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳದಿರುವುದೇ ಇಂತಹ ಘಟನೆಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ.
ಸರಕಾರ ಇಂತಹ ಘಟನೆಗಳು ನಡೆದಾಗ ಕ್ರಮ ತೆಗೆದುಕೊಳ್ಳುವ ಬದಲಿಗೆ ” ಆಕ್ಷನ್ ಗೆ ರಿಯಾಕ್ಷನ್ ” ಇರುತ್ತದೆ ಎಂದು ಹೇಳುವುದು ಮತ್ತು ಒಂದೇ ಪ್ರದೇಶದಲ್ಲಿ ಬೇರೆ ಬೇರೆ ಕೋಮಿನ ವ್ಯಕ್ತಿಗಳು ಕೊಲೆಯಾದಾಗ ಒಂದು ಕೋಮಿನ ಜನರನ್ನು ಓಲೈಸಲು ಅವರ ಮನೆಗೆ ಭೇಟಿ ಕೊಟ್ಟು ಇನ್ನೊಂದು ಕೋಮುವಿನ ಮೃತನ ಮನೆಗೆ ಭೇಟಿ ಕೊಡದೆ ಅಸಡ್ಡೆತನ ತೋರಿಸುವ ಸರ್ಕಾರದ ನಡೆಯು ಕೋಮುವಾದಿಗಳಿಗೆ ಇನ್ನೂ ಹೆಚ್ಚಿನ ಪ್ರಚೋದನೆ ನೀಡಿದಂತಾಗುತ್ತದೆ.
ಸರ್ವೋಚ್ಚ ನ್ಯಾಯಾಲಯವು ಪದೇಪದೇ ದ್ವೇಷ ಭಾಷಣಗಳ ಬಗ್ಗೆ ಹಾಗೂ ಕೋಮು ದ್ವೇಷ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಆಯಾ ಸಂದರ್ಭದಲ್ಲಿ ಸರ್ಕಾರಗಳು ತಕ್ಷಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳದೆ ಇರುವುದು ಇದಕ್ಕೆ ಕಾರಣ ಎಂದಿದೆ.
ಈ ಘಟನೆಯನ್ನು ಪೀಪಲ್ಸ್ ಲಾಯರ್ಸ್ ಗಿಲ್ಡ್ ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ತೀರ್ವ ಕ್ರಮ ತೆಗೆದುಕೊಂಡು ತಕ್ಷಣ ಅವರನ್ನು ಬಂಧಿಸಬೇಕು, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ಮೃತ ಇದ್ರೀಸ್ ಪಾಷಾ ರವರ ಕುಟುಂಬಕ್ಕೆ 50 ಲಕ್ಷ ಪರಿಹಾರವನ್ನು ಸರ್ಕಾರ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತದೆ.
ಅನೀಸ್ ಪಾಷಾ,
ವಕೀಲರು, ರಾಜ್ಯ ಸಂಚಾಲಕರು,
ಪೀಪಲ್ಸ್ ಲಾಯರ್ಸ್ ಗಿಲ್ಡ್.
ಕನಕಪುರದ ಸಾತನೂರು ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಗೂಡ್ಸ್ ವಾಹನದಲ್ಲಿ ಗೋವು ಸಾಗಾಟ ಮಾಡುತ್ತಿದ್ದಾರೆಂದು ಆರೋಪಿಸಿ ಪುನೀತ್ ಕೆರೆಹಳ್ಳಿ ಮತ್ತಿತರರು ಸೇರಿ ಮೂರು ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿ ಮಂಡ್ಯದ ಇದ್ರಿಸ್ ಪಾಷಾ ಎಂಬ ಯುವಕನನ್ನು ಕೊಲೆ ಮಾಡಿರುವುದು ದೇಶ ವಿರೋಧಿ ಹಾಗೂ ಭಯೋತ್ಪಾದನಾ ಕೃತ್ಯವಾಗಿದೆ. ಈ ಘಟನೆಯನ್ನು ಪೀಪಲ್ಸ್ ಲಾಯರ್ಸ್ ಗಿಲ್ಡ್ ತೀವ್ರವಾಗಿ ಖಂಡಿಸುತ್ತದೆ.
ಈ ರೀತಿಯ ಗುಂಪು ಹತ್ಯೆಗಳು ನಮ್ಮ ರಾಜ್ಯದಲ್ಲಿ ನಡೆಯುತ್ತಿರುವುದು ತುಂಬಾ ನಾಚಿಕೆಗೇಡಿನ ಸಂಗತಿಯಾಗಿದೆ. ಈ ಘಟನೆಯು ರಾಜ್ಯ ಸರ್ಕಾರದ ವೈಫಲ್ಯತೆಯನ್ನು ಎತ್ತಿ ತೋರಿಸುತ್ತದೆ. ಯಾವುದೋ ಒಂದು ಕಾನೂನು ಬಾಹಿರ ಕೃತ್ಯ ನಡೆದರೆ ಅದರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಬದಲಾಗಿ ಯಾವುದೋ ಕೆಲವು ಕೋಮುವಾದಿ ಸಂಘಟನೆಗಳು ಕಾನೂನನ್ನು ಕೈಗೆತ್ತಿಕೊಂಡು ಕಾನೂನುಬಾಹಿರ ಕೆಲಸ ಮಾಡಿದರೂ ಅಂತಹವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳದಿರುವುದೇ ಇಂತಹ ಘಟನೆಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ.
ಸರಕಾರ ಇಂತಹ ಘಟನೆಗಳು ನಡೆದಾಗ ಕ್ರಮ ತೆಗೆದುಕೊಳ್ಳುವ ಬದಲಿಗೆ ” ಆಕ್ಷನ್ ಗೆ ರಿಯಾಕ್ಷನ್ ” ಇರುತ್ತದೆ ಎಂದು ಹೇಳುವುದು ಮತ್ತು ಒಂದೇ ಪ್ರದೇಶದಲ್ಲಿ ಬೇರೆ ಬೇರೆ ಕೋಮಿನ ವ್ಯಕ್ತಿಗಳು ಕೊಲೆಯಾದಾಗ ಒಂದು ಕೋಮಿನ ಜನರನ್ನು ಓಲೈಸಲು ಅವರ ಮನೆಗೆ ಭೇಟಿ ಕೊಟ್ಟು ಇನ್ನೊಂದು ಕೋಮುವಿನ ಮೃತನ ಮನೆಗೆ ಭೇಟಿ ಕೊಡದೆ ಅಸಡ್ಡೆತನ ತೋರಿಸುವ ಸರ್ಕಾರದ ನಡೆಯು ಕೋಮುವಾದಿಗಳಿಗೆ ಇನ್ನೂ ಹೆಚ್ಚಿನ ಪ್ರಚೋದನೆ ನೀಡಿದಂತಾಗುತ್ತದೆ.
ಸರ್ವೋಚ್ಚ ನ್ಯಾಯಾಲಯವು ಪದೇಪದೇ ದ್ವೇಷ ಭಾಷಣಗಳ ಬಗ್ಗೆ ಹಾಗೂ ಕೋಮು ದ್ವೇಷ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು ಆಯಾ ಸಂದರ್ಭದಲ್ಲಿ ಸರ್ಕಾರಗಳು ತಕ್ಷಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳದೆ ಇರುವುದು ಇದಕ್ಕೆ ಕಾರಣ ಎಂದಿದೆ.
ಈ ಘಟನೆಯನ್ನು ಪೀಪಲ್ಸ್ ಲಾಯರ್ಸ್ ಗಿಲ್ಡ್ ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳ ವಿರುದ್ಧ ತೀರ್ವ ಕ್ರಮ ತೆಗೆದುಕೊಂಡು ತಕ್ಷಣ ಅವರನ್ನು ಬಂಧಿಸಬೇಕು, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಹಾಗೂ ಮೃತ ಇದ್ರೀಸ್ ಪಾಷಾ ರವರ ಕುಟುಂಬಕ್ಕೆ 50 ಲಕ್ಷ ಪರಿಹಾರವನ್ನು ಸರ್ಕಾರ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸುತ್ತದೆ.
ಅನೀಸ್ ಪಾಷಾ, ವಕೀಲರು, ರಾಜ್ಯ ಸಂಚಾಲಕರು,
ಪೀಪಲ್ಸ್ ಲಾಯರ್ಸ್ ಗಿಲ್ಡ್.