ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂಜೆ ಕಾಲೇಜಿಗೆ ಪ್ರವೇಶ ಆರಂಭ: ಡಾ. ಸಾಯಿರಾಬಾನು ಎ ಫರೂಖಿ

ದಾವಣಗೆರೆ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ (ಸಂಜೆ ಕಾಲೇಜು) ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಸೆ. 23 ರಿಂದ ಪ್ರವೇಶ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಪ್ರಾಂಶುಪಾಲರಾದ ಡಾ.ಸಾಯಿರಾಬಾನು ಎ ಫರೂಖಿ ತಿಳಿಸಿದ್ದಾರೆ.
ಬಿ.ಕಾಂ ಮತ್ತು ಬಿ.ಸಿ.ಎ ಕೋರ್ಸಗಳು ಮಾತ್ರವಿದ್ದು, ಪದವಿ ವಿದ್ಯಾರ್ಥಿಗಳಿಗೆ ಅನ್ವಯಿಸುವ ಪ್ರವೇಶ ಶುಲ್ಕ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೂ ಅನ್ವಯಿಸಲಿದೆ. ಹೆಚ್ಚಿನ ಮಾಹಿತಿಗೆ ಕಾಲೇಜಿನ ಡಾ. ಡಿ.ಹೆಚ್ ಮಹಮದ್ ಖಾನ್-9535680786 ಡಾ. ಜೆ.ಎಂ ಮಂಜುನಾಥ 9945973222, ಪತ್ರಾಂಕಿತ ವ್ಯವಸ್ಥಾಪಕ ಎನ್. ಜಗದೀಶ್ 974026583ಕಿವರನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ